​ಪ್ರಮಾದ ರಹಿತ ಪ್ರವಚನ ಶಿಕ್ಷಕರ ಕರ್ತವ್ಯ~ಡಾ|ಮಧುಸೂದನ್ ಭಟ್

ಶಿಕ್ಷಕರ ದಿನಾಚರಣೆಯ ಆನ್‌ಲೈನ್ ಕಾರ್ಯಕ್ರಮದಲ್ಲಿ ಡಾ|ಮಧುಸೂದನ್ ಭಟ್

‘ಶಿಕ್ಷ ವಿದ್ಯೋಪಾದನೇ’, ಎಂಬ ಸಂಸ್ಕೃತದ ಧಾತುವಿನಿಂದ ರೂಪಗೊಂಡ ಶಿಕ್ಷಕ ಶಬ್ದಕ್ಕೆ ವಿದ್ಯಾದಾನ ಮಾಡುವವರು ಎಂದರ್ಥ. ಪ್ರವಚನದಲ್ಲ್ಲಿ ಪ್ರಮಾದ ಸಲ್ಲದು ಎಂದು ಉಪನಿಷತ್ತು ಸಾರಿದೆ. ಇದಕ್ಕಾಗಿ ಪೂರ್ವಸಿದ್ಧತೆ, ನಿಪ್ಪಕ್ಷಪಾತತನದಿಂದ ಕೂಡಿದ ಪ್ರವಚನ ಶಿಕ್ಷಕರ ಮುಖ್ಯ ಕರ್ತವ್ಯವಾಗಿದ್ದು ತಮ್ಮಲ್ಲಿರುವ ಜ್ಞಾನಗಂಗೆಯನ್ನು ಮಕ್ಕಳ ಪುಟ್ಟ ಹೃದಯ ಮಂದಿರಕ್ಕೆ ತಲುಪಿಸುವ ಕಾರ್ಯ ಶಿಕ್ಷಕರಿಂದ ಆಗಬೇಕು. ತಮ್ಮ ಜ್ಞಾನ ಶಿಷ್ಯರ ಮನ ತಲುಪಿತು ಎಂದು ಅರಿವಾದಾಗ ಶಿಕ್ಷಕನಿಗೆ ಆಗುವ ಆನಂದ ಬ್ರಹ್ಮಾನಂದಕ್ಕೂ ಮಿಗಿಲಾದದ್ದು.  

ಸಾಕಷ್ಟು ಪ್ರಶ್ನೆಗಳನ್ನು ಕೇಳುವ ವಾತಾವರಣವನ್ನು ತರಗತಿಗಳಲ್ಲಿ ನಿರ್ಮಾಣ ಮಾಡಿ ಅವರ ಪ್ರಶ್ನೆಗಳನ್ನು  ಉತ್ತರಿಸುವ ಮೂಲಕ ಜ್ಞಾನವನ್ನು ತುಂಬುವ ಕೆಲಸ ಶಿಕ್ಷಕರಿಂದ ಆಗಬೇಕು.  ವೃತ್ತಿಯಲ್ಲಿ ಸಂಪಾದನೆಯ ಜೊತೆಗೆ ಪುಣ್ಯವನ್ನು ಗಳಿಸಬಹುದಾದ ಅತ್ಯಂತ ಪವಿತ್ರವಾದ ವೃತ್ತಿಯು ಶಿಕ್ಷಕ ವೃತ್ತಿಯಾಗಿದ್ದು ಒಬ್ಬ ಉತ್ತಮ ಶಿಕ್ಷಕನಿಗೆ ಶಾಶ್ವತವಾದ ಗೌರವ ಸಮಾಜದಲ್ಲಿ ಲಭಿಸುವುದು ಎಂದು ಕುಂಜಿಬೆಟ್ಟು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಚರ‍್ಯರಾದ ಡಾ|ಮಧುಸೂದನ್ ಭಟ್ ಅವರು ಹೇಳಿದ್ದಾರೆ.

ಅವರು ಸೆಪ್ಟೆಂಬರ್​5 ರಂದು ಕಾಲೇಜಿನಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಆನ್‌ಲೈನ್ ಕಾರ್ಯಕ್ರಮದಲ್ಲಿ  ಮಾತನಾಡುತ್ತಿದ್ದರು.
ಕಾಲೇಜಿನ ವಾಣಿಜ್ಯ ಉಪನ್ಯಾಸಕ ಶ್ರೀ ರಾಘವೇಂದ್ರ ಜಿ.ಜಿ. ಈ ಕಾರ್ಯಕ್ರಮವನ್ನು ಸಂಯೋಜಿಸಿದ್ದರು.

 
 
 
 
 
 
 
 
 
 
 

Leave a Reply