ಉಡುಪಿಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜಿನಲ್ಲಿ ಅಗದತಂತ್ರ ಸ್ನಾತ ಕೋತ್ತರ ವಿಭಾಗದ ವತಿಯಿಂದ ಅತಿಥಿ ಉಪನ್ಯಾಸ 

ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಕುತ್ಪಾಡಿ, ಉಡುಪಿಯ ಅಗದತಂತ್ರ ಸ್ನಾತ ಕೋತ್ತರ ವಿಭಾಗದ ವತಿಯಿಂದ “ದ್ವಿತೀಯ- 2021” ಎಂಬ ಅತಿಥಿ ಉಪನ್ಯಾಸ ಕಾರ್ಯಕ್ರಮವನ್ನು  ಕಾಲೇಜಿನ ಭಾವಪ್ರಕಾಶ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಮಣಿಪಾಲದ ಕಸ್ತೂರ್ಬಾ ಮೆಡಿಕಲ್ ಕಾಲೇಜಿನ ಡಿಪಾರ್ಟ್ಮೆಂಟ್ ಆಪ್ ಫೊರೆನಿಕ್ಸ್   ಸೈಯನ್ಸ್ ಅಂಡ್ ಟೊಕ್ಸಿಕಾಲಜಿಯ ಸಹಾಯಕ ಪ್ರಾಧ್ಯಾಪಕರಾದ ಡಾ. ನಿರ್ಮಲ್ ಕೃಷ್ಣನ್ ಎಮ್. ಅವರು “ಎನ್ ಇನ್ಸೆಟ್ ಟು ಸಬ್ಸ್ಟೆನ್ಸ್ ಅಬ್ಯುಸ್” (An insight to substance abuse) ಎಂಬ ವಿಷಯದ ಮೇಲೆ ಉಪನ್ಯಾಸವಿತ್ತರು.

ನಮ್ಮ ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಹದೆಗೆಡಿಸುವ ಔಷಧಿಗಳ ಮತ್ತು ಮಾದಕ ವಸ್ತುಗಳ ಪರಿಣಾಮಗಳ ಬಗ್ಗೆ ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಮನತಟ್ಟುವಂತೆ ತಿಳಿಸಿದರು. ಇಂಥಹ ದ್ರವ್ಯಗಳಿಂದ ಆಗಬಹುದಾದ ಸಮಾಜಘಾತಕ ಅಪರಾಧಗಳ ಬಗ್ಗೆಯೂ ತಿಳಿಸಿ ಅವುಗಳಿಂದ ದೂರವಿರಲು ವಿದ್ಯಾರ್ಥಿಗಳಿಗೆ ತಿಳಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ.ಸುಚೇತಾಕುಮಾರಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ,  ಡಾ. ನಿರ್ಮಲ್ ಕೃಷ್ಣನ್ ಅವರನ್ನು ಸನ್ಮಾನಿಸಿದರು ಹಾಗೂ “ಯಾವುದೇ ದ್ರವ್ಯಗಳನ್ನು ಸೇವಿಸುವಾಗ ಅದರ ಸಂಫೂರ್ಣ ಮಾಹಿತಿಯನ್ನು ಅರಿತಿರಬೇಕು, ತಂಬಾಕು, ಮದ್ಯಪಾನ ಹಾಗೂ ಇನ್ನಿತರ ಹಾನಿಕಾರಕ ದ್ರವ್ಯ ಗಳನ್ನು ಬಳಸದೇ ವಿದ್ಯಾರ್ಥಿ ತಮ್ಮ ಜೀವನವನ್ನು ಬುದ್ದಿವಂತಿಕೆಯಿಂದ ರೂಪಿಸಿಕೊಳ್ಳಬೇಕು” ಎಂದರು. ಪ್ರಾಧ್ಯಾಪಕರಾದ ಡಾ. ಶ್ರೀನಿಧಿ ಆರ್,  ಡಾ. ನೀರಜ್ ಎ.ಕೆ , ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ರೇವತಿ ವಿ. ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದರು.

ಸ್ನಾತಕೋತ್ತರ ವಿದ್ಯಾರ್ಥಿನಿ ಡಾ. ಅನನ್ಯ ಬಿ ಕಾರ್ಯಕ್ರಮವನ್ನು ನಿರೂಪಿಸಿದರು. ಕೆ. ಎಂ. ಸಿ. ಯ ಡಾ ಅಂಕುರ್ ಚೌಧರಿ, ಡಾ ರಾಜಲಕ್ಷ್ಮೀ, ಡಾ. ಚೈತ್ರಾ ಹೆಬ್ಬಾರ್, ಡಾ ರವಿಕೃಷ್ಣ ಎಸ್, ಡಾ ಶ್ರೀಜಿತ್ ಕೆ., ಡಾ. ಧನೇಶ್ವರಿ, ಡಾ. ಸರಿತಾ, ಡಾ. ಇನೋಶ್, ಡಾ ರೇಖಾ ಪಾಟಿಲ್, ಮಾನಸರೋಗದ ಸ್ನಾತಕೋತ್ತರ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply