29 C
Udupi
Sunday, October 25, 2020

ನೀಟ್ ಫಲಿತಾಂಶ – ಉಡುಪಿ ಪೂರ್ಣಪ್ರಜ್ಞ ಪದವಿಪೂರ್ವಕಾಲೇಜು ವಿದ್ಯಾರ್ಥಿಗಳ ಗರಿಷ್ಟ ಸಾಧನೆ

ವೈದ್ಯಕೀಯ ಪದವಿ  ಶಿಕ್ಷಣದ ಪ್ರವೇಶಾತಿಗೆ 2019-2020ನೆ ಸಾಲಿಗೆ ನಡೆಸಲಾದ ರಾಷ್ಟ್ರೀಯ  ಅರ್ಹತೆ ಮತ್ತು ಪ್ರವೇಶ ಪರೀಕ್ಷೆ – ನೀಟ್‌ನಲ್ಲಿ ಉಡುಪಿಯ ಪೂರ್ಣಪ್ರಜ್ಞ ಪದವಿಪೂರ್ವ ಕಾಲೇಜಿನ ಅನೇಕ ವಿದ್ಯಾರ್ಥಿಗಳು ಪ್ರವೇಶಾರ್ಹತೆಗಳಿಸಲು ಯಶಸ್ವಿಯಾಗಿದ್ದಾರೆ. ನಿಧೀಶ್ ಬನ್ನಾಡಿ-631, ದಿಶಾ ಆಚಾರ್ಯ-625, ಸಂಜನಾ ಶರ್ಮ- 610, ಅನ್ಮೋಲ್ ಶೆಟ್ಟಿ-605), ಶಶಾಂಕ್ ಯು.ಕೆ.-600 ಆದಿತ್ಯ ಎಸ್ ರಾವ್ -592, ಅಕ್ಷತಾ- 564, ಪವಿತ್ರಾ ಕಾಮತ್-547, ಶ್ರೇಯಾಂಕ್ ಯು.ಕೆ.-539 ಇವರು ಕಾಲೇಜಿನ ತಜ್ಞ ಅಧ್ಯಾಪಕರಿಂದ ತರಬೇತಿ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ಪರೀಕ್ಷೆಯಲ್ಲಿ ಶ್ರೇಷ್ಠ ಸಾಧನೆಗೈದ ವಿದ್ಯಾರ್ಥಿಗಳಿಗೆ ಸಂಸ್ಧೆಯ ಅಧ್ಯಕ್ಷರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು, ಗೌರವಾನ್ವಿತ ಕಾರ್ಯದರ್ಶಿ ಪ್ರದೀಪ್ ಕುಮಾರ್, ಆಡಳಿತ ಮಂಡಳಿ, ಪ್ರಾಂಶುಪಾಲೆ ಪ್ರತಿಮಾ ಬಾಳಿಗ ಹಾಗೂ ಅಧ್ಯಾಪಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

ರಾಜ್ಯೋತ್ಸವ ಪ್ರಶಸ್ತಿಯ ಅಂತಿಮ ಪಟ್ಟಿ ಅ.27ರಂದು ಪ್ರಕಟ

ಬೆಂಗಳೂರು: ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಸಾಧಕರಿಗೆ ನೀಡುವ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನವೆಂಬರ್ 1ರಂದು ನಡೆಸಲು ಸರ್ಕಾರ ತೀರ್ಮಾನಿಸಿದ್ದು, ಆಯ್ಕೆ ಪಟ್ಟಿ ಮಂಗಳವಾರ ಪ್ರಕಟವಾಗುವ ಸಾಧ್ಯತೆಗಳಿವೆ. ಒಟ್ಟುಈ ವರ್ಷ 65 ಜನರಿಗೆ ಪ್ರಶಸ್ತಿ...

