Janardhan Kodavoor/ Team KaravaliXpress
24.6 C
Udupi
Sunday, September 25, 2022
Sathyanatha Stores Brahmavara

ತೆಂಕನಿಡಿಯೂರು ಕಾಲೇಜಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತಾಗಿ ವಿಚಾರ ಸಂಕಿರಣ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ
ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು
ಇಲ್ಲಿ ಐ.ಕ್ಯೂ.ಎ.ಸಿ. ಆಶ್ರಯದಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ
2020ರ ಕುರಿತಾಗಿ ಒಂದು ದಿನದ ವಿಚಾರ ಸಂಕಿರಣ
ಹಮ್ಮಿಕೊಳ್ಳಲಾಯಿತು. ವಿಚಾರ ಸಂಕಿರಣಕ್ಕೆ ಚಾಲನೆಯಿತ್ತ
ಪ್ರಾಂಶುಪಾಲರಾದ ಡಾ. ಸುರೇಶ್ ರೈ ಕೆ. ವೃತ್ತಿ ಭವಿಷ್ಯ
ರೂಪಿಸುವಲ್ಲಿ ಅತಿ ಮುಖ್ಯವಾದ ಪದವಿ ಶಿಕ್ಷಣದಲ್ಲಿ ಪ್ರಥಮ
ಪದವಿಗೆ ಪ್ರವೇಶಾತಿ ಪಡೆದ ವಿದ್ಯಾರ್ಥಿಗಳು ನೂತನ ಶಿಕ್ಷಣ
ನೀತಿಯ ಕುರಿತಾಗಿ ಸಮರ್ಪಕವಾಗಿ ತಿಳಿದುಕೊಳ್ಳುವ
ಅವಶ್ಯಕತೆಯಿದೆ. ಪದವಿ ಶಿಕ್ಷಣ ಮುಂದಿನ ಉನ್ನತ ಶಿಕ್ಷಣಕ್ಕೂ
ಅಡಿಪಾಯವಾಗಿದ್ದು ವಿದ್ಯಾರ್ಥಿಗಳು ಆಸಕ್ತಿಯ
ವಿಷಯಗಳನ್ನು ಆಯ್ಕೆ ಮಾಡಿಕೊಂಡು
ಯಶಸ್ವಿಯಾಗುವoತೆ ಹಾರೈಸಿದರು. ಸಂಪನ್ಮೂಲ
ವ್ಯಕ್ತಿಗಳಾಗಿ ವಿಚಾರ ಸಂಕಿರಣ ನಡೆಸಿಕೊಟ್ಟ ಕಾವೂರು ಸರಕಾರಿ
ಪ್ರಥಮ ದರ್ಜೆ ಕಾಲೇಜಿನ ವಾಣಿಜ್ಯಶಾಸ್ತç ಸಹಾಯಕ
ಪ್ರಾಧ್ಯಾಪಕ ಮನೋಜ್ ಲೂಯಿಸ್ ರಾಷ್ಟ್ರೀಯ ಶಿಕ್ಷಣ ನೀತಿಯ

ಸಂಪೂರ್ಣ ವಿವರಗಳ ಜೊತೆಗೆ ವಿದ್ಯಾರ್ಥಿಗಳು ಇದನ್ನು
ಯಾವ ರೀತಿಯಲ್ಲಿ ತಮ್ಮ ಭವಿಷ್ಯ ರೂಪಿಸಿಕೊಳ್ಳಬಹುದೆಂದು
ವಿವರಿಸಿದರು. ಐಚ್ಚಿಕ ವಿಷಯಗಳಿಗೆ ಪೂರಕವಾಗಿರುವ
ಮುಕ್ತ ಆಯ್ಕೆಯ ವಿಷಯಗಳು, ಕೌಶಲಗಳು,
ಸಹಪಠ್ಯ ವಿಷಯಗಳು, ಕಡ್ಡಾಯ ವಿಷಯಗಳು,
ಹಾಜರಾತಿ, ಫೀಲ್ಡ್ ವರ್ಕ್ ಪ್ರಾಜೆಕ್ಟ್ವರ್ಕ್ ಇತ್ಯಾದಿ ವಿಷಯಗಳನ್ನು
ಕೂಲಂಕುಶವಾಗಿ ವಿವರಿಸಿ ವಿದ್ಯಾರ್ಥಿಗಳ ಸಂದೇಹಗಳನ್ನು
ಪರಿಹರಿಸಿದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಶ್ರೀ ರಾಧಾಕೃಷ್ಣ
ಪ್ರಾಸ್ತಾವಿಕ ಮಾತುಗಳಲ್ಲಿ ವಿಚಾಯ ಸಂಕಿರಣದ ಔಚಿತ್ಯ ತಿಳಿಸಿ
ಸ್ವಾಗತಿಸಿದರೆ ಐ.ಕ್ಯೂ.ಎ.ಸಿ. ಸಂಚಾಲಕಿ ಡಾ. ಮೇವಿ ಮಿರಾಂದ
ಬAದನಾರ್ಪಣಯಗೈದರು. ರಾಜ್ಯಶಾಸ್ತç ವಿಭಾಗ ಮುಖ್ಯಸ್ಥ
ಪ್ರಶಾಂತ್ ಎನ್. ಕಾರ್ಯಕ್ರಮ ನಿರೂಪಿಸಿದರು. ಎಲ್ಲಾ
ವಿಭಾಗಗಳ ಮುಖ್ಯಸ್ಥರು, ಬೋಧಕ/ಬೋಧಕೇತರ
ವೃಂದದವರು ಪಾಲ್ಗೊಂಡರು. ಪ್ರಥಮ ಪದವಿಯ ಕಲಾ,
ವಾಣಿಜ್ಯ, ಸಮಾಜಕಾರ್ಯ, ಬಿ.ಎಸ್ಸಿ., ಬಿ.ಎಸ್.ಡಬ್ಲೂö್ಯ., ಬಿ.ಸಿಎ., ಹಾಗೂ
ಬಿ.ಬಿ.ಎ. ವಿದ್ಯಾರ್ಥಿಗಳು ವಿಚಾರ ಸಂಕಿರಣದ ಪ್ರಯೋಜನ
ಪಡೆದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!