ಮಹಾಭಾರತದಲ್ಲಿರುವ  ನೀತಿಗಳ ಸೌಂದರ್ಯವನ್ನು  ತಿಳಿದು ಜೀವನದಲ್ಲಿ ಅವುಗಳನ್ನು ಅಳವಡಿಸಬೇಕು- ಡಾ ಮಧುಸೂದನ ಭಟ್

ಮಹಾಭಾರತದಲ್ಲಿ ಚಂದ್ರವಂಶದ ರಾಜನಾದ,  ತಂದೆಯಾದ ಶಂತನುವಿಗಾಗಿ  ಶಾಶ್ವತವಾಗಿ ರಾಜ್ಯಭಾರದ ತ್ಯಾಗವನ್ನು ಮಾಡಿ ಹಾಗೆಯೇ ವೈವಾಹಿಕ ಬಂಧನಕ್ಕೊಳಗಾಗದೇ ಆಜನ್ಮ ಬ್ರಹ್ಮಚರ್ಯ ವ್ರತ ಪಾಲನೆ ಮಾಡಿದವನು ಗಂಗಾಪುತ್ರ ದೇವವ್ರತ.  ತಾನು ಮಾಡಿದ ಭೀಕರ ಪ್ರತಿಜ್ಞೆಯಿಂದ  ಭೀಷ್ಮ ಎಂಬ ಹೆಸರಿನಿಂದ ಪ್ರಸಿದ್ದರಾದರು. ಪ್ರತಿಜ್ಞೆಯ ಮೂಲಕ  ಪಿತೃದೇವೋ ಭವ ನೀತಿಯನ್ನು ತೋರಿಸಿದರು.
ಆದರೆ ದೈವವಶಾತ್ ಉಂಟಾದ ಹಸ್ತಿನಾವತಿ ರಾಜ್ಯದ ಅರಾಜಕತೆಯ ಸಮಯದಲ್ಲಿ ಮಾತೆ ಸತ್ಯವತಿಗೆ  ಭೀಷ್ಮರು ತಾವು ಮಾಡಿದ ಸತ್ಯ ಪ್ರತಿಜ್ಞೆಯನ್ನು ಮನದಟ್ಟು ಮಾಡಿಸಿ, ಮೂರು ಲೋಕದ ಆಧಿಪಾತ್ಯ ಬಂದರೂ ತನಗೆ ಅದು ಬೇಡ ಎಂದು ತಿಳಿಸಿದರು. ಆಗ ಆಕೆಯ  ಪ್ರಾರ್ಥನೆಯಂತೆಯಂತೆ ಶ್ರೀವೇದವ್ಯಾಸರ ರ‍್ತೃತ್ವದ ಶಕ್ತಿಯನ್ನು  ತಿಳಿಸಿ ಅವರ ಅನುಗ್ರಹದಿಂದ ಅರಾಜಕತೆಯನ್ನು ಶಾಶ್ವತವಾಗಿ ದೂರಿಕರಿಸಿದರು. ಹೀಗೆ ಮಾತೃದೇವೋ ಭವ ಎಂಬ ನೀತಿಯನ್ನೂ ತೋರಿಸಿದರು.
ಇದರಿಂದ ಅತಿ ಸಂತೋಷವನ್ನು ಹೊಂದಿದ ಶಂತನು ಭೀಷ್ಮರಿಗೆ ಇಚ್ಛಾಮರಣದ ವರವನ್ನು ನೀಡಿದರು.  ಇದರ ಫಲವಾಗಿ ಮುಂದೆ ಭೀಷ್ಮರ ಶಾಂತಿರ‍್ವ ಬಂದು ಮಾನವರಿಗೆ ಬಹೂಪಕೃತವಾಯಿತು. ಹೀಗೆ  ಮಹಾಭಾರತದಲ್ಲಿನ ಒಂದೊಂದು ಘಟನೆಗಳೂ ಕೂಡ ಮಾನವರಿಗೆ ನೀತಿಯನ್ನು ತಿಳಿಸುತ್ತವೆ.
ಅವುಗಳನ್ನು ತಿಳಿದು, ಸೌಂದರ್ಯವನ್ನು  ಮನದಟ್ಟು ಮಾಡಿಕೊಂಡು ನಮ್ಮಜೀವನದಲ್ಲಿ ಅಳವಡಿಸಿಕೊಂಡರೆ ಸಾರ್ಥಕ  ಬದುಕು ಉಂಟಾಗುವುದು ಎಂದು ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ನಿವೃತ್ತ ಪ್ರಾಚರ‍್ಯರಾದ ಡಾ.ಮಧುಸೂದನ ಭಟ್ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಪ್ರಜ್ಞಾ ಮಂಥನ ಹಾಗೂ ಸಂಸ್ಕೃತವಿಭಾಗದ ವತಿಯಿಂದ ನಡೆದ ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಮಕ್ಕಳಿಗೆ ತಿಳಿಯಪಡಿಸಿದರು.
ಮಾನವರ ಪಶ್ಚಾತ್ತಾಪ- ಅವರ ರ‍್ಮಚ್ಯುತಿ-ಕಲಿಯಿಂದ ಎಚ್ಚರ- ಪಶ್ಚಾತ್ತಾಪದ ಪರಿಣಾಮ, ನಿಂದನೆಯೇ ಕೊಲೆ,  ಆತ್ಮಸ್ತುತಿಯೇ ಆತ್ಮಹತ್ಯೆ,  – ಅಹಂಕಾರದ ವಿಚಾರಗಳನ್ನು ಮಹಾಭಾರತದ ವಚನಾನುಸಾರವಾಗಿ ಕತೆಯ ಮೂಲಕ ತಿಳಿಸಿ, ನಾವು ಅಳವಡಿಸಿ ಕೊಂಡಿರುವ ಸಂಸ್ಕಾರ-ಧರ್ಮಗಳು ಮಹಾಭಾರತದ ಈ ವಿಚಾರಗಳಿಂದ ನಮಗೆ ಮತ್ತಷ್ಟು ಅನುಕೂಲ ಮಾಡುತ್ತವೆ ಎಂಬುದನ್ನು ವಿಶದೀಕರಿಸಿದರು.

