Janardhan Kodavoor/ Team KaravaliXpress
29.6 C
Udupi
Thursday, January 20, 2022
Sathyanatha Stores Brahmavara

ಪೂರ್ಣಪ್ರಜ್ಞ ಕಾಲೇಜಿನಲ್ಲಿ ರಾಜ್ಯಮಟ್ಟದ ವಿಜ್ಞಾನ ಕಾರ್ಯಾಗಾರ

ಉಡುಪಿ : ಪೂರ್ಣಪ್ರಜ್ಞ ವಿಜ್ಞಾನ ಸಂಶೋಧನಾ ಸಂಸ್ಥೆ ಬೆಂಗಳೂರು ಹಾಗೂ ಪೂರ್ಣಪ್ರಜ್ಞ ಕಾಲೇಜು, ಉಡುಪಿ ಇವರ ಸಂಯುಕ್ತ ಆಶ್ರಯದಲ್ಲಿ ‘ಸ್ಕೋಪ್ ಆಫ್ ರಿಸರ್ಚ್ ಇನ್ ಬೇಸಿಕ್ ಸೈನ್ಸ್ ಎಂಬ ರಾಜ್ಯಮಟ್ಟದ ಕಾರ್ಯಗಾರವು ಡಿ.27 ರಿಂದ ಡಿ‌. 29ರ ತನಕ ಕಾಲೇಜಿನ ಆಂತರಿಕ ಗುಣಮಟ್ಟ ಖಾತರಿ ಘಟಕ ಹಾಗೂ ವಿಜ್ಞಾನ ಸಂಘ ಇವರ ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮದ ಉಧ್ಘಾಟನೆಯನ್ನು ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಬಿ. ಎಸ್. ಶೇರಿಗಾರ ನೆರವೇರಿಸಿದರು. ಮೂರು ದಿನಗಳ ಈ ಕಾರ್ಯಗಾರದಲ್ಲಿ 11 ಜನ ವಿಜ್ಞಾನಿಗಳು, 50 ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ಕಾರ್ಯಕ್ರಮದ ಸಮಾರೋಪ ಸಮಾರಂಭವು ಪಿಪಿಐಎಸ್ ನ ಸಂಪನ್ಮೂಲ ವ್ಯಕ್ತಿ ಪ್ರೊ. ಉಡುಪಿ ರಾಮಗೋಪಾಲ ಮತ್ತು ಪ್ರೊ. ಸಂಜೀವ ಮರದೂರು ಉಪಸ್ಥಿತಿಯಲ್ಲಿ, ಸ್ವಾಮೀಜಿಯವರ ಹಿತವಚನಗಳೊಂದಿಗೆ ಸಂಪನ್ನಗೊಂಡಿತು.

ಕಾಲೇಜಿನ ಪ್ರಾಂಶುಪಾಲರು ಡಾ. ರಾಘವೇಂದ್ರ ಎ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೂರು ದಿನಗಳ ಕಾರ್ಯಾಗಾರದ ವರದಿಯನ್ನು ಸಂಚಾಲಕ ಡಾ. ಆನಂದ ಕೆ ಮಂಡಿಸಿದರು. ಭೌತಶಾಸ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಲಕ್ಷ್ಮೀಶ ರಾವ್ ಸ್ವಾಗತಿಸಿ, ರಸಾಯನಶಾಸ್ತ್ರದ ವಿಭಾಗ ಮುಖ್ಯಸ್ಥ ಡಾ. ಸುದರ್ಶನ ಶೆಟ್ಟಿ ವಂದಿಸಿದರು, ಸಂಖ್ಯಾಶಾಸ್ತ್ರದ ಪ್ರಾಧ್ಯಾಪಕಿ ಧನ್ಯಾ ಕೆ. ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!