ಜನರ ಮನ ಗೆದ್ದ ದರ್ಪಣ ಸಮೂಹ ನೃತ್ಯ

ಉಡುಪಿ: ಗಣರಾಜ್ಯೋತ್ಸವದ ಪ್ರಯುಕ್ತ 26 ಜನವರಿ 2021ರಂದು ಮಂತ್ರ ಟೂರಿಸಂ ಸಂಯೋಗದೊಂದಿಗೆ ಮಲ್ಪೆ ಬೀಚ್ ನಲ್ಲಿ ಉಡುಪಿಯ ದರ್ಪಣ ಸ್ಕೂಲ್ ಆಫ್ ಪರ್ಮಾರ್ಮಿಂಗ್ ಆರ್ಟ್ಸ್ ಸಂಸ್ಥೆಯ ಕಲಾವಿದರಿಂದ ಕಲರ್ಸ್ ಆಫ್ ಇಂಡಿಯಾ ಪರಿಕಲ್ಪನೆಯಲ್ಲಿ ಸಮೂಹ ನೃತ್ಯಗಳ ಪ್ರದರ್ಶನ ಪ್ರೇಕ್ಷಕರ ಮನಸೂರೆಗೊಂಡಿತು.

ರಮ್ಯ ಉಡುಪಿ ಮತ್ತು ವಿದುಷಿ ರಕ್ಷ ಉಡುಪಿ ನೇತೃತ್ವದಲ್ಲಿ ನೃತ್ಯದಲ್ಲಿ ಪಳಗಿದ ವಿದ್ಯಾರ್ಥಿಗಳು ವಿವಿಧ ಪ್ರಕಾರದ ನೃತ್ಯಗಳಾದ ಭರತನಾಟ್ಯ, ಕಥಕ್, ಮಣಿಪುರಿ, ಜನಪದ ಗೀತೆಗಳಿಗೆ ನರ್ತಿಸಿ ನೋಡುಗರ ಮನ ಸೆಳೆದಿದ್ದಾರೆ. 

ಅದನ್ನು ಅಕ್ಷರ ರೂಪದಲ್ಲಿ ಲೇಖಕಿ ಅನುಪಮ ಕೋಟ ನಿರೂಪಿಸಿದ್ದಾರೆ.

ಬೇರೆ ಬೇರೆ ರಾಜ್ಯಗಳ ಸುಮಾರು ಏಳು ಶಾಸ್ತ್ರೀಯ ಮತ್ತು 11 ಜನಪದ ನೃತ್ಯಗಳನ್ನು ನಿರಂತರವಾಗಿ ಸುಮಾರು ಒಂದೂವರೆ ತಾಸಿನ ಕಾಲ ಒಂದಾದ ಮೇಲೊಂದರಂತೆ ಪ್ರದರ್ಶಿಸುವುದೇ ಕಲರ್ಸ್ ಆಫ್ ಇಂಡಿಯಾ ನೃತ್ಯದ ವೈಶಿಷ್ಟ್ಯತೆಯಾಗಿತ್ತು. ಈ ನೃತ್ಯ ಪ್ರಯೋಗದಲ್ಲಿ 6ರಿಂದ 18 ವಯಸ್ಸಿನ 25 ಮಂದಿ ಮಕ್ಕಳು ಭಾಗವಹಿಸಿದ್ದರು.

ಶಾಸ್ತ್ರೀಯ ನೃತ್ಯಗಳಾದ ಭರತನಾಟ್ಯಂ, ಕಥಕ್ಕಳಿ, ಮೋಹಿನಿಯಾಟ್ಟಂ, ಕೂಚುಪುಡಿ, ಮಣಿಪುರಿ, ಒಡಿಸ್ಸಿ, ಕಥಕ್ ಮೊದಲಿಗೆ ಪ್ರದರ್ಶನಗೊಂಡಿತು.ನಂತರ ಶಿಷ್ಯರು ಜಾನಪದ ಕುಣಿತಗಳಿಗೆ ಹೆಜ್ಜೆಹಾಕಿದರು.

ಕರ್ನಾಟಕದ ಕಂಸಾಳೆ, ಯಕ್ಷಗಾನ, ಅಸ್ಸಾಮಿನ ಬಿಹು, ಕಾಶ್ಮೀರಿಯ ರೌಫ್, ಪಂಜಾಬಿನ ಬಾಂಗ್ರಾ, ರಾಜಸ್ಥಾನಿಯ ಕಲ್ಬೆಲಿಯ, ಚಿರ್ಮಿ, ಗುಜರಾತಿನ ಧಾಂಡಿಯಾ, ಮಹಾರಾಷ್ಟ್ರದ ಲಾವಣಿ, ಹರಿಯಾಣಯದ ಫಲ್ಗುನ್, ತಮಿಳ್ನಾಡಿನ ಕಾವಡಿ ಜನಪದ ನೃತ್ಯಗಳಿಗೆ ತಕ್ಕಂತೆ ವಿದ್ಯಾರ್ಥಿಗಳು ಸಾಂಪ್ರದಾಯಕ ವೇಷಭೂಷಣ ಚಾಕಚಕ್ಯತೆಯಿಂದ ಬದಲಿಸಿ ನೃತ್ಯವನ್ನು ಪ್ರದರ್ಶಿಸಿದ್ದು ಜನಮನ ಸೂರೆಗೊಂಡವು.

 
 
 
 
 
 
 
 
 

Leave a Reply