ಉಪೇಂದ್ರ ಪೈ ಮೆಮೋರಿಯಲ್ ಕಾಲೇಜು ; ವ್ಯಕ್ತಿತ್ವ ವಿಕಸನದಲ್ಲಿ ವಿದ್ಯಾರ್ಥಿನಿಯರ ಪಾತ್ರ- ವಿಶೇಷೋಪನ್ಯಾಸ

ಉಡುಪಿ : ವ್ಯಕ್ತಿಯ ಶಾರೀರಿಕ ಸೌಂದರ್ಯವು ತಾತ್ಕಾಲಿಕವಾಗಿದ್ದು ವಯೋಸಹಜವಾಗಿ ಅದು ಬದಲಾಗುತ್ತಿರುತ್ತದೆ.

ಆದರೆ ಹುಟ್ಟಿನಿಂದ ಬಂದ ಸ್ವಭಾವವು ಬದಲಾಗದೆ ಬದುಕಿನುದ್ದಕ್ಕೂ ಒಳ್ಳೆಯ ಗುಣಲಕ್ಷಣಗಳನ್ನು ಹೊಂದಿದ ಸ್ವಭಾವನ್ನು ಅಳವಡಿಸಿಕೊಂಡಾಗ ವ್ಯಕ್ತಿಯ ವ್ಯಕ್ತಿತ್ವವು ಪರಿಪೂರ್ಣವಾಗುವುದಾಗಿ ಮಾಹೆಯ ಕೆ.ಎಂ.ಸಿ ಯ ಮನಃಶಾಸ್ತ್ರ ವಿಭಾಗದ ಸಂಶೋಧಕಿ ಡಾ.ಶ್ವೇತ ಹೇಳಿದ್ದಾರೆ.

ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಮಹಿಳಾ ಘಟಕ ‘ದಿಶಾ’ದಿಂದ ಡಿಸೆಂಬರ್ ೧ರಂದು ಹಮ್ಮಿಕೊಂಡ ‘ವ್ಯಕ್ತಿತ್ವ ವಿಕಸನದಲ್ಲಿ ವಿದ್ಯಾರ್ಥಿನಿಯರ ಪಾತ್ರ’ ಎಂಬ ವಿಷಯದ ಕುರಿತಾಗಿ ಉಪನ್ಯಾಸವನ್ನು ನೀಡಿದರು. 

ಸನ್ನಡತೆ, ಸದಾಚಾರ, ಸಚ್ಚಾರಿತ್ರ‍್ಯಗಳು ಬದುಕಿನ ಪ್ರತಿಯೊಂದು ಕ್ಷೇತ್ರಗಳಲ್ಲಿ ಅತ್ಯವಶ್ಯವಾಗಿದ್ದು ಗುಣನಡತೆಗಳ ಪ್ರಮಾಣಪತ್ರವಿಲ್ಲದೆ ಶೈಕ್ಷಣಿಕರಂಗದಲ್ಲಾಗಲಿ, ಔದ್ಯೋಗಿಕ ರಂಗದಲ್ಲಾಗಲಿ ಪ್ರವೇಶ ಅಸಾಧ್ಯವಾಗಿದೆ. ಈ ನಿಟ್ಟಿನಲ್ಲಿ ಸದ್ಗುಣಗಳನ್ನು ಹೊಂದಿ ವ್ಯಕ್ತಿತ್ವವನ್ನು ಬೆಳೆಸ ಬೇಕಾದುದು ಅನಿವಾರ್ಯವೆಂದು ಈ ಸಂದರ್ಭದಲ್ಲಿ ಹೇಳಿದರು.

ಕಾಲೇಜಿನ ಪ್ರಾಚಾರ್ಯ ಡಾ.ಮಧುಸೂದನ್ ಭಟ್ ಅಧ್ಯಕ್ಷರಾಗಿದ್ದರು. ದಿಶಾ ಮಹಿಳಾ ಘಟಕದ ಸಂಚಾಲಕಿ ಉಪನ್ಯಾಸಕಿ ಜಯಲಕ್ಷ್ಮಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ನಿಖಿತಾ ಶೆಟ್ಟಿ ಸ್ವಾಗತಿಸಿದರು, ನೌಶೀನ್ ವಂದಿಸಿದರು, ಚಾಂದಿನಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply