ತೆಂಕನಿಡಿಯೂರು ಕಾಲೇಜು: ಗಾಂಧಿ ಚಿಂತನ ಯಾನ ವಿಚಾರ ಸಂಕಿರಣ

ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು, ಉಡುಪಿ ಇಲ್ಲಿನ ಐಕ್ಯೂಎಸಿ, ಇತಿಹಾಸ ಮತ್ತು ರಾಜಕೀಯಶಾಸ್ತ್ರ ವಿಭಾಗಗಳು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ನೆಹರೂ ಚಿಂತನ ಕೇಂದ್ರ ಮತ್ತು ಗಾಂಧಿ ಅಧ್ಯಯನ ಕೇಂದ್ರಗಳ ಸಂಯುಕ್ತ ಆಶ್ರಯದಲ್ಲಿ ಗಾಂಧಿ ಚಿಂತನ ಯಾನದ ಭಾಗವಾಗಿ ಭಾರತವನ್ನು ಚಿಂತನಶೀಲವಾಗಿ ಕಟ್ಟಿದವರಲ್ಲಿ ತಿಲಕ್, ವಿವೇಕಾನಂದ, ಗಾಂಧಿ ಹಾಗೂ ಅಂಬೇಡ್ಕರ್ ಕುರಿತಾದ ಒಂದು ದಿನದ ವಿಚಾರ ಸಂಕಿರಣವನ್ನು ಆಯೋಜಿಸಲಾಯಿತು. ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀಮತಿ ಮಂಜುಳಾ ಪ್ರಸಾದ್ ಸ್ವಾತಂತ್ರö್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ರಾಷ್ಟç ನಿರ್ಮಾಣದ ಕುರಿತಾಗಿ ಚಿಂತಿಸಿದ್ದ ತಿಲಕ್, ವಿವೇಕಾನಂದ, ಗಾಂಧಿ ಅಂಬೇಡ್ಕರ್ ಕುರಿತಾಗಿ ತಿಳಿದುಕೊಳ್ಳುವ ಅವಶ್ಯಕತೆ ನಮ್ಮ ಯುವ ಜನತೆಗೆ ತೀರಾ ಅವಶ್ಯಕ ಹಾಗೂ ಕಾರ್ಯಾಗಾರ ಔಚಿತ್ಯಪೂರ್ಣವೆಂದರು. ಕಾರ್ಯಕ್ರಮದ ಕುರಿತಾಗಿ ಪ್ರಸ್ತಾವಿಕ ಮಾತುಗಳನ್ನಾಡಿದ ನೆಹರು ಚಿಂತನ ಕೇಂದ್ರ ಮತ್ತು ಗಾಂಧಿ ಅಧ್ಯಯನ ಕೇಂದ್ರದ ಪ್ರಭಾರ ನಿರ್ದೇಶಕರಾದ ಡಾ. ರಾಜಾರಾಂ ತೋಳ್ಪಾಡಿ ಎರಡೂ ಅಧ್ಯಯನ ಕೇಂದ್ರಗಳ ಪ್ರಮುಖ ಉದ್ದೇಶ ಮತ್ತು ಚಟುವಟಿಕೆಗಳ ಕುರಿತು ತಿಳಿಸುತ್ತಾ ಇಂದಿನ ಯುವ ಜನಾಂಗ ಭಾರತವನ್ನು ಚಿಂತನ ಶೀಲವಾಗಿ ನಿರ್ಮಾಣಗೊಳಿಸಿದ ಚಿಂತನೆಯನ್ನು ಮೂಲ ರೂಪದಲ್ಲಿ ಅರ್ಥೈಸಿಕೊಳ್ಳುವ ಅಗತ್ಯತೆಯಿದ್ದು ಇದರು ಭಾರತವನ್ನು ಭವಿಷ್ಯದಲ್ಲಿ ಪ್ರಜಾತಂತ್ರ, ಸೆಕ್ಯೂಲರ್ ಆಗಿ ಬೆಳೆಸುವಲ್ಲಿ ನಿರ್ಣಾಯಕವಾಗಬಲ್ಲದೆಂದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಸುರೇಶ್ ರೈ ಕೆ. ಸ್ವಾತಂತ್ರö್ತ ಹೋರಾಟದ ಜೊತೆಗೆ ಸ್ವತಂತ್ರ ಭಾರತದ ನಿರ್ಮಾಣದ ದೂರದರ್ಶಕ ಹೊಂದಿದ್ದ ವಿವೇಕಾನಂದ, ತಿಲಕ್, ಗಾಂಧಿ, ಅಂಬೇಡ್ಕರ್ ಭಾರತದ ರಾಜಕೀಯ-ಸಾಮಾಜಿಕ ಚಿಂತಕರಲ್ಲಿ ಮುಖ್ಯರಾದವರು ಎಂದರು. ಐ.ಕ್ಯೂ.ಎ.ಸಿ. ಸಂಚಾಲಕರಾದ ಡಾ. ಮೇವಿ ಮಿರಾಂದ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ದುಗ್ಗಪ್ಪ ಕಜೆಕಾರ್ ಉಪಸ್ಥಿತರಿದ್ದರು. ವಿಚಾರ ಸಂಕಿರಣ ಸಂಘಟಿಸಿದ ರಾಜಕೀಯಶಾಸ್ತç ವಿಭಾಗ ಮುಖ್ಯಸ್ಥ ಶ್ರೀ ಪ್ರಶಾಂತ ಎನ್. ಸ್ವಾಗತಿಸಿದರೆ, ರಾಜಕೀಯಶಾಸ್ತç ಉಪನ್ಯಾಸಕ ಶ್ರಿ ರವಿ ಚಿತ್ರಾಪುರ ವಂದಿಸಿದರು. ಹಾಗು ಕನ್ನಡ ವಿಭಾಗ ಸಹಾಯಕ ಪ್ರಾಧ್ಯಾಪಕ ಡಾ. ವೆಂಕಟೇಶ ಹೆಚ್.ಕೆ. ನಿರೂಪಿಸಿದರು.

