ಪಿಪಿಸಿ ಉಡುಪಿ :ಉದ್ಯಮ ಶೀಲತಾ ಅಭಿವೃದ್ಧಿ ಘಟಕ ಉದ್ಘಾಟನ

ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯನ್ನು ಕಂಡುಹಿಡಿದು, ಅವರಲ್ಲಿರುವ ಉದ್ಯಮಶೀಲತಾ ಪ್ರವರ್ತಿಯನ್ನು ಸಬಲೀಕರಣ ಗೊಳಿಸುವ ಅಗತ್ಯವಿದೆ ಎಂದು ಶ್ರೀ ಮದ್ವ ವಾದಿರಾಜ ಟೆಕ್ನಾಲಜಿಸ್ ಅಂಡ್ ಮ್ಯಾನೇಜ್ಮೆಂಟ್ ವಿದ್ಯಾರ್ಥಿ ಕ್ಷೇಮ ಪಾಲನಾ ಹಾಗೂ ತರಬೇತಿ ಮತ್ತು ಉದ್ಯೋಗ ನಿಯೋಜನ ಸಂಯೋಜನಾಧಿಕಾರಿ ಡಾ. ಕೆ.ಸಿ ಮಂಜುನಾಥ್ ರವರು ವಿದ್ಯಾರ್ಥಿಗಳಿಗೆ ಕರೆಕೊಟ್ಟರು.

ಉಡುಪಿ ಪೂರ್ಣಪ್ರಜ್ಞ ಕಾಲೇಜಿನ ಉದ್ಯಮಶೀಲತಾ ಅಭಿವೃದ್ಧಿ ಘಟಕವನ್ನು ಉದ್ಘಾಟಿಸಿದ ಶ್ರೀಯುತರು ಮಾತನಾಡುತ್ತಾ ವಿದ್ಯಾರ್ಥಿಗಳಲ್ಲಿ ಹುದುಗಿರುವ ಪ್ರತಿಭೆಯ ಅನಾವರಣಕ್ಕೆ ಉದ್ಯಮಶೀಲತಾ ಘಟಕಗಳು ತುಂಬಾ ಸಹಾಯಕವಾಗಲಿವೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜು ಪ್ರಾಂಶಪಾಲ ಡಾ. ರಾಘವೇಂದ್ರ ಮಾತನಾಡಿ ಉದ್ಯಮ ಶೀಲತೆ ಪ್ರತಿಯೊಬ್ಬ ವಿದ್ಯಾರ್ಥಿಯ ಮುಂದಿನ ಜೀವನದ ವೃತ್ತಿಯ ಆಯ್ಕೆಯಾಗಬೇಕು ವಿದ್ಯಾರ್ಥಿಗಳು ಉದ್ಯೋಗ ಉದ್ಯೋಗದಾತರಾಗಿ ಉದ್ಯೋಗವನ್ನು ಸೃಷ್ಟಿಸುವ ಕಾಯಕದಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕು ಎಂದು ಹಿತವಚನ ನೀಡಿದರು.

ಕಾಲೇಜು ವಿದ್ಯಾರ್ಥಿಗಳು ಉಪನ್ಯಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಉದ್ಯಮಶೀಲತಾ ಘಟಕದ ಸಂಯೋಜನಾ ಅಧಿಕಾರಿ, ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಅಪೂರ್ವ ಅತಿಥಿಗಳನ್ನು ಸ್ವಾಗತಿಸಿ, ಏಕ್ತಾರವರು ವ೦ದಿಸಿದರು. ರಕ್ಷಿತಾ ಕಾರ್ಯಕ್ರಮ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply