ಬನ್ನಿ.. ನಾಳೆ ಫಿಲಂಗೆ ಹೋಪ..

ನವದೆಹಲಿ: ಕೇಂದ್ರ ಸರ್ಕಾರದ ಮಾರ್ಗ ಸೂಚಿಗಳನ್ನು ಆಧಾರವಾಗಿಟ್ಟು ಕೊಂಡು ನಾಳೆಯಿಂದ ಸಿನೆಮಾ ಥಿಯೇಟರ್, ಮಲ್ಟಿಪ್ಲೆಕ್ಸ್ ಗಳು ಸಿನೆಮಾ ಪ್ರಿಯರಿಗಾಗಿ ಸುಮಾರು 7 ತಿಂಗಳ ಬಳಿಕ ತೆರೆಯ ಲಿವೆ.

ಶೇ.50 ರಷ್ಟು ಮಾತ್ರ ಆಸನ ವ್ಯವಸ್ಥೆ ಯೊಂದಿಗೆ ಆರಂಭವಾಗಲಿರುವ ಚಿತ್ರ ಮಂದಿರಗಳಲ್ಲಿ ಕೋವಿಡ್ ತಡೆಗಟ್ಟಲು ವ್ಯಾಪಕ ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು ಎಂದು ಸರ್ಕಾರ ತಾಕೀತು ಮಾಡಿದೆ.

ಆಗಮಿಸುವ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಪ್ರವೇಶದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ವ್ಯವಸ್ಥೆ ಇರಬೇಕು. ನಿಗದಿತ ದೈಹಿಕ ಅಂತರ ಕಾಪಾಡಲೇಬೇಕು ಮತ್ತು ಪ್ರತಿ ಪ್ರದರ್ಶನ ಮುಕ್ತಾಯವಾದ ಬಳಿಕ ಸ್ಯಾನಿಟೈಸ್ ಮಾಡಬೇಕು ಎಂದು ಸರ್ಕಾರ ಆದೇಶಿಸಿದೆ.

 
 
 
 
 
 
 
 
 
 
 

Leave a Reply