ನಿಶ್ಯಬ್ಧಂಗೆ ಪ್ರೇಕ್ಷಕರ ಮಿಶ್ರಪ್ರತಿಕ್ರಿಯೆ

ಭಾರಿ ನೀರಿಕ್ಷೆ ಮೂಡಿಸಿದ್ದ ಅನುಷ್ಕ ಶೆಟ್ಟಿ, ಮಾಧವನ್ ಅಭಿನಯದ ತೆಲುಗಿನಲ್ಲಿ ನಿರ್ಮಾಣಗೊಂಡ ಬಹುಭಾಷ ಸಿನಿಮ ನಿಶ್ಯಬ್ಧಂಗೆ ಜಗತ್ತಿನಾದ್ಯಂತ ಸಿನಿಪ್ರಿಯರು ಮಿಶ್ರ ಪತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಕೋನ ವೆಂಕಟ್ ಬರೆದ ಚಿತ್ರಕಥೆಯನ್ನು ಹೇಮಂತ್ ಮಧುಕರ್ ನಿರ್ದೇಶನ ಮಾಡಿದ್ದರು.

ಟ್ರೇಲರ್ ಮೂಲಕ ಭಾರಿ ಕುತೂಹಲ ಮೂಡಿಸಿದ್ದ ಸಿನಿಮ ಅಕ್ಟೋಬರ್.2 ರಂದು ಅಮೇಜಾನ್ ಪ್ರೈಂನಲ್ಲಿ ಜಗತ್ತಿನಾದ್ಯಂತ ತೆಲುಗು, ತಮಿಳು, ಕನ್ನಡ, ಇಂಗ್ಲಿಷ್ ಭಾಷೆಗಳಲ್ಲಿ ಬಿಡುಗಡೆಯಾಗಿತ್ತು. ನಿಶ್ಯಬ್ಧಂ ಸಿನಿಮಕ್ಕೆ ಪ್ರೇಕ್ಷಕರ ಅಭಿಪ್ರಾಯ ಆಧರಿಸಿ ಐಎಂಡಿಬಿ (ಇಂಟರ್‌ನೆಟ್ ಮೂವಿ ಡೆಟಾಬೇಸ್) 10ಕ್ಕೆ 3.8 ಅಂಕ ನೀಡಿದೆ.

ವಿವಿಧ ಸಾಮಾಜಿಕ ಮಧ್ಯಮಗಳಲ್ಲಿ ಪ್ರೇಕ್ಷಕರು ಸಿನಿಮ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಿ ಚಿತ್ರ ನೀರಿಕ್ಷೆ ಮಾಡಿದಂತಿಲ್ಲ. ಸಮಾನ್ಯ ಕ್ರೈಂ ಥ್ರಿಲ್ಲರ್‌ನಲ್ಲಿ ಇದೊಂದು ಎಂದಿದ್ದಾರೆ. ಹಲವಾರು ಮಂದಿ ಚಿತ್ರದ ಬಗ್ಗೆ ಉತ್ತಮ ಅಭಿಪ್ರಾಯ ವ್ಯಕ್ತ ಪಡಿಸಿದ್ದು, ಇದೊಂದು ಗುಣಮಟ್ಟದ ಅತ್ಯುತ್ತಮ ಕ್ರೈಂ ಥ್ರಿಲ್ಲರ್ ಸಿನಿಮವಾಗಿದೆ ಎಂದು ಬಣ್ಣಿಸಿದ್ದಾರೆ.

ಭಾಗಮತಿ ಸಿನಿಮ ನಂತರ ಎರಡು ವರ್ಷ ಬಳಿಕ ಅನುಷ್ಕ ಅವರ ಸಿನಿಮಕ್ಕೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದರು. ಸಿನಿಮದಲ್ಲಿ ಮಾಧವನ್, ಅನುಷ್ಕ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅನುಷ್ಕ ಅವರು ಚಿತ್ರದಲ್ಲಿ ಮಾತು ಬಾರದ, ಕಿವಿ ಕೇಳದ ಪಾತ್ರದಲ್ಲಿ ನಟಿಸುವ ಮೂಲಕ ವಿಭಿನ್ನವಾಗಿ ಗಮನ ಸೆಳೆದಿದ್ದಾರೆ. ಸಿನಿಮ ಆಸಕ್ತಿದಾಯಕವಾಗಿ ತೆರೆದುಕೊಂಡರು ಸುಲಭವಾಗಿ ಗ್ರಹಿಸಬಹುದಾದ ಸರಳ ನಿರೂಪಣಾ ಕಥಾವಸ್ತು ನಿಶ್ಯಬ್ಧಂ.

ಮಾಧವನ್, ಅನುಷ್ಕ ಮೇಲಿನ ಅಭಿಮಾನದಿಂದ ಅತೀಯಾದ ನಿರೀಕ್ಷೆಯಲ್ಲಿ ಸಿನಿಮ ನೋಡದೆ ಸಾಮಾನ್ಯ ಥ್ರಿಲ್ಲರ್ ಪ್ರಿಯರಂತೆ ಸಿನಿಮ ನೋಡಿದಲ್ಲಿ ಚಿತ್ರ ನಿರಾಸೆ ಮೂಡಿಸುವುದಿಲ್ಲ.  ಜಾಗತಿಕ ಪ್ರೇಕ್ಷಕರನ್ನು ಗುರಿಯಾಗಿಸಿಕೊಳ್ಳಲು ಹಾಲಿವುಡ್ ಗುಣಮಟ್ಟದಲ್ಲಿ ಚಿತ್ರವನ್ನು ಕಟ್ಟಿಕೊಡಲಾಗಿದೆ. ಯುಎಸ್‌ನಂತ ದೇಶಗಳಲ್ಲಿನ ತನಿಖಾ ವೈಖರಿ, ಅಪರಾಧ ಪ್ರಚೋಧಿಸುವ ಮನಸ್ಥಿತಿಯ ಪ್ರಸ್ತುತಪಡಿಸಿದ ರೀತಿ ಸೇರಿದಂತೆ ಚಿತ್ರಕಥೆಯಲ್ಲಿ ಹಲವು ತಾರ್ಕಿಕ ದೋಷಗಳಿದ್ದರೂ ಚಿತ್ರ ಕೊನೆಯವರೆಗೂ ನೋಡಿಸಿಕೊಂಡು ಹೊಗುತ್ತದೆ.

ಮಂದಗತಿಯ ನಿರೂಪಣೆ ಹೊಂದಿರುವುದು ಬಹುತೇಕರಿಗೆ ಚಿತ್ರ ಮೆಚ್ಚುಗೆಯಾಗಿಲ್ಲ. ಈ ಸಿನಿಮದಲ್ಲಿ ಇನ್ನೊಂದು ವಿಶೇಷವೆಂದರೇ ಹಾಲಿವುಡ್‌ನ ಪ್ರಸಿದ್ದ ನಟ ಮೈಕೆಲ್ ಮೆಡ್ಸೆನ್ ನಟಿಸಿದಿದ್ದಾರೆ. ನಟಿ ಅಂಜಲಿ ಜತೆಗೆ ಪೊಲೀಸ್ ಅಧಿಕಾರಿಗಳ ಪಾತ್ರ ನಿರ್ವಹಿಸಿದ್ದಾರೆ.

 
 
 
 
 
 
 
 
 
 
 

Leave a Reply