ಕೊಡವೂರು ಮೂಲದ ಸದ್ಯ ಬೆಂಗಳೂರು ನಿವಾಸಿ ತುಳಸಿ ಜಿ.ರಾಯಸ ಈ ಬಾರಿ sslc ಯಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿರುತ್ತಾಳೆ.ಕಲಿಕೆ ಮಾತ್ರವಲ್ಲದೆ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವ ಈಕೆಯನ್ನು ಪೇಜಾವರ ಶ್ರೀ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಬೆಂಗಳೂರಿನ ಶ್ರೀ ಪೂರ್ಣ ಪ್ರಜ್ಞ ವಿದ್ಯಾ ಪೀಠದಲ್ಲಿ ಶುಕ್ರವಾರದಂದು ಅಭಿನಂದಿಸಿದರು.
ಈ ಸಂದರ್ಭದಲ್ಲಿ ಪೂರ್ಣ ಪ್ರಜ್ಞಾ ವಿದ್ಯಾಪೀಠದ ಮ್ಯಾನೇಜರ್ ಕೇಶವ ಆಚಾರ್ಯ, ರಮೇಶ್ ರಾವ್, ವಾರಿಜ ರಮೇಶ್, ಗುರುಪ್ರಕಾಶ್ ರಾಯಸ, ಸರಿತಾ ಗುರುಪ್ರಕಾಶ್, ಹೃಷಿಕೇಶ್ ಜಿ. ರಾಯಸ ಉಪಸ್ಥಿತರಿದ್ದರು.