ರಕ್ಷಿತಾ ನಾಯಕ್ ನಿಗೂಢ ಸಾವು,  ಪ್ರಶಾಂತ್  ಪತ್ತೆಗಾಗಿ  ಪೊಲೀಸರು ಶೋಧ

ಉಡುಪಿ: ಚಿಂತಾಜನಕ ಸ್ಥಿತಿಯಲ್ಲಿದ್ದ ಯುವತಿಯನ್ನು ಆಸ್ಪತ್ರೆಗೆ ಸೇರಿಸಿ,  ಪರಿಚಯವಿದ್ದ  ಯುವತಿ ಅಸ್ವಸ್ಥಳಾದ ಕೂಡಲೇ ಯುವಕ ಕೈ ಕೊಟ್ಟ ಘಟನೆ ಉಡುಪಿಯಲ್ಲಿ ನಡೆದಿದೆ. ಯುವಕ ನಾಪತ್ತೆ ಯಾಗಿದ್ದಾನೆ. ದಾಖಲಾದ ಕೆಲವೇ ಹೊತ್ತಿನಲ್ಲಿ ಯುವತಿ  ರಕ್ಷಿತಾ...

ಎಸ್.ಎಲ್.ವಿ.ಟಿ ಯಲ್ಲಿ ವಿಶೇಷ ದೀಪಾರಾಧನೆ ಸೇವೆ   

ಉಡುಪಿ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನ ಶ್ರೀ ಶಾರದಾ ಮಾತೆ ಸನ್ನಿದಿಯಲ್ಲಿ ಶನಿವಾರ ರಾತ್ರಿ ವಿಸರ್ಜನಾ ಪೂಜಾ ವೇಳೆ  ಸಾವಿರಾರು ಹಣತೆ ದೀಪಗಳ ನ್ನು  ಬೆಳಗಿಸಿ ವಿಶೇಷ ದೀಪಾರಾಧನೆ ಸೇವೆಯನ್ನು ನೆರವೇರಿಸಲಾಯಿತು. ದೇವಳದ...

ಉಡುಪಿ ಸಾರ್ವಜನಿಕ ಶಾರದಾ ಸಮಿತಿಯ ಶಾರದಾ ದೇವಿಯ ಶೋಭಾಯಾತ್ರೆ  

ಉಡುಪಿ ಸಾರ್ವಜನಿಕ ಶಾರದಾ ಸಮಿತಿ ಹಮ್ಮಿಕೊಂಡ 5 ನೇ ವರ್ಷದ ಶಾರದಾ ದೇವಿಯ ಶೋಭಾಯಾತ್ರೆಗೆ ಅರ್ಚಕರಾದ  ಶಶಿಧರ್ ಭಟ್   ಶಾರದಾ ದೇವಿಗೆ ಆರತಿ  ಬೆಳಗಿಸಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಯಾತ್ರೆಯಲ್ಲಿ  ಮಹಿಳಾ  ಚಂಡೆ...

ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ಚಂಡಿಕಾಯಾಗ ಸಂಪನ್ನ

ಇತಿಹಾಸ ಪ್ರಸಿದ್ಧ ಉಡುಪಿಯ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ  ಗೋವರ್ಧನ ತಂತ್ರಿಗಳ ತಂತ್ರಿತ್ವದಲ್ಲಿ ಹಾಗೂ ಪ್ರಕಾಶಾಚಾರ್ಯರ ಮಾರ್ಗದರ್ಶನದಲ್ಲಿ  ಪ್ರವೀಣ ಐತಾಳರ ಆಚಾರ್ಯತ್ವದಲ್ಲಿ ಲೋಕ ಕಲ್ಯಾಣಕ್ಕಾಗಿ ಸಮಸ್ತ ಭಕ್ತರ ಸಹಭಾಗಿತ್ವದಲ್ಲಿ ಶ್ರೀ ಚಂಡಿಕಾಯಾಗವು ಸಂಪನ್ನಗೊಂಡಿತು....
error: Content is protected !!