ಅರ್ಥಶಾಸ್ತ್ರದ ಅಧ್ಯಯನ ಸದಾ ಆಗಬೇಕು -ಅದಮಾರು ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು

ಅರ್ಥವೆಂಬ ಶಬ್ದಕ್ಕೆ ಪ್ರಮುಖವಾಗಿ ಐದು ಅರ್ಥಗಳಿವೆ ಮೊದಲನೆಯದು ಅಭಿಧೇಯ ಅಂದರೆ ಸಮಾನ ಅರ್ಥ ಎರಡನೇಯದು ಹಣ, ಮೂರನೇಯದು ವಸ್ತುಗಳು, ನಾಲ್ಕನೇಯದು ಪ್ರಯೋಜನ ಹಾಗೂ ಐದನೇಯದ್ದು ನಿವೃತ್ತಿ. ಮೊದಲ ನಾಲ್ಕು ಲೋಕದಲ್ಲಿ ಬಹುವಾಗಿ ಬಳಕೆಯಲ್ಲಿ ಇವೆ. ಆದರೆ ಕೊನೆಯ ನಿವೃತ್ತಿ ಎಂದರ್ಥದಲ್ಲಿ ಹೆಚ್ಚು ಬಳಕೆಯಲ್ಲಿ ಇಲ್ಲ. 
ಹೀಗೆ ಕೌಟಲ್ಯನ  ಅರ್ಥಶಾಸ್ತ್ರವನ್ನು ಈ ಐದು ಅರ್ಥಗಳ ವಿಚಾರದಲ್ಲಿ ಸಂಶೋಧಿಸಿ ಅಧ್ಯಯನ ಮಾಡಬೇಕು. ಕೌಟಲ್ಯನೂ ಮಹಾಭಾರತವನ್ನು ಆಧಾರವಾಗಿಟ್ಟುಕೊಂಡೇ ರಚಿಸಿರಬಹುದು. ಇಂತಹ ಅರ್ಥ ಶಾಸ್ತ್ರದ ಅಧ್ಯಯನ ಚೆನ್ನಾಗಿ ನಡೆಯಲಿ ಎಂದು ಅದಮಾರು ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿಶ್ವಪ್ರಿಯ ತೀರ್ಥ ಶ್ರೀಪಾದರು ಉಡುಪಿಯ ಪೂರ್ಣಪ್ರಜ್ಞ  ಕಾಲೇಜಿನ ಸಂಸ್ಕೃತ ವಿಭಾಗದ ವತಿಯಿಂದ ನಡೆದ ಕೌಟಲ್ಯ  ಅರ್ಥಸಂಗ್ರಹ ಎಂಬ ರಾಷ್ಟ್ರೀಯ ವೆಬಿನಾರನ್ನು ಉದ್ಘಾಟಿಸಿ ಆಶೀರ್ವದಿಸಿದರು. 
ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿ ಉಡುಪಿ ಶ್ರೀ ಮನ್ಮಧ್ವಸಿದ್ಧಾಂತಪ್ರಭೋದಿನಿ ಸಂಸ್ಕೃತ ಮಹಾಪಾಠಶಾಲೆಯ ಅಲಂಕಾರ ಶಾಸ್ತ್ರ ವಿಭಾಗದ ಅಧ್ಯಕ್ಷರಾದ ಡಾ ಅಮೃತೇಶ ಆಚಾರ್ಯರು ಕೌಟಲ್ಯನ ಹೆಸರಿನ ಔಚಿತ್ಯ, ದೇಶ ಕಾಲ ಹಾಗೂ ರಾಜನೀತಿ, ಅರ್ಥನೀತಿ ದಂಡನೀತಿ, ಕರವ್ಯವಸ್ಥೆ, ಸಮಾಜ ಶಾಸ್ತ್ರ, ಅರ್ಥಶಾಸ್ತ್ರ ಮೊದಲಾದ ವಿಚಾರಗಳ ಕುರಿತು ವಿಸ್ತೃತ ವಿಷಯ ಮಂಡನೆಯನ್ನು ಮಾಡಿದರು.
ಕಾಲೇಜಿನ ಪ್ರಾಚಾರ್ಯ ಡಾ ರಾಘವೇಂದ್ರ ಎ ಅಧ್ಯಕ್ಷತೆಯನ್ನು ವಹಿಸಿದ್ದರು. ಉಪಪ್ರಾಚಾರ್ಯ ಡಾ ಪ್ರಕಾಶ ರಾವ್ ಎ ಉಪಸ್ಥಿತರಿದ್ದರು. ಸಂಸ್ಕೃತ ವಿಭಾಗದ ಮುಖ್ಯಸ್ಥ ರಾದ ಡಾ ರಮೇಶ ಟಿ ಎಸ್ ಪ್ರಸ್ತಾವಿಕ ಮಾತಗಳ ಮೂಲಕ ಸ್ವಾಗತಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಪ್ರತಿಭಾ ಭಟ್ ಹಾಗೂ ದೀಕ್ಷಾ ಎಸ್ ಪ್ರಾರ್ಥಿಸಿದರು.  
ಜಾಲತಾಣದ ನಿರ್ವಹಣೆಯಲ್ಲಿ ಉಪನ್ಯಾಸಕರಾದ ಅತುಲ್ ಭಟ್, ಚಕ್ರಪಾಣಿ, ಮಧುಭಟ್ ಹಾಗೂ ರಚನಾ ಸಹಕರಿಸಿದರು. ಸಂಸ್ಕೃತ ಉಪನ್ಯಾಸಕರಾದ  ಡಾ ಆನಂದ ಆಚಾರ್ಯರರು ಕಾರ್ಯಕ್ರಮವನ್ನು ನರ‍್ವಹಿಸಿ ವಂದಿಸಿದರು.
 
 
 
 
 
 
 
 
 
 
 

Leave a Reply