Janardhan Kodavoor/ Team KaravaliXpress
23.4 C
Udupi
Saturday, February 4, 2023
Sathyanatha Stores Brahmavara

ಮನುಷ್ಯನು ತಾನು ಆಶ್ರಯ ಪಡೆದ ಮೇಲೆ ಆಶ್ರಯದಾತರನ್ನು ಮರೆಯಬಾರದು~ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು

ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ‘ಬಹುಮಾನ ವಿತರಣಾ ಹಾಗೂ ಪ್ರತಿಭಾ ದಿನಾಚರಣೆ

‘ಮನುಷ್ಯನು ತಾನು ಆಶ್ರಯ ಪಡೆದ ಮೇಲೆ ಆಶ್ರಯದಾತರನ್ನು ಮರೆಯಬಾರದು. ನಾವು  ಬೆಳೆಯುತ್ತಾ ಉನ್ನತ ಸ್ಥಾನಕ್ಕೆ ಹೋದ ಹಾಗೆ ಅದಕ್ಕೆ ಕಾರಣೀಕರ್ತರಾದವರನ್ನು ಸ್ಮರಿಸಬೇಕು. ನಮ್ಮ ಊರು, ಭಾಷೆ, ನೆಲದ ಬಗ್ಗೆ ಅಭಿಮಾನ ಹೊಂದಿರಬೇಕು. ಹೆಚ್ಚೆಚ್ಚು ಸಾಧನೆ ಮಾಡಿ ಜನ್ಮ ಕೊಟ್ಟ ತಂದೆ ತಾಯಿಗೆ, ಶಿಕ್ಷಣ ನೀಡಿದ ಸಂಸ್ಥೆಗೆ ಹೆಸರನ್ನು ತರುವಂತಾಗಬೇಕು’ ಎಂದು ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ಈಶಪ್ರಿಯ ತೀರ್ಥ ಶ್ರೀಪಾದರು ನುಡಿದರು.

ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ‘ಬಹುಮಾನ ವಿತರಣಾ ಹಾಗೂ ಪ್ರತಿಭಾ
ದಿನಾಚರಣೆಯ’ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀಪಾದರು ಆಶೀರ್ವಚಿಸಿದರು. ಮುಖ್ಯ ಅಭ್ಯಾಗ ತರಾಗಿ ಆಗಮಿಸಿದ ಕನ್ನಡ ಚಿತ್ರರಂಗದ ಹಿನ್ನಲೆ ಗಾಯಕ, ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಗಣೇಶ್ ಕಾರಂತ್ ಮಾತನಾಡುತ್ತಾ, ‘ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳಬೇಕು.
ಶೈಕ್ಷಣಿಕ ಸಾಧನೆಯ ಹಿನ್ನಲೆ ಇದ್ದಾಗ ಸಾಂಸ್ಕೃತಿಕ  ಪ್ರತಿಭೆಗೆ ಹೆಚ್ಚು ಮಹತ್ವ ಬರುತ್ತದೆ. ವಿದ್ಯಾರ್ಥಿ ಗಳು ಓದಿನ ಜೊತೆಗೆ ಸಂಗೀತ, ಸಾಹಿತ್ಯ, ಕಲೆ ಇತ್ಯಾದಿಗಳ ಬಗ್ಗೆ ಪರಿಶ್ರಮ ವಹಿಸಿ ಸಾಧನೆ ಮಾಡಬೇಕು’ ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಆಡಳಿತ ಮಂಡಳಿಯ ಗೌರವ ಕಾರ್ಯದರ್ಶಿ ಡಾ|ಶಶಿಕಿರಣ್ ಉಮಾಕಾಂತ್ ಅಧ್ಯಕ್ಷೀಯ ಭಾಷಣ ಮಾಡುತ್ತಾ, ‘ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಗಳು ಶಿಕ್ಷಣದೊಂದಿಗೆ ಕ್ರೀಡೆ,  ಸಾಂಸ್ಕೃತಿಕ ಕ್ಷೇತ್ರದಲ್ಲೂ ರಾಜ್ಯ, ರಾಷ್ಟ್ರ  ಮಟ್ಟದ ಸಾಧನೆಯನ್ನು ಮಾಡಿರುತ್ತಾರೆ. ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಬೇಕಾದ ಎಲ್ಲಾ ರೀತಿಯ ಸೌಲಭ್ಯ ಗಳನ್ನು ಒದಗಿಸಲು ಸಂಸ್ಥೆಯು ಸದಾ ಸಿದ್ಧವಾಗಿದೆ’ ಎಂದು ಹೇಳಿದರು.

ಕಾಲೇಜಿನ ಆಡಳಿತ ಮಂಡಳಿಯ ಗೌರವ ಕೋಶಾಧಿಕಾರಿ ಸಿಎ ಟಿ.ಪ್ರಶಾಂತ್ ಹೊಳ್ಳರವರು ಶೈಕ್ಷಣಿಕ,  ಸಾಂಸ್ಕೃತಿಕ    ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನವನ್ನು ವಿತರಿಸಿ ಅಭಿನಂದಿಸಿದರು. ಕಾಲೇಜಿನ ಪ್ರಾಚಾರ್ಯರಾದ ಶ್ರೀಮತಿ ಪ್ರತಿಮಾ ಬಾಳಿಗ ಹಾಗೂ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ವೇದಿಕೆ ಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಕು.ರಿತಿಕಾ ಭಕ್ತ ಸ್ವಾಗತಿಸಿದರು.

ಪ್ರಜ್ಞಾ ನಿರೂಪಿಸಿದ ಕಾರ್ಯಕ್ರಮದಲ್ಲಿ, ಸಂಘದ ಅಧ್ಯಕ್ಷ ಧನುಶ್ ಶೆಣೈ ವಂದಿಸಿದರು.  ವಿದ್ಯಾರ್ಥಿ ಗಳಾದ ರೇವನ್, ಆದಿತ್ಯ ಶೆಟ್ಟಿ, ಭುವನ್ ವಿವಿಧ ಸ್ಪರ್ಧಾ ವಿಜೇತರ ಪಟ್ಟಿಯನ್ನು ವಾಚಿಸಿದರು. ಸಭಾ ಕಾರ್ಯಕ್ರಮದ ನಂತರ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನ ನಡೆಯಿತು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!