ಶ್ರೀಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಎನ್.ಎಸ್.ಎಸ್. ಘಟಕದ ವತಿಯಿಂದ ಸ್ವಾತಂತ್ರ ದಿನಾಚರಣೆ

ಶ್ರಿ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಸ್ವಾತಂತ್ರ‍್ಯ ದಿನಾಚರಣೆಯ ಅಮೃತ ಮಹೋತ್ಸವವನ್ನು ಆಚರಿಸಲಾಯಿತು. ಕಾಲೇಜಿನ ಪ್ರಾಚಾರ್ಯರಾದ ಡಾ ಸುಕನ್ಯಾ ಮೇರಿ ಜೆ. ಮಾತನಾಡುತ್ತಾ “ದೇಶದ ಗಡಿಯನ್ನು ಕಾಯುವಲ್ಲಿ ಭಾರತೀಯ ಯೋಧರು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ದೇಶಾಭಿಮಾನವನ್ನು ಮೆರೆಯುತ್ತಿದ್ದಾರೆ.

ನಾವು ಸ್ವತಂತ್ರವಾಗಿ ನಿರ್ಭೀತಿಯಿಂದ ಬದುಕಲು ಸೈನಿಕರೇ ಕಾರಣ. ಎನ್.ಎಸ್.ಎಸ್. ಸ್ವಯಂ ಸೇವಕರು ಶ್ರಮದಾನದ ಬೆವರನ್ನು ಸುರಿಸಿ ದೇಶ ಸೇವೆಗೆ ಬದ್ಧರಾಗಿರಬೇಕು. ಸೇವೆ ಎನ್ನುವುದು ಸ್ವಯಂ ಆಗಿ ಸ್ವತಂತ್ರವಾಗಿ ಮಾಡಿದಾಗಲೇ ಆತ್ಮತೃಪ್ತಿ ಇರುತ್ತದೆ. ಒತ್ತಡದ ಕೆಲಸ ಅದು ಸೇವೆ ಅಲ್ಲ” ಎಂದು ಹೇಳಿದರು.  ಎನ್.ಎಸ್.ಎಸ್. ಸ್ವಯಂಸೇವಕರಿ೦ದ ಕಾಲೇಜಿನ ಕ್ಯಾಂಪಸ್ ನಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು.

ಎನ್.ಎಸ್.ಎಸ್. ಯೋಜನಾಧಿಕಾರಿ ರಮಾನಂದ ರಾವ್ ಸ್ವಾಗತಿಸಿದರು. ಯೋಜನಾಧಿಕಾರಿ ಶ್ರೀಲತಾ ಆಚಾರ್ಯ ವಂದಿಸಿದರು. ವಿನಾಯಕ ಪೈ, ಸಂತೋಷ್ ಕುಮಾರ್, ಮೊದಲಾದವರು ಉಪಸ್ಥಿತರಿದ್ದರು.

 
 
 
 
 
 
 
 
 

Leave a Reply