Janardhan Kodavoor/ Team KaravaliXpress
31 C
Udupi
Friday, February 26, 2021

ಎಸ್.ಡಿ.ಎಮ್. ಆಯುರ್ವೇದ ವಿದ್ಯಾರ್ಥಿಗಳ ವಿಶಿಷ್ಟ ಸಾಧನೆ – ವಿಧಾನ ಪರಿಷತ್ ಸದ್ಯಸ ರುದ್ರೇಗೌಡರಿಂದ ಸನ್ಮಾನ

2019-20ರ ಶೈಕ್ಷಣಿಕ ವರ್ಷದಲ್ಲಿ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ, ಬೆಂಗಳೂರು ನಡೆಸಿದ ಸ್ನಾತಕೋತ್ತರ ವಿಭಾಗದ ಅ೦ತಿಮ ಪರೀಕ್ಷೆಯಲ್ಲಿ ಉಡುಪಿ ಎಸ್.ಡಿ.ಎಂ. ಆಯುರ್ವೇದ ಕಾಲೇಜು ೫೮ ರ‍್ಯಾಂಕ್‌ಗಳನ್ನು ಪಡೆಯುವ ಮೂಲಕ ವಿಶಿಷ್ಟ ಸಾಧನೆಯನ್ನು ಮಾಡಿದೆ. ಸ್ನಾತಕೋತ್ತರ ಪರೀಕ್ಷೆಯಲ್ಲಿ ವಿವಿಧ ವಿಭಾಗದ ವಿದ್ಯಾರ್ಥಿಗಳು ರ‍್ಯಾಂಕ್ ಪಡೆಯುವ ಮೂಲಕ ಚಿನ್ನದ ಪದಕಗಳನ್ನು ಗಳಿಸಿದ್ದಾರೆ.
ಎಲ್ಲಾ ರ‍್ಯಾಂಕ್ ವಿಜೇತರಿಗೆ ಸನ್ಮಾನ ಪತ್ರವನ್ನು ವಿತರಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ  ರುದ್ರೇ ಗೌಡರವರು ಕಾಲೇಜಿನ ಆಡಳಿತ ಮಂಡಳಿ, ಅಧ್ಯಾಪಕ ವರ್ಗ ಹಾಗೂ ವಿದ್ಯಾರ್ಥಿಗಳ ಕಠಿಣ ಪರಿಶ್ರಮವೇ ಈ ಸಾಧನೆಗೆ ಕಾರಣ ಹಾಗೂ ಆಯುರ್ವೇದ ವೈದ್ಯಕೀಯ ಪದ್ಧತಿಗೆ ಪ್ರಸ್ತುತ ಉತ್ತಮ ಬೇಡಿಕೆ ಹೆಚ್ಚುತ್ತಿದ್ದು, ಎಲ್ಲಾ ವೈದ್ಯರು ಹಾಗೂ ವಿದ್ಯಾರ್ಥಿಗಳು ಆಯುರ್ವೇದ ವೈದ್ಯ ಪದ್ಧತಿಯನ್ನು ಜಗತ್ತಿಗೆ ಪಸರಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಪ್ರಯತ್ನಕ್ಕೆ ಕೈ ಜೋಡಿಸಿ ಮುಂದಿನ ದಿನಗಳಲ್ಲಿ ಆಯುರ್ವೇದ ವೈದ್ಯಕೀಯ ಪದ್ಧತಿಯು ಜಗತ್ತಿನ ವೈದ್ಯಕೀಯ ವ್ಯವಸ್ಥೆಯಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಯಾವ ಸಂದೇಹವೂ ಇಲ್ಲ. 
ಈ ನಿಟ್ಟಿನಲ್ಲಿ ಎಲ್ಲಾ ವಿದ್ಯಾರ್ಥಿಗಳ ಹಾಗೂ ಆಯುರ್ವೇದ ವೈದ್ಯರ ಜವಾಬ್ದಾರಿಯು ಹೆಚ್ಚಿದ್ದು, ಕೋವಿಡ್ ಸಂಕಷ್ಟದಲ್ಲಿ ಸಮಾಜದ ಆರೋಗ್ಯ ಸುಧಾರಿಸುವಲ್ಲಿ ಆಯುರ್ವೇದ ಔಷಧಗಳ ಮಹತ್ವವು ಜನರಿಗೆ ತಲುಪಿದ್ದು, ಆಯುರ್ವೇದಕ್ಕೆ ಮತ್ತಷ್ಟು ಬಲ ಬಂದಂತಾಗಿದೆ ಎಂದು ಈ ಸಂದರ್ಭದಲ್ಲಿ ಹೇಳಿದರು. 
ಇದೇ ಸಂದರ್ಭದಲ್ಲಿ ೨೦೨೧ ರ ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ನೆರವೇರಿಸಲಾಯಿತು. ಈ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಯು.ಎನ್. ಪ್ರಸಾದ್ ಅವರು ಉಪಸ್ಥಿತರಿದ್ದು, ಕಾಲೇಜಿನ ಸಾಧನೆಯ ಮಾನದಂಡ ಆ ಕಾಲೇಜಿನಲ್ಲಿ ಓದುವ ವಿದ್ಯಾರ್ಥಿಗಳು ಗಳಿಸುವ ರ‍್ಯಾಂಕ್‌ಗಳು ಹಾಗೂ ಗಳಿಸುವ ಅಂಕಗಳ ಮೇಲೆ ನಿರ್ಧಾರವಾಗುತ್ತದೆ. 
ಪ್ರತೀ ವಿದ್ಯಾರ್ಥಿಯು ಕೌಶಲ್ಯವನ್ನು ಬೆಳೆಸಿಕೊಂಡು ಉತ್ತಮ ವೈದ್ಯರಾಗುವಲ್ಲಿ ಪಾತ್ರವಹಿಸಬೇಕು ಎಂದು ಹೇಳಿದರು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ  ಡಾ. ಮಮತಾ ಕೆ.ವಿ., ಸ್ನಾತಕೋತ್ತರ ವಿಭಾಗದ ಡೀನ್ ಡಾ. ನಿರಂಜನ್ ರಾವ್, ಸ್ನಾತಕೋತ್ತರ ವಿಭಾಗದ ಸಹಾಯಕ ಡೀನ್ ಡಾ. ನಾಗರಾಜ್ ಎಸ್., ಸ್ನಾತಕೋತ್ತರ ವಿಭಾಗದ ಸಂಯೋಜಕರಾದ ಡಾ. ಅಶೋಕ್ ಕುಮಾರ್ ಬಿ.ಎನ್. ರವರು ವೇದಿಕೆಯಲ್ಲಿ ಉಪಸ್ಥಿತರಿದ್ದು ರ‍್ಯಾಂಕ್ ವಿಜೇತರಿಗೆ ಶುಭ ಹಾರೈಸಿದರು. 
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ವೈದ್ಯರು, ಪ್ರಾಧ್ಯಾಪಕರು, ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸ್ನಾತಕೋತ್ತರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಕಾರ್ಯಕ್ರಮವನ್ನು ನಿರ್ವಹಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ 