ವಿಚಾರ ಸಂಕಿರಣ ಮೊದಲ ಗೋಷ್ಠಿಯಲ್ಲಿ ತಿಲಕರ ರಾಜಕೀಯ, ಸಾಮಾಜಿಕ ಚಿಂತನೆಗಳ ಕುರಿತಾಗಿ ಪತ್ರಿಕ ಮಂಡಿಸಿದ ಡಾ. ಜಿ. ಶಂಕರ್ ಸರಕಾರಿ ಮಹಿಳಾ ಪ್ರಥಮ ದಜೆ ಕಾಲೇಜು ಅಜ್ಜರಕಾಡು ಇದರ ಇತಿಹಾಸ ಸಹಪ್ರಾಧ್ಯಾಪಕ ಡಾ. ರಾಮದಾಸ್ ಪ್ರಭು ತಿಲಕರು ಗಾಂಧಿಪೂರ್ವದ ಕಾಲದ ಬಲುದೊಡ್ಡ ಜನನಾಯಕ ಕೇವಲ ರಾಜಕೀಯ ಹೋರಾಟವಲ್ಲದೇ ಆಳವಾದ ಧಾರ್ಮಿಕ, ಸಾಂಸ್ಕೃತಿಕ ಚಿಂತನೆಯೊAದಿಗೆ ಅಹಿಂಸೆಯನ್ನು ವಾಸ್ತವಲ್ಲಿ ಒಪ್ಪಿಕೊಂಡಿದ್ದರೂ ತಾತ್ವಿಕ ನೆಲೆಯಲ್ಲಲ್ಲ. ರಾಷ್ಟçದ ಪರಿಕಲ್ಪನೆಯನ್ನು ಧಾರ್ಮಿಕ ನೆಲೆಯಲ್ಲಿ ಪ್ರತಿಪಾದಿಸಿ ಸಮಾಜ ಸುಧಾರಣೆಯನ್ನು ಜನರೇ ನಿರ್ಧರಿಸುವ ಸ್ವಾಯತ್ತತೆ ಮತ್ತು ಸ್ವಾತಂತ್ರö್ಯವನ್ನು ಪ್ರತಿಪಾದಿಸಿದರು ಎಂಬಿತ್ಯಾದಿ ವಿಚಾರಗಳನ್ನು ತಿಳಿಸಿದರು. ಅರ್ಥಶಾಸ್ತç ವಿಭಾಗದ ಮುಖ್ಯಸ್ಥ ಡಾ. ಗೋಪಾಲಕೃಷ್ಣ ಎಂ. ಗಾಂವ್ಕರ್ ಮಾಡರೇಟರ್ ಆಗಿ ಸಹಕರಿಸಿದರು.

