ಪಿಪಿಸಿಯಲ್ಲಿ ಶಿಕ್ಷಕ ರಕ್ಷಕ ಸಭೆ

ಉಡುಪಿ: ಸಂಸ್ಕಾರಯುತ ಸಮಾಜವನ್ನು ನಿರ್ಮಿಸುವಲ್ಲಿ ಹೆತ್ತವರ ಜವಾಬ್ದಾರಿ ಗುರುತರವಾದುದು. ಮಕ್ಕಳಿಗೆ ಮನೆಯಲ್ಲಿ ಕಲಿಸುವ ಸಂಸ್ಕಾರಗಳು ಬಹು ಮಹತ್ತ್ವದ್ದಾಗಿದ್ದು ಕೊನೆಯವರೆಗೂ ಮನುಷ್ಯನ ಬೆಳವಣಿಗೆಗೆ ಸಹಕರಿಸುತ್ತವೆ ಎಂದು ಪಡುಬಿದ್ರಿಯ ಗಣಪತಿ ಪ್ರೌಢಶಾಲೆಯ ಸಂಸ್ಕೃತ ಅಧ್ಯಾಪಕರಾದ ಡಾ. ರಾಘವೇಂದ್ರ ರಾವ್ ಹೇಳಿದರು.

ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನಲ್ಲಿ ನಡೆದ ಶಿಕ್ಷಕ-ರಕ್ಷಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಹಿಂದಿನ ಶಿಕ್ಷಣ ವ್ಯವಸ್ಥೆಗಿಂತ ಇಂದಿನ ಶಿಕ್ಷಣ ವ್ಯವಸ್ಥೆ ಬಹಳ ಬದಲಾಗಿದೆ. ವಿದ್ಯಾರ್ಥಿಗಳು ಹಾಗೂ ಶಿಕ್ಷಕರ ಸಂಬಂಧ ಚೆನ್ನಾಗಿದ್ದರೆ ಮಾತ್ರ ಶಾಲೆಯಲ್ಲಿ ಬೋಧಿಸುವ ಪಾಠದಲ್ಲಿ ಆಸಕ್ತಿ ಮೂಡುತ್ತದೆ ಎಂದರು.

ಕಾಲೇಜಿನ ಪ್ರಾಂಶುಪಾಲರಾದ ಡಾ. ರಾಘವೇಂದ್ರ ಎ. ಸಭೆಯ ಅಧ್ಯ್ಷತೆ ವಹಿಸಿ ಕಾಲೇಜಿನ ಅಭಿವೃದ್ಧಿ ಯಲ್ಲಿ ಪೋಷಕರ ಪಾತ್ರ ಪ್ರಮುಖವಾದುದು ಎಂದರು. ಉಪಪ್ರಾಂಶುಪಾರಾದ ಡಾ. ಪ್ರಕಾಶ್ ರಾವ್ ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತು ಹಾಗೂ ಸಮಯಪ್ರಜ್ಞೆಯ ಪ್ರಾಮುಖ್ಯವನ್ನು ತಿಳಿಸಿದರು.

ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಗಳಾದ ಡಾ. ರಮೇಶ್ ಟಿ.ಎಸ್. 2022-23ನೇ ಸಾಲಿನ ಶಿಕ್ಷಕ-ರಕ್ಷಕ ಸಂಘದ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಸಿದರು. ಸಭೆಯಲ್ಲಿ ಮೋಹನ್ ಉಡುಪ ಹಂದಾಡಿ ಯವರನ್ನುರನ್ನು ಉಪಾಧ್ಯಕ್ಷರನ್ನಾಗಿ, ಪರಶುರಾಮ ಭಟ್ರನ್ನು ಜಂಟಿ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು

ಶಿಕ್ಷಕ-ರಕ್ಷಕ ಸಂಘದ ಕಾರ್ಯದರ್ಶಿ ಡಾ. ಮಹೇಶ್ ಭಟ್ ಸ್ವಾಗತಿಸಿದರು. ಪ್ರತಿಭಾ ಆಚಾರ್ಯ ನಿರೂಪಿಸಿ, ಪ್ರೀತಾ ಮೈಪಾಡಿ ವಂದಿಸಿದರು.

 
 
 
 
 
 
 
 
 
 
 

Leave a Reply