ವಿದ್ಯಾಪೋಷಕ್ ವಿನಮ್ರ ಸಹಾಯ ವಿತರಣಾ ಸಮಾರಂಭ

ಪರ್ಯಾಯ ಶ್ರೀ ಅದಮಾರು ಮಠ ಇದರ ಆಶ್ರಯದಲ್ಲಿ ಯಕ್ಷಗಾನ ಕಲಾರಂಗ ವಿದ್ಯಾಪೋಷಕ್ ವಿನಮ್ರ ಸಹಾಯ ವಿತರಣಾ ಸಮಾರಂಭ ಇಂದು ( 03-01-2021)ರಂದು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆಯಿತು. ಪೂರ್ವಾಹ್ನ ಸೋದೆ ಮಠಾಧೀಶರಾದ ಶ್ರೀ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸಿ ಹರಸಿದರು.ಸಭೆಯಲ್ಲಿ ಉದ್ಯಮಿ ಶ್ರೀ ಗೋಕುಲನಾಥ್ ಪ್ರಭು, ಶ್ರೀ ರಾಜಗೋಪಾಲ ಆಚಾರ್ಯ, ಶ್ರೀಮತಿ ವಿಲಾಸಿನಿ ಬಿ. ಶೆಣೈ, ಡಾ.ಜೆ.ಎನ್.ಭಟ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಬಳಿಕ ಖ್ಯಾತ ಲೇಖಕಿ ನೇಮಿಚಂದ್ರ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿ ಭಾಷಣಗೈದರು.ಬಳಿಕ ಜರಗಿದ ವಿನಮ್ರ ಸಹಾಯಧನ ವಿತರಣಾ ಸಮಾರಂಭದಲ್ಲಿ ಪರ್ಯಾಯ ಅದಮಾರು ಮಠಾಧೀಶರಾದ ಶ್ರೀ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸಹಾಯಧನ ಚೆಕ್ ವಿತರಿಸಿ ಆಶೀರ್ವಚನಗೈದರು. ಶಾಸಕ ಶ್ರೀ ಕೆ. ರಘುಪತಿ ಭಟ್ ರವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮದಲದಲ್ಲಿ ಅಂಬಲಪಾಡಿ ದೇವಳದ ಧರ್ಮದರ್ಶಿ ನಿ.ಬೀ ವಿಜಯ ಬಲ್ಲಾಳ್, ಮಂಗಳೂರು ಪ್ರೇರಣಾ ಇನ್ಫೋಸಿಸ್ ಸಂಸ್ಥೆಯ ವರಿಷ್ಠರಾದ ಶ್ರೀ ರವಿರಾಜ ಬೆಳ್ಮ, ಉದ್ಯಮಿ ಪುರುಷೋತ್ತಮ್ ಪಟೇಲ್, ಸೆಲ್ಕೋ ಸೋಲಾರ್ ಸಂಸ್ಥೆಯ ಶ್ರೀ ಗುರುಪ್ರಕಾಶ್ ಶೆಟ್ಟಿ, ಅಧ್ಯಕ್ಷ ಎಂ.ಗಂಗಾಧರ ರಾವ್, ಉಪಾಧ್ಯಕ್ಷರುಗಳಾದ ಎಸ್.ವಿ ಭಟ್, ಪಿ.ಕಿಶನ್ ಹೆಗ್ಡೆ, ವಿ.ಜಿ.ಶೆಟ್ಟಿ ಉಪಸ್ಥಿತರಿದ್ದರು.ಸಮಾರಂಭದಲ್ಲಿ 3 ವಿಧ್ಯಾರ್ಥಿಗಳಿಗೆ ಸೆಲ್ಕೋ ಸೋಲಾರ್ ಸಂಸ್ಥೆಯ ವತಿಯಿಂದ ಸೋಲಾರ್ ಸೌಲಭ್ಯ, ಇಬ್ಬರು ವಿದ್ಯಾರ್ಥಿಗಳಿಗೆ ಬೆಂಗಳೂರಿನ ಶ್ರೀಮತಿ ಗೀತಾ.ಎಲ್ ಎನ್ ಶೆಟ್ಟಿ ಕೊಡಮಾಡುವ ಲ್ಯಾಪ್‌ಟಾಪ್, 51 ವಿಧ್ಯಾರ್ಥಿಗಳಿಗೆ ಇನ್ಫೋಸಿಸ್ ಫೌಂಡೇಶನ್ ವತಿಯಿಂದ ಟ್ಯಾಬ್ ಸೇರಿದಂತೆ ಒಟ್ಟು 1081 ವಿದ್ಯಾರ್ಥಿಗಳಿಗೆ ರೂ. 67,36,875/- ಮೊತ್ತದ ವಿಧ್ಯಾರ್ಥಿ ವೇತನ ವಿತರಿಸಲಾಯಿತು.ಕಾರ್ಯಕ್ರಮದಲ್ಲಿ ಹೊಸದಾಗಿ ಆಯ್ಕೆಯಾದ ಪ್ರಥಮ ಪಿ. ಯು. ಸಿ. ಯ240 ವಿಧ್ಯಾರ್ಥಿಗಳು ಹಾಗೂ ಅವರ ರಕ್ಷಕರು ಪಾಲುಗೂಂಡಿದ್ದು ಉಳಿದವರು C4U ಚಾನಲ್ ಮೂಲಕ ಮನೆಯಲ್ಲಿ ವೀಕ್ಷಿಸಿದರು.

 
 
 
 
 
 
 
 
 
 
 

Leave a Reply