Janardhan Kodavoor/ Team KaravaliXpress
23.6 C
Udupi
Friday, December 2, 2022
Sathyanatha Stores Brahmavara

ಕಾಲಕ್ಕೆ ಸರಿಯಾಗಿ ಆಯುರ್ವೇದ ವೈದ್ಯರು ಚಲಾವಣೆಯ ನಾಣ್ಯವಾಗಿರವೇಕು : ಡಾ. ಎಮ್. ಮೋಹನ್ ಆಳ್ವ

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಉಡುಪಿಯಲ್ಲಿ ನೂತನವಾಗಿ ರೂಪುಗೊಂಡಿರುವ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ‘ಪ್ರಜ್ಯೋತಿ – 2022’ ಭಾವಪ್ರಕಾಶ ಸಭಾಂಗಣದಲ್ಲಿ ನೆರವೇರಿತು. ಈ ಸಂದರ್ಭದಲ್ಲಿ ಪಾಲಗಾಟ್, ವವನೂರು, ಅಷ್ಟಾಂಗ ಆಯುರ್ವೇದ ವಿದ್ಯಾಪೀಠದ ದ್ರವ್ಯಗುಣ ವಿಭಾಗದ ಮುಖ್ಯಸ್ಥರಾದ ಡಾ. ಅಜಯನ್ ಎಸ್.ರವರು ‘ಕ್ಲಿನಿಕಲ್ ಎಪ್ಲಿಕೇಶನ್ ಆಫ್ ಮರ್ಮ ಚಿಕಿತ್ಸಾ’ ಎಂಬ ವಿಷಯದ ಬಗ್ಗೆ ವಿಚಾರ ಸಂಕಿರಣದೊoದಿಗೆ ಪ್ರಾರಂಭಗೊ೦ಡ ಕಾರ್ಯಕ್ರಮವನ್ನು ದೀಪ ಬೆಳಗಿಸುವುದರ ಮೂಲಕ ಡಾ. ಎಮ್. ಮೋಹನ್ ಆಳ್ವರವರು ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು ‘ಆಯುರ್ವೇದ ಕ್ಷೇತ್ರದ ಕ್ರಾಂತಿಕಾರಿ ಬೆಳವಣಿಗೆಯಲ್ಲಿ ಮತ್ತು SDM Brand’ ಸೃಷ್ಟಿಸಿ ಜಗತ್ತಿನಾದ್ಯಂತ ಪಸರಿಸುವಲ್ಲಿ ಖಾವಂದರಾದ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಡೆಯವರ ಕೊಡುಗೆ ಅನನ್ಯ ಎಂದರು. ಕಾಲಕ್ಕೆ ಸರಿಯಾಗಿ  ಆಯುರ್ವೇದ ವೈದ್ಯರು ಚಲಾವಣೆಯ ನಾಣ್ಯವಾಗಿರಬೇಕು ಎಂದರು.
ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಡಾ. ಭರತೇಶ್ ಎ ಅವರು ತಮ್ಮ ಪ್ರಾಸ್ತಾವಿಕ ನುಡಿಯಲ್ಲಿ ‘ಸಂಸ್ಥೆಯ ಬೆಳವಣಿಗೆಗೆ ಕಾರಣರಾದ ವ್ಯಕ್ತಿಗಳ ಮೆಲುಕು ಹಾಕುತ್ತಾ ವೃತ್ತಿ ಕ್ಷೇತ್ರದಲ್ಲಿ ತೊಡಗುವಂತೆ ಜನ್ಮ ನೀಡಿದ ವಿದ್ಯಾಸಂಸ್ಥೆ ಮತ್ತು ವಿದ್ಯಾರ್ಥಿ ಗಳ ಸಂಬ೦ಧವು ತಾಯಿ ಮಗುವಿನ ಕರುಳಿನ ಸಂಬ೦ಧದ೦ತೆ ಇರಬೇಕು’ ಎಂದರು.

ಈ ಸಂದರ್ಭದಲ್ಲಿ 1984-89 ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಕುತ್ಪಾಡಿ, ಉಡುಪಿ ಇಲ್ಲಿನ 1984 ಸಾಲಿಗೆ ಪ್ರವೇಶ ಹೊಂದಿ ಪದವೀದರರಾದ ವಿದ್ಯಾರ್ಥಿ ಸಮೂಹ-ಚಿರಂತನ 1984ಇವರು ಪ್ರತೀ ವರ್ಷದಂತೆ ಈ ವರ್ಷವೂ ಕೂಡ ಗುರುವಂದನಾ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಈ ಬಾರಿ ಹಿರಿಯ ವಿದ್ಯಾರ್ಥಿಗಳು ನಿವೃತ್ತ ಪ್ರಾಂಶುಪಾಲರಾದ ಡಾ. ಯು.ಎನ್. ಪ್ರಸಾದ್ ಹಾಗೂ ಶಾಲಾಕ್ಯ ತಂತ್ರ ವಿಭಾಗದ ನಿವೃತ್ತ ಹಿರಿಯ ಪ್ರಾಧ್ಯಾಪಕರಾದ ಡಾ. ಮರಿದೇವ ಶರ್ಮ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ಸನ್ಮಾನಿಸಲಾಯಿತು.

