ಉಡುಪಿ ಶ್ರೀಅದಮಾರು ಮಠದ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರ ದಿನಾಚರಣೆ

“ನಾನಾ ಜನಸ್ಯ ಶುಶ್ರೂಷಾ …..  ಎಂಬ ಮಧ್ವಾಚಾರ್ಯರ ಮಾತಿನಂತೆ ಪ್ರತಿಮೆಯಲ್ಲಿ ಮಾತ್ರ ದೇವರನ್ನು ಕಾಣಬೇಡ:  ಜನರಲ್ಲಿ ಕೂಡ ದೇವರನ್ನು ಕಾಣಬೇಕು. ಹೊಟ್ಟೆಯ ಬಡತನ ಮಾತ್ರ ಮುಖ್ಯವಲ್ಲ, ಜ್ಞಾನದ ಬಡತನ ನಿರ್ಮೂಲನೆ ಮಾಡಬೇಕು. ರುಚಿಯಾದ ಉಪಾಹಾರದಂತೆ ಹಿತವಾದ ಜ್ಞಾನವನ್ನು ನೀಡಲು ಪೂರ್ಣಪ್ರಜ್ಞ ಸಂಸ್ಥೆಯನ್ನು ಶ್ರೀವಿಬುಧೇಶ ತೀರ್ಥ ಶ್ರೀಪಾದರು ಸಂಸ್ಥಾಪಿಸಿದರು. 

ಆಧ್ಯಾತ್ಮಕ ಶಕ್ತಿ ಮತ್ತು ಅಧ್ಯಾಪಕರ ಪ್ರಾಮಾಣಿಕ ಪ್ರಯತ್ನದ ಫಲವಾಗಿ ಪೂರ್ಣಪ್ರಜ್ಞ ಶಿಕ್ಷಣಸಂಸ್ಥೆ ಮಹತ್ವವನ್ನು ಪಡೆದುಕೊಂಡಿತು”. ಎಂದು ಪರಮಪೂಜ್ಯ ಶ್ರೀ ಶ್ರೀವಿಶ್ವಪ್ರಿಯ ತೀರ್ಥ ಶ್ರೀಪಾದರು ನುಡಿದರು.

ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಶ್ರಯದಲ್ಲಿ  ಪೂರ್ಣಪ್ರಜ್ಞ ಕಾಲೇಜು, ಪೂರ್ಣಪ್ರಜ್ಞ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಹಾಗೂ ಪೂರ್ಣಪ್ರಜ್ಞ ಪದವಿಪೂರ್ವ  ಕಾಲೇಜು, ಉಡುಪಿ ಇವರ ಸಹಭಾಗಿತ್ವದಲ್ಲಿ ಉಡುಪಿ ಶ್ರೀ ಅದಮಾರು ಮಠ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶ್ರೀ ವಿಬುಧೇಶ ತೀರ್ಥ ಶ್ರೀಪಾದರ ಸಂಸ್ಮರಣಾ ಕಾರ್ಯಕ್ರಮ ನಡೆಯಿತು.

ಸಂಸ್ಮರಣಾ ಭಾಷಣ ಮಾಡಿದ ನಿವೃತ್ತ ಪ್ರಾಧ್ಯಾಪಕ ಡಾ. ಶ್ರೀಕಾಂತ ಸಿದ್ಧಾಪುರ ರವರು ಮಾತನಾಡುತ್ತಾ, “ಶ್ರೀ ವಿಬುಧೇಶ ಶ್ರೀಪಾದರದ್ದು ಇತರ ಸಂತರಿಗಿಂತ ವಿಭಿನ್ನವಾದ ವ್ಯಕ್ತಿತ್ವ.  ಸಂಸ್ಕೃತ, ತುಳು, ಕನ್ನಡ ಭಾಷೆಯೊಂದಿಗೆ ಇಂಗ್ಲಿಷನ್ನು ಕಲಿತರು. ವೇದ, ಉಪನಿಷತ್ತು, ಗೀತೆ ಯೊಂದಿಗೆ ವಿಜ್ಞಾನದ ಬಗ್ಗೆ ಆಸಕ್ತಿಯನ್ನು ತಾಳಿದರು.