ಶ್ರೀಅದಮಾರು ಮಠ ಶಿಕ್ಷಣ ಸಂಸ್ಥೆಯ ಉಡುಪಿ ಶಾಖೆಯ ಗೌರವ ಆಡಳಿತ ಅಧಿಕಾರಿಗಳಾದ ಡಾ.ಎ.ಪಿ.ಭಟ್ ಇವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಚರ‍್ಯರಾದ ಡಾ.ರಾಮು.ಎಲ್ ಇವರು ವಹಿಸಿದ್ದರು. ವೇದಿಕೆಯಲ್ಲಿ ಸಂಸ್ಕೃತ ವಿಭಾಗ ಮುಖ್ಯಸ್ಥ ಡಾ.ರಮೇಶ.ಟಿ.ಎಸ್ ಇವರು ಉಪಸ್ಥಿತರಿದ್ದರು.

ಕು.ಕೃತ್ತಿಕಾ ಪ್ರಾಸ್ತಾವಿಕ ಮಾತಿನ ಮೂಲಕ ಸ್ವಾಗತಿಸಿದರು. ಹರ್ಷಿತಾ  ಹಾಗೂ ಚೇತನಾ ಪ್ರಾರ್ಥಿಸಿದರು. ಚೇತನಾ ಪೈ ನಿರೂಪಿಸಿದರು  ಕಾರ‍್ಯಕ್ರಮದಲ್ಲಿ ಕು.ಶ್ರೀನಯನಾ  ಇವರು ಧನ್ಯವಾದವಿತ್ತರು.

Leave a Reply