ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಯ ಹೃದಯ ಗ್ರಂಥಾಲಯವಾಗಿದ್ದು, ಜ್ಞಾನದ ದೀಪವೇ ಗ್ರಂಥಾಲಯ~ ಶ್ರೀ. ಹರಿಕೃಷ್ಣರಾವ್ ಅಡೂರು.

ಉಡುಪಿ: ಪ್ರತಿಯೊಂದು ಶೈಕ್ಷಣಿಕ ಸಂಸ್ಥೆಯ ಹೃದಯ ಗ್ರಂಥಾಲಯವಾಗಿದ್ದು, ಜ್ಞಾನದ ದೀಪವೇ ಗ್ರಂಥಾಲಯ. ಇದರಲ್ಲಿನ ಪ್ರತಿಯೊಂದು ಪುಸ್ತಕವೂ ದೀಪದ ಕಿಡಿ. ಇದು ಜೀವನದ ಕತ್ತಲೆಯನ್ನು ಓಡಿಸುವ ದೀಪ ಪುಸ್ತಕವಾಗಿದೆ ಎಂದು ಉಡುಪಿಯ ಎಸ್.ಎಂ.ಎಸ್.ಪಿ ಸಂಸ್ಕೃತ ಅಧ್ಯಯನ ಕೇಂದ್ರದ ನಿವೃತ್ತ ಗ್ರಂಥಪಾಲಕ ಶ್ರೀ. ಹರಿಕೃಷ್ಣರಾವ್ ಅಡೂರುರವರು ಹೇಳಿದರು.
 ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಪದ್ಮಶ್ರೀ ಡಾ.ಎಸ್.ಆರ್. ರಂಗ ನಾಥನ್‌ರವರ ಜನ್ಮದಿನದ ನೆನಪಿಗಾಗಿ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಂಥಾಲಯ ದಿನದ ಕಾಯ೯ಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಶ್ರೀಯುತರು ಯಾವುದೇ ಒಂದು ಸಂಸ್ಥೆ ಶ್ರೇಷ್ಠ ಎನಿಸಿ ಕೊಳ್ಳಲು ಜ್ಞಾನದ ಮೂಲಗಳು ಅವಶ್ಯಕ.
ಹಿಂದಿನ ಕಾಲದಲ್ಲಿ ಪುಸ್ತಕಗಳಿಗೆ ಹೆಚ್ಚಿನ ಪ್ರಾಶಸ್ಯ ಕೊಡುತ್ತಿದ್ದರು ಹಾಗೂ ಪುಸ್ತಕ ಕದ್ದವರಿಗೆ ಕಠಿನ ಶಿಕ್ಷೆ ನೀಡುತ್ತಿದ್ದರು. ಶ್ರೀಯುತರು ಪದ್ಮಶ್ರೀ ಡಾ.ಎಸ್.ಅರ್.ರಂಗನಾಥನ್‌ರವರು ಹೇಗೆ ಭಾರತ ದಲ್ಲಿ ಗ್ರಂಥಾಲಯಗಳ ಸಂರಕ್ಷಣೆ ಮತ್ತು ಸುಧಾರಣೆ ಮತ್ತು ಅವರ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿದರು.
ಗ್ರಂಥಾಲಯದಲ್ಲಿರುವ ಪುಸ್ತಕಗಳು ಇರುವುದು ಉಪಯೋಗಕ್ಕೆ ವಿನಹ ಕಟ್ಟಿ ಇಡುವುದಕ್ಕಲ್ಲ ಹಾಗಾಗಿ ವಿದ್ಯಾಥಿ೯ಗಳು ಗ್ರಂಥಾಲಯದಲ್ಲಿ ಸಿಗುವ ಪುಸ್ತಕಗಳು ಕಂಪ್ಯೂಟರ್ ಅಂತಜಾ೯ಲ , ಮೊಬೈಲ್ ನಲ್ಲಿ ಸಿಗುವ ಮಾಹಿತಿಯನ್ನು ಉಪಯೋಗಿಸಿಕೊಂಡು ಜ್ಞಾನವೃದ್ಧಿ ಮಾಡಿಕೊಂಡು ಜೀವನದಲ್ಲಿ ಯಶಸ್ಸು ಗಳಿಸಬೇಕೆಂದು ವಿದ್ಯಾಥಿ೯ಗಳಿಗೆ ಕರೆ ನೀಡಿದರು.
ಕಾಯ೯ಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿಮ೯ಲ ಹರಿಕೃಷ್ಣರವರು ವಹಿಸಿದ್ದರು. ಕಾಯ೯ಕ್ರಮದಲ್ಲಿ ಕಾಲೇಜಿನ ಪ್ರಾದ್ಯಾಪಕರಾದ ಶ್ರೀ. ರೋಹಿತ್ ಎಸ್.ಅಮೀನ್ ರವರು ಅತಿಥಿಗಳನ್ನು ಪರಿಚಯಿಸಿದರು. ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನದ ಮುಖ್ಯಸ್ಥರಾದ ಡಾ. ರವೀಂದ್ರನಾಥ ಶಾನ್‌ಭಾಗ್ ರವರು ಶ್ರೀ.ಹರಿಕೃಷ್ಣ ರಾವ್ ಅಡೂರು ರವರನ್ನು ಸನ್ಮಾನಿಸಿದರು. 
ಕಾಲೇಜಿನ ಗ್ರಂಥಾಪಾಲಕ ಶ್ರೀ.ಸದಾಶಿವರವರು ಪದ್ಮಶ್ರೀ ಎಸ್.ಅರ್.ರಂಗನಾಥನ್ ರವರ ಕಿರು ಪರಿಚಯ ಹಾಗೂ ಅತಿಥಿ ಸ್ವಾಗತ ನೆರವೇರಿಸಿದರು, ಕಾಲೇಜಿನ ದೈಹಿಕ ಶಿಕ್ಷಣ ನಿದೆ೯ಶಕರಾದ ಶ್ರೀ.ಪ್ರಕಾಶ್ ರಾವ್ ರವರು ವಂದನಾಪ೯ಣೆ ಸಲ್ಲಿಸಿದರು. ವಿದ್ಯಾಥಿ೯ನಿ ಕುಮಾರಿ ಸಂಸ್ಕೃತಿ  ಸುರೇಶ್ ಕಾಯ೯ಕ್ರಮವನ್ನು ನಿರೂಪಿಸಿದರು
 
 
 
 
 
 
 
 
 
 
 

Leave a Reply