ಬಾಲಕನಾಗಿರುವಾಗಲೇ ದೇಶದ ಸ್ವಾತಂತ್ರ‍್ಯ ಹೋರಾಟದಲ್ಲಿ ಭಾಗವಹಿಸಿ ದೇಶಪ್ರೇಮ ಮೆರೆದರು. ಬಲಿಷ್ಠ ದೇಶ ನಿರ್ಮಾಣಕ್ಕಾಗಿ ಆಧ್ಯಾತ್ಮದೊಂದಿಗೆ ದೇಶದಾದ್ಯಂತ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ ದರು. ಶಿಕ್ಷಣದಿಂದಲೇ ಪ್ರಗತಿ” ಎಂದರು.

“ದೇಶದ ಪ್ರತಿಭಾವಂತರ ಫಲಾಯನವನ್ನು ತಪ್ಪಿಸಲು ಬೆಂಗಳೂರಿನಲ್ಲಿ ವಿಜ್ಞಾನ ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿ ವಿಜ್ಞಾನಕ್ಕೆ ವಿಶೇಷ ಮಹತ್ವ ನೀಡಿದರು. ಶಿಕ್ಷಕರು ನಿರಂತರ ಅಧ್ಯಯನ ಶೀಲರಾಗಬೇಕು, ಬದಲಾದ ಸನ್ನಿವೇಶಗಳಿಗೆ ಪೂರಕವಾಗಿ ನಮ್ಮ ಅಧ್ಯಯನ ವಿಷಯವು ಬದ ಲಾಗಬೇಕು. ಭಾರತದ ಕೀರ್ತಿಯನ್ನು ಜಾಗತಿಕ ಮಟ್ಟದಲ್ಲಿ ಎತ್ತಿಹಿಡಿಯುವ ಪ್ರತಿಭೆ ಮಕ್ಕಳದ್ದಾಗ ಬೇಕು ಎಂದು ಬಯಸಿದ್ದರು”. ಎಂದು ಹೇಳಿದರು.

ಪೂರ್ಣಪ್ರಜ್ಞ ಕಾಲೇಜಿನ ಆಡಳಿತ ಮಂಡಳಿಯ ಗೌರವಾನ್ವಿತ ಕಾರ್ಯದರ್ಶಿಗಳಾದ ಖ್ಯಾತ ವೈದ್ಯ ಡಾ. ಜಿ ಎಸ್ ಚಂದ್ರಶೇಖರ್, ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ಆಡಳಿತ ಮಂಡಳಿಯ ಗೌರವಾನ್ವಿತ ಕಾರ್ಯದರ್ಶಿಗಳಾದ ಖ್ಯಾತ ನ್ಯಾಯವಾದಿ ಶ್ರೀ ಪ್ರದೀಪ್ ಕುಮಾರ್ ಪೂಜ್ಯ ಶ್ರೀ ವಿಭುದೇಶ ತೀರ್ಥ ಶ್ರೀಪಾದರಪುತ್ತಳಿಗೆ ಮಾಲಾರ್ಪಣೆ ಮಾಡಿ ಸಂಸ್ಮರಿಸಿದರು.

ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಗಳ ಮುಖ್ಯಸ್ಥರಾದ ಡಾ. ಸುಕನ್ಯಾ ಮೇರಿಜೆ, ರಾಘವೇಂದ್ರ, ಡಾ. ಭರತ್, ಶ್ರೀಮತಿ ಪ್ರತಿಮಾ ಬಾಳಿಗ ಉಪಸ್ಥಿತರಿದ್ದರು .

ಸಂಸ್ಮರಣಾ ಕಾರ್ಯಕ್ರಮದಲ್ಲಿ ಎಲ್ಲಾ ಸಂಸ್ಥೆಗಳ ಉಪನ್ಯಾಸಕ ವೃಂದದವರು ಹಾಗೂ ಕಚೇರಿ ಸಿಬ್ಬಂದಿಗಳು ಭೌತಿಕವಾಗಿ ಭಾಗವಹಿಸಿದರು. ಯೂಟ್ಯೂಬ್ ಮೂಲಕ ವಿದ್ಯಾರ್ಥಿಗಳು ಕಾರ್ಯ ಕ್ರಮದಲ್ಲಿ ಪಾಲ್ಗೊಂಡರು.

ಸಂಧ್ಯಾ ಕಾಲೇಜಿನ ಸಂಸ್ಕೃತ ವಿಭಾಗದ ಉಪನ್ಯಾಸಕರಾದ ಡಾ. ರಾಮಕೃಷ್ಣ ಉಡುಪ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ರಮಾನಂದ ರಾವ್ ಕಾರ್ಯಕ್ರಮವನ್ನು ಆಯೋಜಿಸಿ ನಿರೂಪಿಸಿದರು.

 
 
 
 
 
 
 
 
 
 
 

Leave a Reply