ತದನಂತರ ಹಾಸನ ಎಸ್.ಡಿ.ಎಮ್. ಆಯುರ್ವೇದ ಕಾಲೇಜಿನ ರೋಗನಿಧಾನ ವಿಭಾಗದ ಮುಖ್ಯಸ್ಥರಾದ ಡಾ. ಗೋಪಿಕೃಷ್ಣ ಅವರು ಬರೆದಿರುವ ‘Nidana Prakash A Textbook of Roga Nidana and Vikriti Vigyan” ಈ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು. ಬಳಿಕ ಹಳೆ ವಿದ್ಯಾರ್ಥಿಗಳ ಸಂಘಕ್ಕೆ  ಸಹಾಯ ಧನವಿತ್ತವರನ್ನು ಗುರುತಿಸಿ ಸನ್ಮಾನಿಸಲಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಡಾ. ಮಮತಾ ಕೆ.ವಿಯವರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಹಳೆ ವಿದ್ಯಾರ್ಥಿಗಳ ಸಹಚರ್ಯ ಸಾಂಗತ್ಯವನ್ನು ಸಂಸ್ಥೆಯೊ೦ದಿಗೆ ಬೆಳೆಸಲು ರೂಪುಗೊಂಡ ಕಾರ್ಯಕ್ರಮ ‘ಪ್ರಜ್ಯೋತಿ – 2022’ ಎಂದು ಹೇಳಿದರು. ಹಳೆಯ ದಿನವನ್ನು ಹೊಸದಾಗಿಸಲು ಹಳೆಯ ಸ್ನೇಹಿತರ ಜೊತೆಗೆ ವಿಚಾರ ವಿನಿಮಯ ಮತ್ತು
ಅನುಭವವನ್ನು ಹಂಚಿಕೊಳ್ಳಲು ವರ್ಷಂಪ್ರತಿ ಪಾಲ್ಗೊಳ್ಳುವ೦ತೆ ಕರೆ ನೀಡಿದರು.
ವೇದಿಕೆಯಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕರಾದ ಡಾ. ನಾಗರಾಜ್ ಎಸ್., ಸ್ನಾತಕೋತ್ತರ ಹಾಗೂ ಪಿಎಚ್.ಡಿ ಅಧ್ಯಯನ ಕೇಂದ್ರದ ಡಾ. ನಿರಂಜನ್ ರಾವ್ ಉಪಸ್ಥಿತರಿದ್ದರು. ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ. ಮೊಹಮ್ಮದ್ ಇಕ್ಬಾಲ್ ಅವರು ಕಾರ್ಯಕ್ರಮವನ್ನು ಸ್ವಾಗತಿಸಿದರು.
ಉಪಾಧ್ಯಕ್ಷರಾದ ಡಾ. ನಾರಾಯಣ ಟಿ. ಅಂಚನ್ ಅವರು ವಂದನಾರ್ಪಣೆಯನ್ನು ಮಾಡುತ್ತಾ ಕಾರ್ಯಕ್ರಮವು ಯಶಸ್ವಿಯಾಗಿ ರೂಪುಗೊಳ್ಳುವಲ್ಲಿ ಕಾಲೇಜಿನ ಪ್ರಾಂಶುಪಾಲೆಯಾಗಿ ಡಾ. ಮಮತಾ ಕೆ.ವಿ. ಮತ್ತು ಅವರ ತಂಡದ ಕೊಡುಗೆ ಶ್ಲಾಘನೀಯ ಎಂದು ಹೇಳಿದರು. ಸಹಪ್ರಾಧ್ಯಾಪಕರಾದ ಡಾ. ರಾಕೇಶ್ ಆರ್. ಎನ್ ಮತ್ತು ಸಹಾಯಕ ಪ್ರಾಧ್ಯಾಪಕರಾದ ಡಾ. ಕಾವ್ಯರವರು ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಪ್ರೀತಿ ಹೆಗ್ಡೆ ಮತ್ತು ಡಾ. ಪಾವನಾ ಅವರು ಪ್ರಾರ್ಥಿಸಿದರು.
- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!