ಮಂಗಳೂರು ವಿ.ವಿ.ಸಂಸ್ಕೃತ ಪಾಠ್ಯ ಪುಸ್ತಕ ಬಿಡುಗಡೆ

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ತೃತೀಯ ಸೆಮಿಸ್ಟರ್‌ನ ಸಂಸ್ಕೃತ ಪಾಠ್ಯ ಪುಸ್ತಕಗಳನ್ನು ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಬಿಡುಗಡೆಗೊಳಿಸಿದರು.  

ಮಂಗಳೂರು ವಿಶ್ವವಿದ್ಯಾನಿಲಯ ಸಂಸ್ಕೃತ ಶಿಕ್ಷಕರ ಸಂಘ ಹಾಗೂ ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗಗಳ ಸಂಯುಕ್ತ ಆಶ್ರಯದಲ್ಲಿ ಉಡುಪಿಯ ಅದಮಾರು ಮಠದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಆಶೀರ್ವಚಿಸಿದ ಪೂಜ್ಯರು ಕೊರೊನಾದಿಂದ ಶೈಕ್ಷಣಿಕ ಚಟುವಟಿಕೆಗಳಿಗೆ ಹಿನ್ನಡೆ ಉಂಟಾಗಿದೆ. ಈ ಸಂದರ್ಭದಲ್ಲಿ ಪಾಠ್ಯವನ್ನು ಕಡಿತಗೊಳಿಸುವ ಅನಿವಾರ್ಯತೆ ಎದುರಾಗಬಹುದು. ಮಕ್ಕಳಿಗೆ ಜೀರ್ಣಿಸಿಕೊಳ್ಳಲು ಸುಲಭವಾಗುವಂತೆ ಪಾಠ್ಯಪುಸ್ತಕಗಳನ್ನು ಈ ಬಾರಿ ಸಿದ್ಧಗೊಳಿಸಬೇಕಾಗಿದೆ. ಸಂಸ್ಕೃತ ಶಿಕ್ಷಕ ಸಂಘದವರು ಇದಕ್ಕೆ ಪೂರಕವಾಗಿ ಪಾಠ್ಯಪುಸ್ತಕ ರಚಿಸಿದ್ದು ಇತರ ವಿಭಾಗದವರೂ ಇದನ್ನು ಅನುಸರಿಸಿದರೆ ವಿದ್ಯಾರ್ಥಿಗಳಿಗೆ ಪ್ರಯೋಜನವಾಗುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಪೂರ್ಣಪ್ರಜ್ಞ ಕಾಲೇಜಿನ ಗೌರವ ಕೋಶಾಧಿಕಾರಿ ಶ್ರೀ ಪ್ರದೀಪ್ ಕುಮಾರ್, ಪ್ರಾಂಶುಪಾಲ ಡಾ. ರಾಘವೇಂದ್ರ ಎ., ಮಂಗಳೂರು ವಿ. ವಿ. ಸಂಸ್ಕೃತ ಶಿಕ್ಷಕ ಸಂಘದ ಕಾರ್ಯದರ್ಶಿ ಡಾ. ಮಂಜುನಾಥ ಭಟ್, ಸಮರ್ಪಣಾ ಪ್ರತಿಷ್ಠಾನದ ರವಿರಾಜ ಭಟ್, ಸಂಧ್ಯಾ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಡಾ. ರಾಮಕೃಷ್ಣ ಉಡುಪ ಉಪಸ್ಥಿತರಿದ್ದರು. ಪೂರ್ಣಪ್ರಜ್ಞ ಕಾಲೇಜಿನ ಸಂಸ್ಕೃತ ವಿಭಾಗದ ಮುಖ್ಯಸ್ಥ ಡಾ. ರಮೇಶ್ ಟಿ.ಎಸ್. ಪಾಠ್ಯ ಪುಸ್ತಕಗಳ ಕುರಿತು ಪ್ರಾಸ್ತಾವಿ​​ಕ ಮಾತುಗಳನ್ನಾಡಿ ಸ್ವಾಗತಿಸಿದರು.

 
 
 
 
 
 
 
 
 
 
 

Leave a Reply