ಯಾವ ಕಾರಣಕ್ಕೂ ಶಾಲೆಗಳನ್ನು ಆರಂಭಿಸಬಾರದು~ ಸಂಸದೆ ಶೋಭಾ ಕರಂದ್ಲಾಜೆ 

ಚಿಕ್ಕಮಗಳೂರು: ಕೋವಿಡ್ 19 ಸೋಂಕಿತರ ಸಂಖ್ಯೆ ದಿನದಿಂದ ಏರಿಕೆಯಾಗುತ್ತಿರುವ ಹಿನ್ನೆಲೆ ಈ ವರ್ಷವನ್ನು ಪರೀಕ್ಷಾ ರಹಿತ ವರ್ಷ ಎಂದು ಘೋಷಿಸಬೇಕು. ಯಾವ ಕಾರಣಕ್ಕೂ ಶಾಲೆಗಳನ್ನು ಆರಂಭಿಸಬಾರದು ಎಂದು ಉಡುಪಿ-ಚಿಕ್ಕ ಮಗಳೂರು ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆ ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಶುಕ್ರವಾರ ಮಾತನಾಡಿದ ಅವರು, ದೇಶ ಮತ್ತು ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಕೊರೊನಾದಿಂದ ಸಾವಿಗೀಡಾಗಿದ್ದಾರೆ. ಕೊರೊನಾ ವಾರಿಯರ್ಸ್‍ಗಳು ಕೂಡ ಬಲಿಯಾಗುತ್ತಿರುವ ಈ ಸಮಯದಲ್ಲಿ ಮತ್ತೆ ಶಾಲೆಯನ್ನು ಆರಂಭಿಸುವ ಬಗ್ಗೆ ಹಾಗೂ ಶಿಕ್ಷಕರು ಶಾಲೆಗೆ ಹೋಗುವುದರ ಬಗ್ಗೆ ಚರ್ಚಿಸಲಿಗುತ್ತಿದೆ. ಆದರೆ ಈ ವರ್ಷ ಶಾಲೆಗಳನ್ನು ಪ್ರಾರಂಭಿಸಿವುದು ಬೇಡ ಎನ್ನುವುದು ನನ್ನ ವಿನಂತಿ ಎಂದಿದ್ದಾರೆ.

ಈಗಾಗಲೇ ರಾಜ್ಯ ಸೇರಿದಂತೆ ದೇಶದಾದ್ಯಂತ ಹಲವು ಶಿಕ್ಷಕರು ಸಾವನ್ನಪ್ಪಿದ್ದಾರೆ. ಶಿಕ್ಷಕರು ಸಹ ದೇಶದ ಆಸ್ತಿ ಹಾಗಾಗಬಾರದು. ಮಕ್ಕಳಿಗೂ ತೊಂದರೆಯಾಗಬಾರದು, ಮನೆಯಲ್ಲಿ ಒಂದು ಅಥವಾ ಎರಡು ಮಕ್ಕಳಿರುತ್ತಾರೆ. ಪೋಷಕರಿಗೆ ಅವರನ್ನು ಶಾಲೆಗೆ ಕಳುಹಿಸುವ ಮನಸ್ಥಿತಿ ಈಗಿರುವುದಿಲ್ಲ. ಅವರನ್ನು ಸಮಸ್ಯೆ ಅಥವಾ ಕಾಯಿಲೆಗೆ ದೂಡುವ ಮನಸ್ಸು ಪೋಷಕರಿಗೆ ಇರುವುದಿಲ್ಲ .

ಪ್ರಧಾನಿ ಮೋದಿಯವರು ಕಳೆದ ಮಾರ್ಚ್‍ನಲ್ಲೇ ಮೊದಲು ಜೀವ ಉಳಿಸೋಣ, ನಂತರ ಜೀವನ ಮಾಡೋಣ ಎಂದಿದ್ದರು. 2020ರ ವರ್ಷ ಜೀವ ಉಳಿಸುವ ವರ್ಷ. ಮುಂದಿನ ಡಿಸೆಂಬರ್‍ ವರೆಗೂ ಈ ನಿಟ್ಟಿನಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕಿದೆ ಹಾಗಾಗಿ ಸದ್ಯಕ್ಕೆ ಶಾಲೆ ಆರಂಭಿಸುವುದು ಸೂಕ್ತವಲ್ಲ ಎಂದಿದ್ದಾರೆ.

 
 
 
 
 
 
 
 
 
 
 

Leave a Reply