Janardhan Kodavoor/ Team KaravaliXpress
31 C
Udupi
Friday, February 26, 2021

ತೆಂಕನಿಡಿಯೂರು: ಡಾ.ವಸಂತ ಶೆಟ್ಟಿ ಸಂಸ್ಮರಣ ಉಪನ್ಯಾಸ

ಉಡುಪಿ: ತುಳುನಾಡಿನ ಪ್ರಖ್ಯಾತ ಇತಿಹಾಸಕಾರ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ಮಾಜಿ ಪ್ರಾಂಶುಪಾಲ ದಿ. ಡಾ.ವಸಂತ ಶೆಟ್ಟಿಯವರ ಸಂಸ್ಮರಣ ಉಪನ್ಯಾಸ ಕಾರ್ಯಕ್ರಮ ಗುರುವಾರ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರಿನ ಸ್ನಾತಕೋತ್ತರ ಇತಿಹಾಸ ವಿಭಾಗ,ಡಾ.ವಸಂತ ಶೆಟ್ಟಿ ಸ್ಮಾರಕ ಅಧ್ಯಯನ ಸಂಸ್ಥೆ ಬ್ರಹ್ಮಾವರದ ಜಂಟಿ ಆಶ್ರಯದಲ್ಲಿ ನಡೆಯಿತು.

ಉಡುಪಿಯ ಎಂ.ಜಿ.ಎಂ ಕಾಲೇಜಿನ ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ವಿನೀತ್ ರಾವ್ ತುಳುನಾಡಿನಲ್ಲಿ ಗಾಂಧಿಯವರ ಹೆಜ್ಜೆ ಗುರುತುಗಳು ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಮಹಾತ್ಮ ಗಾಂಧೀಜಿ ಮೂರು ಬಾರಿ ಅವಿಭಜಿತ ದಕ್ಷಿಣ ಕನ್ನಡಕ್ಕೆ ಆಗಮಿಸಿದ್ದರು. ಮೊದಲನೆಯ ಬಾರಿಗೆ ಖಿಲಾಫತ್ ಚಳವಳಿಗಾಗಿ 1919ರಲ್ಲಿ ಮಂಗಳೂರಿಗೆ ಆಗಮಿಸಿದಾಗ ಕಾರ್ಪೋರೇಷನ್ ಬ್ಯಾಂಕ್ ಸಂಸ್ಥಾಪಕ ಹಾಜಿ ಅಬ್ದುಲ್ಲರವರು ಸರ್ವಧರ್ಮಸಂದೇಶವನ್ನು ಸಾರುವ ಮೆರವಣಿಗೆ ಮೂಲಕ ಮಹಾತ್ಮಾ ಗಾಂಧೀಜಿಯವರನ್ನು ಸ್ವಾಗತಿಸಿದರು. 

ಎರಡನೆಯ ಬಾರಿಗೆ 1927 ರಲ್ಲಿ ಗಾಂಧೀಜಿ ಮಂಗಳೂರಿಗೆ ಆಗಮಿಸಿದ್ದರು. ಮೂರನೆಯ ಬಾರಿಗೆ ಅಂದರೆ 1934 ರಲ್ಲಿ ಗಾಂಧೀಜಿ ಕೊಡಗು ಮೂಲಕ ಉಡುಪಿ ಅಜ್ಜರಕಾಡಿಗೆ ಆಗಮಿಸಿದ್ದರು. ಇಲ್ಲಿಗೆ ಬಂದಾಗ ಹೆಚ್ಚಿನ ಪ್ರಮಾಣದಲ್ಲಿ ನಿಧಿ‌ ಸಂಗ್ರಹವಾಗುತ್ತಿರುವುದರಿಂದ ಅವಿಭಜಿತ ದಕ್ಷಿಣ ಕನ್ನಡವನ್ನು ಗಾಂಧೀಜಿ ಟ್ರೆಶರ್ ಲ್ಯಾಂಡ್ ಎಂದು ಕರೆದಿದ್ದರು

ಎಂದು ವಿನೀತ್ ರಾವ್ ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲದ ಪ್ರೊ.ಬಾಲಕೃಷ್ಣ ಎಸ್ ಹೆಗ್ಡೆಯವರು ವಹಿಸಿದ್ದರು. ತುಳುನಾಡಿನ ಶಾಸನಗಳ ಅಧ್ಯಯನದಲ್ಲಿ ವಿಶೇಷ ಸಾಧನೆ ಮಾಡಿದ್ದ ದಿ. ವಸಂತ ಶೆಟ್ಟಿಯವರು ಡಾ.ಗುರುರಾಜ ಭಟ್ ರವರ ಪರಂಪರೆಯಲ್ಲಿ ಸಾಧನೆ ಮಾಡಿದವರು. 