ಉಡುಪಿ:  ಕಿದಿಯೂರು ಹೋಟೆಲ್ ನಲ್ಲಿರುವ  ಶ್ರೀ ನಾಗದೇವರ ಸನ್ನಿಧಾನದಲ್ಲಿ 34 ನೇ ವಾರ್ಷಿಕ ಮಹಾಪೂಜೆ  ಶುಕ್ರವಾರ ವಿದ್ವಾನ್ ಕಬಿಯಾಡಿ​ ​ಜಯರಾಮ ​ಆಚಾರ್ಯ  ಮಾರ್ಗ ದರ್ಶನದಲ್ಲಿ  ಆಶ್ಲೇಷಾಬಲಿ , ನವಕ ಕಲಶ, ಪ್ರಧಾನ ಹೋಮ...

ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ನೂತನ  ಅಧ್ಯಕ್ಷೆ 

ಉಡುಪಿ: ಭಾರತೀಯ ಚಾರ್ಟರ್ಡ್ ಅಕೌಟೆಂಟ್ಸ್ ಸಂಸ್ಥೆಯ ದಕ್ಷಿಣ ಭಾರತ ಪ್ರಾಂತೀಯ ಮಂಡಳಿ ಉಡುಪಿ ಶಾಖೆಗೆ ಸಿಎ. ಕವಿತ ಎಮ್ ಪೈ ಟಿ ಅವರು 2021-22 ನೇ ಸಾಲಿಗೆ 20ನೇ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಈ...

ಶ್ರೀ ದುರ್ಗಾ ದೇವಸ್ಥಾನ ಕುಂಜೂರುವಿನಲ್ಲಿ ಮಾರ್ಚ್,1ರಂದು ತ್ರಿಕಾಲ ಪೂಜೆ 

 ದುರ್ಗಾ ಸೇವಾ ಸಮಿತಿ ಕುಂಜೂರು ಇವರು ಆಯೋಜಿಸುವ  ಶ್ರೀ ದುರ್ಗಾ ದೇವಸ್ಥಾನ ಕುಂಜೂರು ಇಲ್ಲಿ ಮಾರ್ಚ್,1 ರಂದು  ತ್ರಿಕಾಲ ಪೂಜೆ ಅನ್ನಸಂತರ್ಪಣೆ ಮುಂತಾದ ಧಾರ್ಮಿಕ ವಿಧಿವಿಧಾನಗಳು ನಡೆಯಲಿವೆ. ದಿನದ ತ್ರಿಸಂಧ್ಯಾ ಕಾಲಗಳಲ್ಲಿ  ಶ್ರೀ ದುರ್ಗಾ ಮಾತೆಗೆ ವಿಸ್ತೃತ...

ಹೆಸರಾಂತ ಆಯುರ್ವೇದ ವೈದ್ಯ ಜಿ. ಶ್ರೀನಿವಾಸ ಆಚಾರ್ಯ ನಿಧನ

ಉಡುಪಿ: ಇಲ್ಲಿನ ಕುತ್ಪಾಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಪ್ರಾಚಾರ್ಯ ಡಾ. ಜಿ. ಶ್ರೀನಿವಾಸ ಆಚಾರ್ಯ ಗುರುವಾರ ರಾತ್ರಿ 9 ಗಂಟೆ ಸುಮಾರಿಗೆ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ...
error: Content is protected !!