ಯು.ಪಿ.ಎಂ.ಸಿ- ಸಂಸ್ಕೃತ ದಿನಾಚರಣೆ – ಸಂಸ್ಕೃತ ಸಾಹಿತ್ಯ ವೈಭವ ಅನ್ಯಾದೃಶ

ಉಡುಪಿ : ಶ್ರುತಿ, ಸ್ಮೃತಿ, ಇತಿಹಾಸ, ಪುರಾಣಾದಿಗಳ ವೈಚಾರಿಕತೆಯೊಂದಿಗೆ ಸಾಹಿತ್ಯಕ ವೈಭವವನ್ನು ಮೆರೆದು ಸರ್ವಾಂಗೀಣ ಸುಂದರ ಭಾಷೆಯಾಗಿ ಸಂಸ್ಕೃತ ಹೊರಹೊಮ್ಮಿದೆ ಎಂಬುದಾಗಿ ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚಾರ್ಯ ಡಾ. ಮಧುಸೂದನ್ ಭಟ್ ಹೇಳಿದ್ದಾರೆ.

ಅವರು ಆ.24 ರಂದು ಕಾಲೇಜಿನಲ್ಲಿ ಹಮ್ಮಿಕೊಂಡ ಸಂಸ್ಕೃತ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಕಾಳಿದಾಸನು ಬೋಧಿಸಿದ ಸಮಾಜನೀತಿ, ಸಂಸ್ಕೃತ ಸಾಹಿತ್ಯದ ಒಗಟಿನ ಸ್ವಾರಸ್ಯಗಳು, ಪ್ರತ್ಯಕ್ಷರ ಅರ್ಥಪೂರ್ಣವಾಗಿರುವ ಸಂಸ್ಕೃತದ ವಿಶೇಷತೆಗಳನ್ನು ಈ ಸಂದರ್ಭದಲ್ಲಿ ವಿವರಿಸಿದರು.

ಆನ್ಲೈನ್ ನಲ್ಲಿ ಮೂಡಿಬಂದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಸಂಸ್ಕೃತ ವಿದ್ಯಾರ್ಥಿಗಳು ಭಾಗವಹಿಸಿದರು. ಕಾಲೇಜಿನ ವಾಣಿಜ್ಯ ಉಪನ್ಯಾಸಕ ರಾಘವೇಂದ್ರ ಜಿ.ಜಿ ಕಾರ್ಯಕ್ರಮ ಸಂಯೋಜಿಸಿ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply