ತೆಂಕನಿಡಿಯೂರು ಕಾಲೇಜಿನಲ್ಲಿ ಫೆಬ್ರವರಿ 2ರಂದು ಕ್ಯಾಂಪಸ್ ಸಂದರ್ಶನ

ಉಡುಪಿ: ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಉಡುಪಿ ಇಲ್ಲಿ ಫೆಬ್ರವರಿ 2ರಂದು ಮಂಗಳೂರಿನ ಪ್ರತಿಷ್ಠಿತ ದಿಯಾ ಸಿಸ್ಟಮ್ (ಗ್ಲೋ ಟಚ್ ಟೆಕ್ನಾಲಜೀಸ್) ನೇರ ನೇಮಕಾತಿಗೆ ಕ್ಯಾಂಪಸ್ ಸಂದರ್ಶನ ಏರ್ಪಡಿಸಿದೆ.

ಈಗಾಗಲೇ ಬಿ.ಎಸ್.ಸಿ, ಬಿ.ಸಿ.ಎ, ಎಂ.ಸಿ.ಎ, ಎಂ.ಎಸ್.ಸಿ, ಬಿ.ಇ (ಸಿವಿಲ್ ಮತ್ತು ಮೆಕಾನಿಕಲ್ ಹೊರತುಪಡಿಸಿ), ಬಿ.ಕಾಂ (ಕಂಪ್ಯೂಟರ್ ಅಪ್ಲಿಕೇಶನ್) ಮುಗಿಸಿಕೊಂಡಿರುವ ಅಭ್ಯರ್ಥಿಗಳು ಪೂರ್ವಾಹ್ನ 9.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ಸಂದರ್ಶನಕ್ಕೆ ಬರಬಹುದು. ಅಭ್ಯರ್ಥಿಗಳು ಆಧಾರ್ ಕಾರ್ಡ್, ಪದವಿ ಪ್ರಮಾಣ ಪತ್ರ, ಅಂಕಪಟ್ಟಿಯೊಂದಿಗೆ ಹಾಜರಾಗಬಹುದು ಎಂದು ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ 9448796357 ಸಂಪರ್ಕಿಸಿ.

 
 
 
 
 
 
 
 
 
 
 

Leave a Reply