ಇಂದಿಗೆ ಅವರು ನಮ್ಮನ್ನು ಅಗಲಿ 24 ವರ್ಷಗಳು ಸಂದವು. ಅವರ ಸಾಧನೆಗಳೇ ಹೆಜ್ಜೆ ಗುರುತಿನ ಹಾಗೆ ಇರುವುದರಿಂದ ಯುವ ಸಂಶೋಧಕರಿಗೆ ಹೇರಳವಾದ ಜ್ಞಾನ ಭಂಡಾರವು ಸೃಷ್ಟಿಯಾಗಿದೆ. ಕ್ರಿಯಾಶೀಲ ಸಂಶೋಧಕ ಅದ್ಭುತವನ್ನು ಸಾಧಿಸಬಹುದು ಎಂಬುದಕ್ಕೆ ವಸಂತ ಶೆಟ್ಟಿಯವರ ಜೀವನ ಚರಿತ್ರೆಯೇ ಉದಾಹರಣೆ ಎಂದು ಪ್ರಾಂಶುಪಾಲ ಬಾಲಕೃಷ್ಣ ಎಸ್. ಹೆಗ್ಡೆಯವರು ವಸಂತ ಶೆಟ್ಟಿಯವರ ಜೊತೆಗಿನ ಒಡನಾಟವನ್ನು ಸ್ಮರಿಸಿಕೊಂಡರು. ವಸಂತ ಶೆಟ್ಟಿಯವರು ಸಂಶೋಧನೆಯ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದರು. ಡಾ. ಗುರುರಾಜ ಭಟ್ ನಂತರ ಗಾಢವಾದ ಅಧ್ಯಯನದ ಮೂಲಕ ಜ್ಞಾನ ಪ್ರವಾಹವನ್ನು ಹರಿಸಿದ ಕೀರ್ತಿ ವಸಂತ ಶೆಟ್ಟಿಯವರಿಗೆ ಸಲ್ಲುತ್ತದೆ. ಹಾಗಾಗಿ ಅವರ ಪುಣ್ಯತಿಥಿಯಂದು ಇಂತಹ ಅಧ್ಯಯನಶೀಲ ಕಾರ್ಯಕ್ರಮಗಳನ್ನು ನಡೆಸುವುದು ಔಚಿತ್ಯ ಪೂರ್ಣವಾದ ಕಾರ್ಯ

ಎಂದು ಇತಿಹಾಸ ವಿಭಾಗದ ಮುಖ್ಯಸ್ಥರೂ ಆಗಿರುವ ಐಕ್ಯೂಎಸಿ ಸಂಚಾಲಕ ಡಾ.ಸುರೇಶ್ ರೈಯವರು ಅಭಿಪ್ರಾಯಪಟ್ಟರು. 

ದಿ.ವಸಂತ ಶೆಟ್ಟಿ ಸ್ಮಾರಕ ಅಧ್ಯಯನ ಸಂಸ್ಥೆಯ ಸಂಚಾಲಕರು ಮತ್ತು ಉಡುಪಿ ಗೋವಿಂದ ಪೈ ಸಂಶೋಧನಾ ಕೇಂದ್ರದ ನಿರ್ದೇಶಕ ಡಾ.ಜಗದೀಶ್ ಶೆಟ್ಟಿ ವಂದಿಸಿದರು. ದ್ವಿತೀಯ ಇತಿಹಾಸ ಎಂ.ಎ ತರಗತಿಯ ವಿದ್ಯಾರ್ಥಿನಿ ರಕ್ಷಿತಾ ಮತ್ತು ರೋಲಿಟ ಪ್ರಾರ್ಥಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ 

ಉಡುಪಿ:  ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ  ಶುಕ್ರವಾರ ವಿದ್ವಾನ್ ಕಬಿಯಾಡಿ​ ​ಜಯರಾಮ ​ಆಚಾರ್ಯ  ಮಾರ್ಗ ದರ್ಶನದಲ್ಲಿ  ಆಶ್ಲೇಷಾಬಲಿ , ನವಕ ಕಲಶ, ಪ್ರಧಾನ ಹೋಮ...

ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ನೂತನ  ಅಧ್ಯಕ್ಷೆ 

ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ಅವರು 2021-22 ನೇ ಸಾಲಿಗೆ 20ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ...

ಶ್ರೀ ದುರ್ಗಾ ದೇವಸ್ಥಾನ ಕುಂಜೂರುವಿನಲ್ಲಿ ಮಾರ್ಚ್,1ರಂದು ತ್ರಿಕಾಲ ಪೂಜೆ 

 ದುರ್ಗಾ ಸೇವಾ ಸಮಿತಿ ಕುಂಜೂರು ಇವರು ಆಯೋಜಿಸುವ  ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಇಲ್ಲಿ ಮಾರ್ಚ್,1 ರಂದು  ತ್ರಿಕಾಲ ಪೂಜೆ ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ದಿನದ ತ್ರಿಸಂಧ್ಯಾ ಕಾಲಗಳಲ್ಲಿ  ಶ್ರೀ ದುರ್ಗಾ ಮಾತೆಗೆ ವಿಸ್ತೃತ...

ಹೆಸರಾಂತ ಆಯುರ್ವೇದ ವೈದ್ಯ ಜಿ. ಶ್ರೀನಿವಾಸ ಆಚಾರ್ಯ ನಿಧನ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಜಿ. ಶ್ರೀನಿವಾಸ ಆಚಾರ್ಯ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ...
error: Content is protected !!