ಪಿಪಿಸಿಯಲ್ಲಿ ಪರಂಪರಾ ಕೂಟ ಉದ್ಘಾಟನೆ         

ಪರಂಪರೆ ಎಂದರೆ ಹಿಂದಿನವರಿಂದ ಪಡೆದದ್ದು, ಮತ್ತು ಹಿಂದಿನವರು ಬಿಟ್ಟು ಹೋದ ವಿಚಾರಗಳು. ಶಾಸನಗಳು, ದೇವಾಲ ಯಗಳು, ಕೋಟೆ ಇವುಗಳ ಸಂರಕ್ಷಣೆ ಪರಂಪರೆಯ ಸಂರಕ್ಷಣೆಯಾಗಿದೆ. ಒಟ್ಟು ೩೫,೦೦೦ ಶಾಸನಗಳನ್ನು ಇವರೆಗೆ ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ ಸುಮಾರು ೨೦೦೦ ಶಾಸನಗಳು ತುಳುನಾಡಿನದ್ದು. ಉಡುಪಿ ಜಿಲ್ಲೆಯ ಬರ‍್ಕೂರು ಇಂದು ಹಾಳು ಹಂಪಿಯಾಗಿದೆ.
 ಸುಮಾರು ೧೩೦ ಶಾಸನಗಳಿದ್ದ ಬಾರಕೂರಿನಲ್ಲಿ ಬಹುತೇಕ ಮರೆಯಾಗಿದೆ.ಸುಮಾರು ದೇವಸ್ಥಾನಗಳು ಜೀರ್ಣೋದ್ಧಾರಕೊಳ್ಳುತ್ತವೆ. ಅದನ್ನು ಇದ್ದ ಹಾಗೆ ಕಟ್ಟಬೇಕು.  ಅದರ ಪರಂಪರೆ ವಿರುದ್ಧ ಕಟ್ಟಬಾರದು ಎಂದು ದವಳ ಕಾಲೇಜು ಮೂಡಬಿದ್ರೆ ನಿವೃತ್ತ ಇತಿಹಾಸ ಉಪನ್ಯಾಸಕ, ಇತಿಹಾಸ ತಜ್ಞ ಡಾ.ಪುಂಡಿಕೈ ಗಣಪಯ್ಯ ಭಟ್ಟ್ ತಿಳಿಸಿದರು. ಇವರು ಪೂರ್ಣಪ್ರಜ್ಞ ಕಾಲೇಜು ಉಡುಪಿಯ ಇತಿಹಾಸ ವಿಭಾಗದ ಆಶ್ರಯದಲ್ಲಿ ನಡೆದ ಪರಂಪರಾ ಕೂಟದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. 
ಪ್ರಾಂಶುಪಾಲ  ಡಾ.ರಾಘವೇಂದ್ರ  ಎ. ಭಟ್ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಆಕಾಶ್, ಶ್ರೀರಕ್ಷ ಹೆಗ್ಡೆ ಉಪಸ್ಥಿತರಿದ್ದರು. ಇತಿಹಾಸ ವಿಭಾಗದ ಮುಖ್ಯಸ್ಥರಾದ ಪಾರ್ಶ್ವನಾಥ ಇವರು ಪ್ರಾಸ್ತಾವಿಕ ಮಾತುಗಳ ನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು. ಉಪನ್ಯಾಸಕಿ ಸುಕನ್ಯಾ ಅತಿಥಿಗಳನ್ನು ಪರಿಚಯಿಸಿದರು. ವಿದ್ಯಾರ್ಥಿನಿ  ಚೇತನ ಪೈ ಕಾರ‍್ಯಕ್ರಮ ನಿರ್ವಹಿಸಿದರು. ಶ್ರೀರಕ್ಷಾ ಹೆಗಡೆ ಪ್ರಾರ್ಥಿಸಿದರು. ಸುಜನ ಧನ್ಯವಾದಿಸಿದರು.  
 
 
 
 
 
 
 
 
 
 
 

Leave a Reply