ಹತ್ತು ದಿನಗಳ ಸಂಸ್ಕೃತ ಸಂಭಾಷಣಾ ಶಿಬಿರದ ಸಮಾರೋಪ

ಉಡುಪಿ : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯ, ಕುತ್ಪಾಡಿ, ಉಡುಪಿ ಇದರ ಆಯುರ್ವೇದ ಸಂಹಿತಾ ಸಿದ್ಧಾಂತ ವಿಭಾಗವು ಪ್ರಥಮ ವರ್ಷದ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹತ್ತು ದಿನಗಳ ಸಂಂಸ್ಕೃತ ಸಂಭಾಷಣಾ ಶಿಬಿರ ಆಯೋಜಿಸಿದ್ದು, ಅದರ ಸಮಾರೋಪ ಸಮಾರಂಭವು ಜನವರಿ19 ರಂದು ನಡೆಯಿತು.

ಸ್ನಾತಕೋತ್ತರ ವಿಭಾಗಾದ ಅಧ್ಯಕ್ಷರಾದ ಡಾ. ನಿರಂಜನ್ ರಾವ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಈ ಹತ್ತು ದಿನಗಳಲ್ಲಿ ಕಲಿತ ವಿಷಯದ ಅಧ್ಯಯನವನ್ನು ಮುಂದುವರಿಸುವಂತೆ ಸಲಹೆ ನೀಡಿದರು.ಸಮುಖ್ಯ ಅತಿಥಿ ಡಾ. ನಾಗರಾಜ್ ಎಸ್. ವಿದ್ಯೆಯನ್ನು ಗುರುಮುಖೇನ, ಸಹಪಾಠಿಗಳಿಂದ, ಲೋಕ ವ್ಯವಹಾರದಿಂದ ಹಾಗೂ ಕಾಲಕ್ರಮೇಣ ಕಲಿತುಕೊಳ್ಳಬೇಕೆಂದರು. ಸಂಹಿತಾ ಸಿದ್ಧಾಂತ ವಿಭಾಗಾಧ್ಯಕ್ಷ ಡಾ. ಶ್ರೀಕಾಂತ್ ಪಿ.ಹೆಚ್ ಶಿಬಿರದ ವರದಿ ಮಂಡಿಸಿದರು. ಭಾಗವಹಿಸಿದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಸಂಭಾಷಣಾ ಶಿಬಿರದ ಸಂಪನ್ಮೂಲ ವ್ಯಕ್ತಿಗಳಾದ ಸಂಸ್ಕೃತ ಭಾರತಿ, ಉಡುಪಿಯ ಶ್ರೀಮತಿ ಶಕುಂತಲಾ ಶೆಣೈ ಹಾಗೂ ಶ್ರೀಮತಿ ವನಿತಾ ಹೆಗ್ಡೆ ಅವರಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಪ್ರಾಯೋಗಿಕ ಸಂಸ್ಕೃತ ಅಧ್ಯಯನದ ಸಂಪನ್ಮೂಲ ವ್ಯಕ್ತಿಗಳಾದ ಡಾ. ಶ್ರೀಕಾಂತ್ ಪಿ.ಹೆಚ್., ಶ್ರೀ ಸುಬ್ರಹ್ಮಣ್ಯ ಭಟ್ ಪಿ, ಡಾ. ವಿದ್ಯಾಲಕ್ಷ್ಮೀ ಕೆ., ಡಾ. ಅರ್ಹಂತ್ ಕುಮಾರ್ ಎ. ಹಾಗೂ ಡಾ. ಲಿಖಿತಾ ಡಿ.ಎನ್ ಅವರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು. ಹತ್ತು ದಿನಗಳ ಶಿಬಿರದ ಅನುಭವಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡರು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಟ್ಟರು. ಈ ಸಂಪೂರ್ಣಸಮಾರಂಭವನ್ನು ಸ್ನಾತಕೋತ್ತರ ವಿದ್ಯಾರ್ಥಿಗಳು ಸಂಸ್ಕೃತ ಭಾಷೆಯಲ್ಲಿಯೇ ನಡೆಸಿದ್ದು ವಿಶೇಷ ಮತ್ತು ಗಮನಾರ್ಹ.

 
 
 
 
 
 
 
 
 
 
 

Leave a Reply