ಗುರಿ ಇದ್ದರೆ ಗೆಲುವು ಸಾಧ್ಯ ~ ಯೋಗ ನರಸಿಂಹ ಸ್ವಾಮಿ

ಗೆಲುವು ನಮ್ಮ ಸಾಧನೆಯ ಪ್ರತೀಕ, ಸೋಲು ನಮ್ಮ ಜೀವನಕ್ಕೆ ಪಾಠ. ವಿದ್ಯಾರ್ಥಿಗಳು ಉತ್ತಮ ಅಭ್ಯಾಸ, ಶಿಸ್ತು, ಏಕಾಗ್ರತೆ, ಸಮಯದ ನಿರ್ವಹಣೆ, ಧನಾತ್ಮಕ ಚಿಂತನೆಗಳನ್ನು ಮಾಡಿಕೊಂಡು ಪಾಠಗಳನ್ನು ಅರ್ಥೈಸಿ ಕೊಂಡು, ಆತ್ಮ ವಿಶ್ವಾಸದಿಂದ ಪರೀಕ್ಷೆಯನ್ನು ಎದುರಿಸಿದರೆ, ಉತ್ತಮ ಅಂಕಗಳನ್ನು ಗಳಿಸಲು ಸಾಧ್ಯ ಎಂದು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆಯ ಪ್ರಾಧ್ಯಾಪಕರಾದ ಯೋಗ ನರಸಿಂಹ ಸ್ವಾಮಿಯವರು ಇಂದ್ರಾಳಿ ಪ್ರೌಢಶಾಲೆಯಲ್ಲಿ ನಡೆದ ಪ್ರೇರಣಾ ಶಿಬಿರದ ಮುಖ್ಯ ಅತಿಥಿಯಾಗಿ ಹಾಗೂ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಹತ್ತನೇ ತರಗತಿಯ ವಿಧ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು. 
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಶಾಲಾ ಸಂಚಾPಲಕರಾದ ಶ್ರೀ.ಕೆ ಅಣ್ಣಪ್ಪ ಶೆಣೈಯವರು ಉಧ್ಘಾಟನೆ ಗೈದರು. ಈ ಸಂದರ್ಭದಲ್ಲಿ ಪ್ರೌಢಶಾಲಾ ಪ್ರಭಾರ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಭಾನುಮತಿ, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೇಶ್ಮಾ, ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಶ್ರೀ.ದಿನೇಶ್ ಹೆಗ್ಡೆ ಆತ್ರಾಡಿ, ಶಾಲಾ ವಿಧ್ಯಾರ್ಥಿ ನಾಯಕ ಪ್ರಜ್ವಲ್ ಉಪಸ್ಥಿತರಿದ್ದರು.
ಪ್ರಭಾರ ಮುಖ್ಯೋಪಾಧ್ಯಾಯಿನಿಯಾದ ಶ್ರೀಮತಿ ಭಾನುಮತಿಯವರು ಗಣ್ಯರನ್ನು ಸ್ವಾಗತಿಸಿದರು, ಕು. ಹಮ್ದಾ ಕಾರ್ಯಕ್ರಮವನ್ನು ನಿರೂಪಿಸಿದರು, ಕು. ಶ್ರೀರಕ್ಷಾ ವಂದನಾರ್ಪಣೆ ಗೈದರು.
 
 
 
 
 
 
 
 
 
 
 

Leave a Reply