ಎರಡನೇ ಗೋಷ್ಠಿಯಲ್ಲಿ ರಾಜಕೀಯಶಾಸ್ತ್ರ ಸಹಾಯಕ ಪ್ರಾಧ್ಯಾಪಕ ಶ್ರೀ ಪ್ರಶಾಂತ ಎನ್. ವಿವೇಕಾನಂದರ ಧರ್ಮ, ಸಮನ್ವಯ ಮತ್ತು ಸಮಾಜದ ಕುರಿತಾಗಿ ಮಾತನಾಡುತ್ತಾ “ವಿವೇಕಾನಂದರ ಧಾರ್ಮಿಕ ಚಿಂತನೆಯು ಇಂದಿನ ಮತಧರ್ಮಗಳ ಸಂಕುಚಿತಗಳಿಲ್ಲದೆ ಎಲ್ಲಾ ಧರ್ಮಗಳನ್ನು ಗೌರವಿಸುವ ಸಮನ್ವಯ ಮತ್ತು ಸುಧಾರಿತ ಹಿಂದೂ ಧರ್ಮದ ಪ್ರತಿಪಾಕರಾಗಿದ್ದರು. ವ್ಯಕ್ತಿಯ ವಿವೇಕ ಜಾಗೃತಗೊಳಿಸಿ ಮಾನವತಾವಾದಡೆಗೆ ಕೊಂಡೊಯ್ಯುವಲ್ಲಿ ಭಾರತ ವಿಶ್ವಕ್ಕೆ ಮಾದರಿಯಾಗಬೇಕೆಂದ ವಿವೇಕಾನಂದರು ಭಾರತದ ರಾಷ್ಟಿçÃಯ ಹೋರಾಟದ ಪೂರ್ವಿಕ ಎಂದರು. ಸಮಾಜಶಾಸ್ತç ವಿಭಾಗದ ಮುಖ್ಯಸ್ಥ ಡಾ. ರಾಘವ ನಾಯ್ಕ ಗೋಷ್ಠಿಯನ್ನು ಮಾಡರೇಡರ್ ಆಗಿ ನಡೆಸಿಕೊಟ್ಟರು.

