ಆನ್ಲೈನ್ ಕ್ಲಾಸಿನಲ್ಲಿ ಕನ್ನಡ ಮಿಸ್ಸು ಮಕ್ಕಳಿಗೆ ಕೊರೋನಾ ಬಗ್ಗೆ ಪ್ರಬಂಧ ಬರೆಯಲು ಹೇಳಿದಾಗ  ಒಬ್ಬ ಹುಡುಗ ಹೀಗೆ ಬರೆದ

“ಕೊರೋನಾ ಒಂದು ಹಬ್ಬ. ಇದು ಎಷ್ಟೋ ವರ್ಷಕ್ಕೊಂದು ಸಲ, ಹೋಲಿ ಆದಮೇಲೆ ಬರುತ್ತೆ. ಇದು ಬೇರೆ ಹಬ್ಬಗಳ ತರ ಒಂದೋ ಎರಡೋ ದಿನ ಇರುವುದಿಲ್ಲ. ಇದು ತಿಂಗಳುಗಟ್ಟಲೆ ಇರುತ್ತದೆ. ಈ ಹಬ್ಬದಲ್ಲಿ ದಿನಕ್ಕೊಂದು ರೀತಿಯ ಅಡುಗೆ ಮಾಡಲಾಗುತ್ತದೆ.
ಶಾಲೆ, ಕಾಲೇಜುಗಳಿಗೆ ತಿಂಗಳುಗಟ್ಟಲೆ ರಜಾ ಇರುತ್ತದೆ. ಪರೀಕ್ಷೆಗಳು ರದ್ದಾಗುತ್ತವೆ. ಅಂಗಡಿ, ಕಛೇರಿಗಳು ಮುಚ್ಚಿರುತ್ತವೆ. ಈ ಹಬ್ಬವನ್ನು ದೀಪ ಬೆಳಗಿ, ಗಂಟೆ ಹೊಡೆದು, ತಟ್ಟೆ ಬಡಿದು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಜನರು ಪರಸ್ಪರ ಮುಟ್ಟುವುದಿಲ್ಲ. ಮಾಸ್ಕ್ ಹಾಕಿಕೊಂಡು, ನಮಸ್ತೆ ಮಾಡುತ್ತಾರೆ.
ಈ ಹಬ್ಬದಲ್ಲಿ ಅಪ್ಪಂದಿರು ಬರ್ಮುಡಾ, ಬನಿಯನ್ ಹಾಕಿಕೊಂಡು ಪಾತ್ರೆ ತೊಳೆದು, ಕಸ ಗುಡಿಸಿ, ನೆಲ ಒರೆಸುತ್ತಾರೆ. ಅಮ್ಮಂದಿರು ಅಡುಗೆ ಮಾಡಿ ಮೊಬೈಲ್ ನೋಡುತ್ತಾ ಕುಳಿತಿರುತ್ತಾರೆ”.
ವಾಟ್ಸಪ್ ಕೃಪೆ 
 
 
 
 
 
 
 
 
 
 
 

Leave a Reply