ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಪೂರ್ವ ಮಾಹಿತಿ ಕಾರ್ಯಕ್ರಮ

‘ವಿವಿಧತೆಯೇ ಜಗದ ನಿಯಮ. ಪ್ರಪಂಚ ಖುಷಿ ಕೊಡುತ್ತೆ. ಏಕೆಂದರೆ ಅದು ವೈವಿಧ್ಯಮಯವಾಗಿದೆ. ಮನುಷ್ಯ ಸಹಜವಾಗಿ ಆನಂದ ಬಯಸುತ್ತಾನೆ. ಹೊಸ ಹೊಸ ವಿಷಯ ಅನುಭವಿಸುವುದರಿಂದ ಆನಂದ ಕಾಣುತ್ತಾನೆ. ವಿವಿಧತೆ ಇದ್ದರೂ ವಿದ್ಯಾರ್ಥಿಗಳು ಸಮವಸ್ತç ಧರಿಸಬೇಕು. ಹೀಗೆ ಧರಿಸುವುದರಿಂದ ಕಲಿಕೆಗೆ ಅನುಕೂಲವಾಗುತ್ತದೆ.
ಗುರಿ ಸಾಧಿಸುವಲ್ಲಿ ಸಹಕಾರಿ’ ಎಂದು ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷರಾದ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು. ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ತರಗತಿಯನ್ನು ಉದ್ಘಾಟಿಸಿದ ಪೂಜ್ಯರು ಪೂರ್ವಮಾಹಿತಿ ಕಾರ್ಯಕ್ರಮ ದಲ್ಲಿ ಭಾಗವಹಿಸಿ ದ್ವಿತೀಯ ಪಿಯುಸಿಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಶೀರ್ವಚಿಸಿದರು.
ಕಾಲೇಜು ಆಡಳಿತಮಂಡಳಿಯ ಗೌರವ ಕಾರ್ಯದರ್ಶಿ ಡಾ| ಶಶಿಕಿರಣ್ ಉಮಾಕಾಂತ್ ಮಾತನಾಡಿ ‘ಶಿಕ್ಷಣ ಎಂದರೆ ನಮ್ಮನ್ನು ನಾವು ಅಭಿವೃದ್ಧಿ ಪಡಿಸಿಕೊಳ್ಳುವುದು. ಭೌದ್ಧಿಕ ಮತ್ತು ಭೌತಿಕ ಬೆಳವಣಿಗೆಗೆ ಶಿಕ್ಷಣ ಅಗತ್ಯ. ತಂತ್ರಜ್ಞಾನ ತುಂಬಾ ಬೆಳೆದಿದೆ. ಆದರೆ ಇದು ಉಪಯುಕ್ತವಾದಂತೆ ಅಪಾಯಕಾರಿಯೂ ಹೌದು. ಅರಿತು ಉಪಯೋಗಿಸಿದರೆ ಅಭಿವೃದ್ಧಿಗೆ ಅನುಕೂಲ’ ಎಂದು ಹೇಳಿದರು.
ಆಡಳಿತಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಪ್ರಶಾಂತ್ ಹೊಳ್ಳ ವೇದಿಕೆಯಲ್ಲಿದ್ದು, ಶುಭ ಹಾರೈಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ಪ್ರಾಚಾರ್ಯರಾದ ಪ್ರತಿಮಾ ಬಾಳಿಗ ವಿದ್ಯಾರ್ಥಿಗಳಿಗೆ ಪೂರ್ವ ಮಾಹಿತಿ ನೀಡಿದರು. ಆಂಗ್ಲಭಾಷಾ ಉಪನ್ಯಾಸಕಿ ಅರ್ಪಿತ ಸ್ವಾಗತಿಸಿದರು. ಅರ್ಥಶಾಸ್ತç ಉಪನ್ಯಾಸಕಿ ದೀಪಿಕಾ ನಿರೂಪಿಸಿದ ಕಾರ್ಯಕ್ರಮದಲ್ಲಿ ಆಂಗ್ಲಭಾಷಾ ಉಪನ್ಯಾಸಕಿ ರೋಶನಿ ವಂದಿಸಿದರು.

Leave a Reply