ಮೂರ್ತದಿಂದ​ ಅಮೂರ್ತದೆಡೆಗೆ ಹೋಗುವ ಮಾನಸಿಕ ಸ್ಥಿತಿಯನ್ನು​ ಕಂಡು  ಕೊಂಡರೆ ಮಾತ್ರ ಆನಂದವನ್ನು ಪಡೆಯಬಹುದು~ಡಾ. ರಾಬರ್ಟ್ ಕ್ಲೈವ್

ಎನ್.ಎಸ್.ಎಸ್. ಸ್ವಯಂಸೇವಕರಿಗೆ ವ್ಯಕ್ತಿತ್ವ ವಿಕಸನ​ ಕಾರ್ಯಾಗಾರ- ಡಾ. ರಾಬರ್ಟ್ ಕ್ಲೈವ್
“ಸಮಾಜದಲ್ಲಿ ಅವಮಾನ ಅನುಮಾನ ಹೆಚ್ಚಾಗಿರುತ್ತದೆ. ಅದನ್ನು​ ಮೆಟ್ಟಿ ನಿಂತು ಜೀವನ ಸಾಗಿಸಬೇಕು. ನಾವು ಕೆಲಸವನ್ನು​ ಪಡೆದುಕೊಳ್ಳಬೇಕೇ ಹೊರತು ಕೆಲಸವನ್ನು ಕೇಳಿಕೊಂಡು​ ಹೋಗಬಾರದು. ಮಾನವೀಯ ಮೌಲ್ಯಗಳಿಗೆ ಹೆಚ್ಚಿನ ಗೌರವವನ್ನುನೀಡಬೇಕು. 
 
ಭಾರತದಲ್ಲಿ ಸಂತೋಷ​ದಿಂದ  ಬದುಕುವವರ ಪ್ರಮಾಣ​ ಕಡಿಮೆಯಾಗಿದೆ. ವಿಶ್ವ ಸಂಸ್ಥೆಯ ವಿಶ್ವ ಸಂತೋಷ ವರದಿ 2021ರ​ ಪ್ರಕಾರ ಜಗತ್ತಿನ ಸಂತೋಷ ದಿಂದ  ಬದುಕುವ ಜನರ 156 ದೇಶಗಳಲ್ಲಿ ಭಾರತ 144 ನೇ ಸ್ಥಾನದಲ್ಲಿದೆ.
ಫಿನ್ಲ್ಯಾಂಡ್, ಡೆನ್ಮಾರ್ಕ್,​ ಸ್ವಿಟ್ಜರ್ಲೆಂಡ್ ಕ್ರಮವಾಗಿ ಮೊದಲ ಮೂರು ಸ್ಥಾನಗಳಲ್ಲಿವೆ.” ಎಂದುಕ್ರಾಸ್ ಲ್ಯಾಂಡ್ ಕಾಲೇಜಿನ ಗ್ರಾಮೀಣಾಭಿವೃದ್ಧಿ ವಿಭಾಗದ ಮುಖ್ಯಸ್ಥರಾದ​ ಡಾ. ರಾಬರ್ಟ್ ಕ್ಲೈವ್ ಹೇಳಿದರು.​ 

ಉಡುಪಿ ಶ್ರೀ ಪೂರ್ಣಪ್ರಜ್ಞ ಸಂಧ್ಯಾ ಕಾಲೇಜಿನ ರಾಷ್ಟ್ರೀಯ ಸೇವಾ​ ಯೋಜನಾ ಘಟಕದ ಸ್ವಯಂ ಸೇವಕರಿಗೆ ‘ಬೆಳವಣಿಗೆ- ಸಂತೋಷ –ಸಮೃದ್ಧಿ’ ಎಂಬ ವಿಷಯದ ಕುರಿತಾದ ಕಾರ್ಯಾಗಾರವನ್ನು ಸಂಪನ್ಮೂಲ​ ವ್ಯಕ್ತಿಯಾಗಿ ನಡೆಸಿಕೊಟ್ಟರು.
“ಬೆಳವಣಿಗೆ – ಸಂತೋಷ – ಸಮೃದ್ಧಿ” ಎನ್ನುವುದು​ ಹೊರಗಿನಿಂದ ಪಡೆಯಲಾಗು ವುದಿಲ್ಲ, ಅನುಭವಿಸುವುದರಲ್ಲಿ​ ಇರುತ್ತದೆ. ಕೇವಲ ಭೌತಿಕ ಸಂಪತ್ತೇ ಸಂಪತ್ತಲ್ಲ. 
 
ಮೂರ್ತದಿಂದ​ ಅಮೂರ್ತದೆಡೆಗೆ ಹೋಗುವ ಮಾನಸಿಕ ಸ್ಥಿತಿಯನ್ನು​ ಕಂಡು  ಕೊಂಡರೆ ಮಾತ್ರ ಆನಂದವನ್ನು ಪಡೆಯಬಹುದು. ಜೀವನವು ಶಾಶ್ವತವಲ್ಲ ಜೀವನವು ಒಂದು ಕೊಡುಗೆ ಅದನ್ನು​ ಸಂತೋಷ​ದಿಂದ ಸಾಗಿಸಿ ಸುಖಿಸಬೇಕು. ಎಲ್ಲವೂ ಶಿಕ್ಷಣ ದಿಂದ ಸಿಗಲು ಸಾಧ್ಯವಿಲ್ಲ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ​ ಪ್ರಾಚಾರ್ಯರಾದ ಡಾ. ಸುಕನ್ಯಾ ಮೇರಿ ಜೆ ವಹಿಸಿದ್ದರು. ಮುಖ್ಯ​ ಅಭ್ಯಾಗತರಾಗಿ ಕಾಲೇಜಿನ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ  ಮಟ್ಟು​ ಲಕ್ಷ್ಮೀನಾರಾಯಣ ರಾವ್ ಭಾಗವಹಿಸಿದ್ದರು.
ಎನ್.ಎಸ್.ಎಸ್ ಯೋಜನಾಧಿಕಾರಿ ರಮಾನಂದ ರಾವ್ ಕಾರ್ಯಕ್ರಮವನ್ನು ಆಯೋಜಿಸಿ ಸ್ವಾಗತಿಸಿದರು.​ ಸ್ವಯಂಸೇವಕಿ ಅಖಿಲಾ ಹೆಗಡೆ ನಿರೂಪಿಸಿದರು. ಯೋಜನಾಧಿಕಾರಿ ಶ್ರೀಲತಾ​ ಆಚಾರ್ಯ ವಂದಿಸಿದರು.
 
 
 
 
 
 
 
 
 
 
 

Leave a Reply