ಡಾ. ಜಿ. ಶಂಕರ್‌ ಸರಕಾರಿ ಮಹಿಳಾ ಕಾಲೇಜಿನ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರದಲ್ಲಿ ಹಾಗೂ ವಾಚನಾಲಯ ಸೌಲಭ್ಯದ ಉದ್ಘಾಟನೆ

ಉಡುಪಿ : ಡಾ. ಜಿ. ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ಅಜ್ಜರಕಾಡು ಇಲ್ಲಿಯ ಕಾಲೇಜು ಗ್ರಂಥಾಲಯದಲ್ಲಿ ಗ್ರಂಥಾಲಯದ ಪಿತಾಮಹ ಡಾ. ಎಸ್.‌ ಆರ್.‌ ರಂಗನಾಥನ್ ರ 129ನೇ ಜನ್ಮ ದಿನಾಚರಣೆ ಮತ್ತು ವಾಚನಾಲಯ ಸೌಲಭ್ಯದ ಉದ್ಘಾಟನೆ ಸೋಮವಾರ ಜರುಗಿತು.

ಕಾಲೇಜಿನ ಪ್ರಾಂಶುಪಾಲ ಡಾ. ಭಾಸ್ಕರ್‌ ಶೆಟ್ಟಿ ಎಸ್.‌ ಇವರು ದೀಪ ಬೆಳಗಿಸಿ ಗ್ರಂಥಾಲಯ ಪಿತಾಮಹ ಡಾ. ಎಸ್.‌ ಆರ್.‌ ರಂಗನಾಥನ್ ಫೋಟೋಗೆ ಹೂ ಹಾಕುವ ಮೂಲಕ ನಮನಗಳನ್ನು ಸಲ್ಲಿಸಿದರು ಮತ್ತು ವಾಚನಾಲಯ ಸೌಲಭ್ಯವನ್ನು ರಿಬ್ಬನ್‌ ಕತ್ತರಿಸುವ ಮೂಲಕ ಉದ್ಘಾಟಿಸಿದರು.

ಕಾಲೇಜಿನ ಪ್ರಾಧ್ಯಾಪಕ ರಾಮಚಂದ್ರ ಅಡಿಗ, ಗೌರಿ ಎಸ್.‌ ಭಟ್‌, ರಾಮರಾಯ ಆಚರ‍್ಯ, ಡಾ. ಶ್ರೀಧರ್‌ ಪ್ರಸಾದ್‌, ಡಾ. ರವಿರಾಜ್‌ ಶೆಟ್ಟಿ, ಡಾ. ವಾಣಿ ಆರ್. ಬಲ್ಲಾಳ್, ಅಶೋಕ್‌ ಭಂಡಾರಿ, ಡಾ. ಗುರುರಾಜ್‌ ಪ್ರಭು, ಡಾ. ಎಂ. ಚಂದ್ರಶೇಖರ, ಡಾ. ರಾಜೇಂದ್ರ, ಡಾ. ರಾಮದಾಸ್‌ ಪ್ರಭು, ಕಛೇರಿ ಅಧೀಕ್ಷಕ ಸುಧಾ, ಗಾಯತ್ರಿ, ಕಛೇರಿ ಸೂಪರಿಂಡೆಂಟ್‌ ರಾಮು ಮತ್ತು ಸುರೇಶ್, ಗ್ರಂಥಾಲಯದ ಸಿಬ್ಬಂದಿ ಶಮ್ಮಿ, ವಿಜಯಲಕ್ಷ್ಮೀ ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply