ಸಂಧ್ಯಾ ಕಾಲೇಜಿನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ​ಮಾಸ್ಕ್ ಕೊಡುಗೆ  

“ನಾವು ಉತ್ತೀರ್ಣರಾಗಬೇಕಾದರೆಯಾರ್ಯಾರ ಸಹಾಯ ಪಡೆದು ಉತ್ತೀರ್ಣರಾಗುವ ಕೆಳಮಟ್ಟಕ್ಕೆ ಬಂದಿಲ್ಲ; ಅಧ್ಯಯನದಿಂದಲೇ ಉತ್ತೀರ್ಣರಾಗುವ ಸಾಮರ್ಥ್ಯ, ಪ್ರತಿಭೆ ನಮ್ಮ ವಿದ್ಯಾರ್ಥಿಗಳಿಗೆ ಇದೆ.
 ಕೊರೋನಾ ಎಂಬ ಕಾಯಿಲೆಯಿಂದ ಪರೀಕ್ಷೆಯನ್ನುಬರೆಯದೆ ಎಲ್ಲರನ್ನೂ ಉತ್ತೀರ್ಣ ಮಾಡಿದರೆ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಹದಗೆಡುವುದು. ಜ್ಞಾನ ವೃದ್ಧಿಗೆ ಸೂಕ್ತ ವಾತಾವರಣ ಸೃಷ್ಟಿಯಾಗಬೇಕಾಗಿದೆ” ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರುಹೇಳಿದರು. ಉಡುಪಿಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ​2019-20ನೇ ಸಾಲಿನ ಶೈಕ್ಷಣಿಕ, ಸಾಂಸ್ಕೃತಿಕ, ಕ್ರೀಡಾಸಾಧಕ ವಿದ್ಯಾರ್ಥಿ ಗಳನ್ನು ಪುರಸ್ಕರಿಸಿ, ಆಶೀರ್ವಚಿಸಿದರು.
ಕಾಲೇಜಿನ​ ​ಆಡಳಿತ ಮಂಡಳಿಯ ಗೌರವಾನ್ವಿತ ಕಾರ್ಯದರ್ಶಿ ಪ್ರದೀಪ್ ಕುಮಾರ್ ರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ “ಬರೀ ಕಲಿಕೆ ಉಪಜೀವನಕ್ಕೆ ಕಾರಣವಾದರೆ ಕಲೆ, ಸಾಹಿತ್ಯ, ಕ್ರೀಡೆ ಮೊದಲಾದ ಕ್ಷೇತ್ರದಲ್ಲಿ ವಿಶೇಷ ಸಾಧನೆ ಮಾಡಿದರೆ​ ​ಯಾಂತ್ರಿಕ ಬದುಕಿನಿಂದ ಹೊರಗೆ ಬರಬಹುದು. ಅಲ್ಲದೆ ಬದುಕನ್ನು ಕಟ್ಟಿಕೊಳ್ಳಲೂ  ಅನುಕೂಲ ಇದಕ್ಕೆ ಶಾಲಾ-ಕಾಲೇಜಿನ ಹಂತದಲ್ಲಿ ಭೂಮಿಕೆಯನ್ನು  ಒದಗಿಸಿ ಕೊಡಬೇಕಾಗಿದೆ” ಎಂದು ಹೇಳಿ​ ​ಶುಭ​ ​ಹಾರೈಸಿದರು.
ಇದೇಸಂದರ್ಭದಲ್ಲಿ ಸಾಮಾಜಿಕ ಸ್ವಾಸ್ಥ್ಯದ ದೃಷ್ಟಿಯಲ್ಲಿ ಉಡುಪಿ ಜಿಲ್ಲಾ ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಘಟಕದ ಜಿಲ್ಲಾ ಸಂಘಟಕ​ ​ನವೀನ್ ಅಮೀನ್ ರವರಿಗೆ ಕಾಲೇಜಿನ ವತಿಯಿಂದ ​250 ಮಾಸ್ಕನ್ನು ಹಸ್ತಾಂತರಿ ಸಲಾಯಿತು. ಕಾಲೇಜಿನ​ ​ಪ್ರಾಂಶುಪಾಲರಾದ ಡಾ. ಸುಕನ್ಯಾ ಮೇರಿ ಜೆ., ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ರಾಮಕೃಷ್ಣ ಉಡುಪ ರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.​ ​ಅರ್ಥಶಾಸ್ತ್ರ ಉಪನ್ಯಾಸಕಿ ಶ್ರೀಲತಾ​ ​ಆಚಾರ್ಯರವರು ಸ್ವಾಗತಿ ಸಿದರು. ಕನ್ನಡ ಉಪನ್ಯಾಸಕ ರಮಾನಂದ  ರಾವ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.​ ​ವಿದ್ಯಾರ್ಥಿನಿ ಅಪೂರ್ವ ಪ್ರಾರ್ಥಿಸಿದರು.
 
 
 
 
 
 
 
 
 
 
 

Leave a Reply