ವಿದ್ಯಾಗಮ ಪುನರಾರಂಭ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸುವ ಕುರಿತು ಉಡುಪಿ ವಲಯ ಪ್ರಾಥಮಿಕ ಹಾಗು ಪ್ರೌಢಶಾಲಾ ಮುಖ್ಯ ಶಿಕ್ಷಕರ ಪೂರ್ವಭಾವಿ ಸಭೆ

ಜನವರಿ 01 ರಂದು 6 ರಿಂದ 9 ನೇ ತರಗತಿಯ ವಿಧ್ಯಾರ್ಥಿಗಳಿಗೆ ವಿದ್ಯಾಗಮ ಪುನರಾರಂಭ ಹಾಗೂ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ತರಗತಿ ನಡೆಸುವ ಕುರಿತು ಉಡುಪಿ ವಲಯ ಪ್ರಾಥಮಿಕ ಹಾಗು ಪ್ರೌಢಶಾಲಾ ಮುಖ್ಯ ಶಿಕ್ಷಕರ ಪೂರ್ವಭಾವಿ ಸಭೆಯು ಉಡುಪಿ ಬಾಲಕಿಯರ ಪ ಪೂ ಕಾಲೇಜಿನಲ್ಲಿ ನಡೆಯಿತು.
 
ಸಭೆಯಲ್ಲಿ ಭಾಗವಹಿಸಿದ ಜಿಲ್ಲಾ ಸಾ​.ಶಿ ಇಲಾಖೆಯ ಉಪನಿರ್ದೇಶಕ ಎನ್ ಎಚ್ ನಾಗೂರು ಮಾತನಾಡಿ ‘ಮಕ್ಕಳ ವಿದ್ಯಾಭ್ಯಾಸ ನಿಂತ ನೀರಾಗಬಾರದು.​ ​ಕೊವಿಡ್ ವೈರಸ್ ಹರಡುವಿಕೆಯ ಈ ಸಂದಿಗ್ದ ಪರಿಸ್ಥಿತಿಯಲ್ಲಿ ವಿದ್ಯಾ ದೇಗುಲವು ರೋಗ ಹರಡುವ ಕೇಂದ್ರ ಆಗಬಾರದು. ಶಿಕ್ಷಕರು ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಬೇಕು’ ಎಂದರು.​​
 
ಸಭೆಯಲ್ಲಿ​ ​ಉಪಸ್ಥಿತರಿದ್ದ ಉಡುಪಿ ಬಿ ಇ ಒ  ಮಂಜುಳಾ ಕೆ ಮಾತನಾಡಿ ‘ಶಿಕ್ಷಕರು ತಮ್ಮ ಆರೋಗ್ಯದೊಂದಿಗೆ ಮಕ್ಕಳ ಆರೋಗ್ಯದ ಕುರಿತು ಹೆಚ್ಚಿನ ಗಮನಹರಿಸಬೇಕು.​ ​ಈ ಮೂಲಕ ಪೋಷಕರಿಗೆ ಹಾಗೂ ಸಮಾಜಕ್ಕೆ ಅತ್ಮಸ್ಥೈರ್ಯ ತುಂಬುವ ಕಾರ್ಯ ಶಿಕ್ಷಕರಿಂದ ಆಗಬೇಕಾಗಿದೆ’ ಎಂದರು.​ 
 
ಸಭೆಯಲ್ಲಿ ಶಾಲಾ ಪ್ರಾರಂಭೋತ್ಸವ ಅಚರಿಸುವುದಕ್ಕಿಂತ ಮೊದಲು ಹಾಗೂ ಶಾಲಾ ಅವಧಿಯಲ್ಲಿ ಕೈಗೊಳ್ಳಬೇಕಾದ ಕಾರ್ಯದ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ವೇದಿಕೆಯಲ್ಲಿ ಒಳಕಾಡು ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕಿ ನಿರ್ಮಲಾ ಉಪಸ್ಥಿತರಿದ್ದರು. ಪ್ರಾರಂಭದಲ್ಲಿ ಸಂಸ್ಥೆಯ ಮುಖ್ಯ ಶಿಕ್ಷಕ ವಿಶ್ವನಾಥ ಬಾಯರಿ ಸ್ವಾಗತಿಸಿದರು,​ ​ಸಹ ಶಿಕ್ಷಕಿ ನಾಗರತ್ನ ​ಭಾಗವತ್  ವಂದಿಸಿದರು. 
 
 
 
 
 
 
 
 
 
 
 

Leave a Reply