ಶಿಕ್ಷಣ ಮತ್ತು ಜೀವನ ಮೌಲ್ಯಗಳು ವಿದ್ಯಾರ್ಥಿಯ ಭವಿಷ್ಯದ ಕನ್ನಡಿ: ಎ ಪಿ ಕೊಡಂಚ

ಯುವಜನತೆಯ ಆದರ್ಶ ಸ್ವಾಮಿ ವಿವೇಕಾನಂದರು. ವಿದ್ಯಾರ್ಥಿಗಳು ತಮ್ಮ ಕಲಿಕೆಯ ಅವಧಿ ಯಲ್ಲಿ ವಾಸ್ತವದ ರಚನಾತ್ಮಕ ಬದಲಾವಣೆಗಳ ಜೊತೆಗೆ ಗುರು ಹಿರಿಯರ ಮಾರ್ಗದರ್ಶನ, ಅರಿವಿನ ದಾರಿಯಲ್ಲಿ ಮುನ್ನಡೆದಾಗ ಜೀವನದಲ್ಲಿ ಸಾಧನೆಯ ಶಿಖರವನ್ನು ಏರಲು ಸಾಧ್ಯ. 
ಪಠ್ಯದ ಜೊತೆಗೆ ಸಾಮಾನ್ಯ ಜ್ಞಾನದ ತಿಳುವಳಿಕೆ ಇಂದು ಅಗತ್ಯವಾಗಿ ದೊರಕುವಂತಾದಾಗ ಯುವಜನತೆ ಮೌಲ್ಯಭರಿತ ಜೀವನವನ್ನು ಸಾಗಿಸಲು ಪ್ರೇರಕವಾಗುತ್ತದೆ. ಪ್ರಸ್ತುತ ಆಧುನಿಕ ಯುಗದಲ್ಲಿ ಯುವಜನತೆ ಮೊಬೈಲ್ ಹಾಗೂ ಸಾಮಾಜಿಕ ಮಾಧ್ಯಮಗಳ ಗುಲಾಮರಾಗಿ, ಹೊರಜಗತ್ತಿನ ಅರಿವಿಲ್ಲದೆ ಮಾನವೀಯ ಸಂಬಂಧಗಳು ಕ್ಷೀಣಿಸುತ್ತಿರುವುದು ತುಂಬಾ ವಿಷಾಧನೀಯವಾಗಿದೆ. 
ಆದ್ದರಿಂದ ವಿದ್ಯಾರ್ಥಿಗಳನ್ನು ಸರಿಯಾದ ದಾರಿಯಲ್ಲಿ ಮುನ್ನಡೆಸುವಲ್ಲಿ ಶಿಕ್ಷಣ ಸಂಸ್ಥೆಗಳ ಜೊತೆಗೆ ಹೆತ್ತವರ ಪಾತ್ರ ಕೂಡ ಮಹತ್ತರವಾಗಿದೆ ಎಂದು ಇನ್ನಂಜೆ ಎಸ್.ವಿ.ಎಚ್. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಎ ಪಿ ಕೊಡಂಚರವರು ಶಿರ್ವ ಸಂತ ಮೇರಿ ಕಾಲೇಜಿನ ರೋವರ್ಸ್-ರೇಂರ‍್ಸ್ ಹಾಗೂ ರಾಷ್ಟ್ರೀಯ  ಸೇವಾ ಯೋಜನೆಯ ವತಿಯಿಂದ ಸ್ವಾಮಿ ವಿವೇಕಾನಂದರ ಜನ್ಮ ದಿನಾಚರಣೆಯ ಪ್ರಯುಕ್ತ ಹಮ್ಮಿಕೊಂಡ ರಾಷ್ಟ್ರೀಯ ಯುವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿದ್ಯಾರ್ಥಿಗಳನ್ನುದ್ಧೇಶಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲರಾದ ಡಾ.ಹೆರಾಲ್ಡ್ ಮೋನಿಸ್ ರವರು, ಇಂದಿನ ಯುವಜನತೆ ಅನುಕರಣೆಗೆ ಮಾರು ಹೋಗಿದ್ದಾರೆ. ಹಾಗಾಗಿ ತಮ್ಮ ಸ್ವಂತ ಪ್ರತಿಭಾ ಶಕ್ತಿಯನ್ನು ಕಳೆದುಕೊಂಡಿದ್ದಾರೆ. ಈ ನಿಟ್ಟಿನಲ್ಲಿ ಇಂತಹ ಮೌಲ್ಯವರ್ಧಕ ಕಾರ್ಯ ಕ್ರಮಗಳು ಯುವಕರಲ್ಲಿ ಸಾಂಸ್ಕೃತಿಕ ತಲಪಾಯವನ್ನು ಗಟ್ಟಿಗೊಳಿಸುವುದು ಮಾತ್ರವಲ್ಲ ಮುಂದಿನ ಅವರ ಜೀವನದ ಭದ್ರ ಬುನಾದಿಗೆ ಮುನ್ನುಡಿ ಬರೆಯಲು ಸಾಧ್ಯ ಎಂದು ಹೇಳಿದರು. 

ವೇದಿಕೆಯಲ್ಲಿ ಎನ್.ಎಸ್.ಎಸ್ ಯೋಜನಾಧಿಕಾರಿಗಳಾದ ಶ್ರೀ. ಪ್ರೇಮನಾಥ್, ಕುಮಾರಿ ರಕ್ಷಾ, ರೋವರ್ ಸ್ಕೌಟ್ ಲೀಡರ್ ಶ್ರೀ. ಪ್ರಕಾಶ್ ಹಾಗೂ ರೇಂಜರ್ ಲೀಡರ್ ಶ್ರೀಮತಿ ಸಂಗೀತಾ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿನಿಯರಾದ ಪ್ರಜ್ಞಾ ಅತಿಥಿ ಪರಿಚಯ ಮಾಡಿ ಸ್ವಾಗತಿಸಿದರು, ಸಮೀಕ್ಷಾ ವಂದನಾರ್ಪಣೆ ಮಾಡಿದರು, ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

 
 
 
 
 
 
 
 
 
 
 

Leave a Reply