ವಾತ್ಸಲ್ಯಮಯಿ ಗಾಂಧಿ ಎಂಬ ವಿಷಯವಾಗಿ ಮೂರನೇ ಗೋಷ್ಠಿಯಲ್ಲಿ ಮಾತನಾಡಿದ ಎಸ್.ಎಂ.ಎಸ್. ಆಂಗ್ಲಮಾಧ್ಯಮ ಶಾಲೆ ಬ್ರಹ್ಮಾವರದ ಪ್ರಾಂಶುಪಾಲೆ ಅಭಿಲಾಷ ಎಸ್. ಸಾಂಸಾರಿಕ ಮತ್ತು ಸಾರ್ವಜನಿಕ ಬದುಕಿನ ವ್ಯತ್ಯಾಸಗಳಿಲ್ಲದೇ ಅಹಿಂಸೆಯನ್ನು ಪ್ರತಿಪಾದಿಸಿದ ಗಾಂಧಿಯ ಬದುಕು ಹೆಣ್ತತನ ವಾತ್ಸಲ್ಯ ರೂಪ, ಸತ್ಯ, ಬ್ರಹ್ಮಚರ್ಯ, ಉಪವಾಸ, ಮೌನವೃತ ಎಲ್ಲವೂ ಅವರಲ್ಲಿಯ ವಾತ್ಸಲ್ಯಮಯಿ ವ್ಯಕ್ತಿತ್ವವನ್ನು ತಿಳಿಸುತ್ತದೆ. ಧರ್ಮ ಮತ್ತು ರಾಜಕಾರಣವನ್ನು ಪ್ರತ್ಯಖಗೊಳಿಸಿದ ಗಾಂಧಿ ಬಲುದೊಡ್ಡ ನೈತಿಕ ಶಕ್ತಿಯಾಗಿದ್ದು ಎಂದರು. ಆಂಗ್ಲಭಾಷಾ ವಿಭಾಗ ಮುಖ್ಯಸ್ಥ ಶ್ರೀ ಶ್ರೀಧರ ಭಟ್ ಗೋಷ್ಠಿಯನ್ನು ನಿರ್ವಹಿಸಿದರು.

ನಾಲ್ಕನೇ ಗೋಷ್ಠಿಯಲ್ಲಿ ಗಾಂಧಿ, ಅಂಬೇಡ್ಕರ್ ಸಂವಾದ ಕುರಿತಾಗಿ ವಿಚಾರ ಮಂಡಿಸಿದ ಕಾರ್ನಾಡು-ಮುಲ್ಕಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಡಾ. ವಾಸುದೇವ ಬೆಳ್ಳೆ ಆತ್ಮಪರಿವರ್ತನೆಯ ನೈತಿಕ ಮಾರ್ಗದಲ್ಲಿ ಅಸ್ಪೃಶ್ಯತೆಯ ವಿರುದ್ಧ ಗಾಂಧಿ ಹೋರಾಡಿದ್ದರೆ ಸಾಂವಿಧಾನಿಕ ಕಾನೂನುಗಳ ಮೂಲಕ ಅಸ್ಪೃಶ್ಯತೆಗೆ ಶಾಶ್ವತ ಅಂತ್ಯ ಕಾಣಬಯಸಿದ್ದ ಅಂಬೇಡ್ಕರ್‌ರವರನ್ನು ಸರಿ-ತಪ್ಪುಗಳ ಪ್ರಶ್ನೆಯಿಂದ ನೋಡದೇ ಅವರಿಬ್ಬರ ಹೋರಾಟದ ನೆಲೆಗಟ್ಟುಗಳ ವ್ಯತ್ಯಾಸವನ್ನು ಗುರುತಿಸುವುದು ಮುಖ್ಯ ಎಂದರು. ಕನ್ನಡ ವಿಭಾಗದ ಮುಖ್ಯಸ್ಥ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್. ಗೋಷ್ಠಿಯನ್ನು ನಡೆಸಿಕೊಟ್ಟರು. ವಿಚಾರ ಸಂಕಿರಣದಲ್ಲಿ ಕಾಲೇಜಿನ ಬೋಧಕ/ಬೋಧಕೇತರರ ಜೊತೆ ಬಿ.ಎ. ಇತಿಹಾಸ ಮತ್ತು ಸಮಾಜಶಾಸ್ತç ಹಾಗೂ ಸಮಾಜಕಾರ್ಯ ಮತ್ತು ಕನ್ನಡ ಸ್ನಾತಕೋತ್ತರ ವಿದ್ಯಾರ್ಥಿಗಳು ಭಾವಹಿಸಿದ್ದರು.

 
 
 
 
 
 
 
 
 
 
 

Leave a Reply