ಪಿಪಿಸಿ ಮೈದಾನದಲ್ಲಿ ದೂರದರ್ಶಕದ ಮೂಲಕ ಶನಿ ಹಾಗು ಗುರುವಿನ ಸಮಾಗಮ ವೀಕ್ಷಣೆ 

700ವರ್ಷಗಳ ನಂತರ ಕಾಣುತ್ತಿರುವ ,ಮುಂದೆ 60ವರ್ಷಗಳ ನಂತರ ಗೋಚರಿಸುವ ,ಬಲು ಅಪರೂಪದ ವಿದ್ಯಮಾನವಾದ ಗುರು ಶನಿಯ ಸಮಾಗಮವನ್ನು ನೋಡಿ ಆನಂದಿಸಲು ದಿನಾಂಕ 21 ರಂದು ಪೂರ್ಣಪ್ರಜ್ಞ ಕಾಲೇಜಿನ ಪ್ಯಾಕ್ (ಪಿಎಸಿಸಿ ) ಸಂಸ್ಥೆಯು ಆಕಾಶ ವೀಕ್ಷಣೆ ಕಾರ್ಯಕ್ರಮವನ್ನು ಆಯೋಜಿಸಿತ್ತು . ಪೂರ್ಣಪ್ರಜ್ಞಾ ಕಾಲೇಜಿನ ಮೈದಾನದಲ್ಲಿ, ದೂರದರ್ಶಕದ ಮೂಲಕ ಶನಿ ಹಾಗು ಗುರುವಿನ ಸಮಾಗಮವನ್ನು ತೋರಿಸಲಾಗಿತ್ತು.  ಒಂದು8 ಇಂಚಿನ ದೂರದರ್ಶಕದಲ್ಲಿ ಈ ವಿದ್ಯಮಾನವನ್ನು ಆಗಮಿಸಿದ ಜನರು ವೀಕ್ಷಿಸಿದರೆ, ಇನ್ನೊಂದು 4 ಇಂಚಿನ ದೂರದರ್ಶಕದಲ್ಲಿ ಪ್ಯಾಕ್ ಯು ಟ್ಯೂಬ್ ಚಾನೆಲ್ ನಲ್ಲಿ ನೆೇರ ಪ್ರಸಾರ ನಡೆಸಲಾಯಿತು. ಇನ್ನೊಂದು 4 ಇಂಚಿನ ದೂರದರ್ಶಕದಲ್ಲಿ ಪ್ರೊಜೆಕ್ಟರ್ ನ ಮೂಲಕ ಇದೆ ನೇರ ಪ್ರಸಾರವನ್ನು ಪರದೆ ಮೇಲೆ ಎಲ್ಲರು ಒಮ್ಮೆಲೇ ವೀಕ್ಷಿಸುವಂತ ಅವಕಾಶವನ್ನು ಏರ್ಪಡಿಸಲಾಗಿತ್ತುಅದರ ಜೊತೆಗೆ ಪೂರ್ಣಪ್ರಜ್ಞ ಕಾಲೇಜಿನ ದ್ವಿತೀಯ ಬಿ. ಎಸ್ಸಿ ವಿದ್ಯಾರ್ಥಿಯಾದ ಹಶಿಮ್ ತನ್ನದೇ ಆದ ಒಂದು ಉಪಕರಣವನ್ನು ನಿರ್ಮಿಸಿ ಅದರಲ್ಲಿ ಶನಿ ಹಾಗು ಗುರುವಿನ ನಡುವಿನ ಅಂತರವನ್ನು ಅಳೆಯಲು ಪ್ರಯತ್ನಿಸಿದ.

ಈ ಕಾರ್ಯಕ್ರಮಕ್ಕೆ ಹಲವಾರು ಕಡೆಗಳಿಂದ ಜನರು ಆಗಮಿಸಿ ಅಭಿನಂದಿಸಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ, ಪೂರ್ಣಪ್ರಜ್ಞ ಕಾಲೇಜಿನ ನಿವೃತ್ತ ಪ್ರಾಂಶುಪಾಲರು ಹಾಗು ಪ್ಯಾಕ್ ಸಂಸ್ಥೆಯ ಸಂಸ್ಥಾಪಕ ಸಂಯೋಜಕರು ಆದಂತಹ ಡಾ|ಎ.ಪಿ ಭಟ್ ಉಪಸ್ಥಿತರಿದ್ದು, ಈ ಸುಂದರ ವಿದ್ಯಮಾನವನ್ನು ವಿವರಿಸುತ್ತಾ ನಂತರ ನೆರೆದವರಿಗೆ ನಕ್ಷತ್ರಗಳನ್ನು ಸಹ ಪರಿಚಯಿಸಿದರು.

ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ.ರಾಘವೇಂದ್ರ ಎ. ಇವರು ವಹಿಸಿದ್ದರು. ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಪ್ರತಿಭಾ ಸಿ. ಆಚಾರ್ಯ, ಇವರೊಂದಿಗೆ ವಿಭಾಗದ ಎಲ್ಲ ಅಧ್ಯಾಪಕರು ಹಾಗು ಕಾಲೇಜಿನ ಬೋಧಕ ಹಾಗು ಬೋಧಕೇತರ ವರ್ಗದವರು ಮತ್ತು ಹಲವಾರು ವಿದ್ಯಾರ್ಥಿಗಳು ಸಹ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ಮೇಘನಾ ಜೆ.ವಿ ಇವರು ನಿರೂಪಿಸಿದರು.

ಭೌತಶಾಸ್ತ್ರ ವಿಭಾಗದ ಉಪನ್ಯಾಸಕ ಹಾಗು ಪ್ಯಾಕ್ ಸಂಸ್ಥೆಯ ಸಂಯೋಜಕರಾದ ಅತುಲ್ ಭಟ್ ಇವರು ನೇರ ಪ್ರಸಾರದ ಮೂಲಕ ಈ ಸಮಾಗಮವನ್ನು ಮನೆಯಿಂದಲೇ ಜನರಿಗೆ ನೋಡುವ ಅವಕಾಶವನ್ನು ಕಲ್ಪಿಸಿಕೊಟ್ಟರು .ಈ ನೇರಪ್ರಸಾರವನ್ನು ಸುಮಾರು ೭೫೦೦ಕ್ಕಿಂತ ಹೆಚ್ಚು ಜನರು ವೀಕ್ಷಿಸಿದರು. ಕೆಲವೇ ಘಂಟೆಗಳಲ್ಲಿ ಈ ಸಂಖ್ಯೆ 10000ಕ್ಕೆ ಏರಿತು. ಪ್ಯಾಕ್ ವಿದ್ಯಾರ್ಥಿಗಳು ಈ ಕಾರ್ಯಕ್ರಮದ ಎಲ್ಲ ವ್ಯವಸ್ಥೆಗಳನ್ನು ಹಾಗು ಕಾವಿಡ್-19 ಮುಂಜಾಗ್ರತೆಯ ಸಲುವಾಗಿ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸಿದರು .

 
 
 
 
 
 
 
 
 
 
 

Leave a Reply