ತಾರೀಕು 26 ನವಂಬರ್ 2022 ಶನಿವಾರದಂದು ಎನ್.ಐ.ಟಿ.ಕೆ ಸುರತ್ಕಲ್ ಕಾಲೇಜಿನಲ್ಲಿ 1995-99 ವರ್ಷಗಳ ಎಂ.ಸಿ.ಎ (ಮಾಸ್ಟರ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್) ಕೋರ್ಸ್ನ ಹಳೆವಿದ್ಯಾರ್ಥಿಗಳ ಪುನರ್ಮಿಲನ ನೆರವೇರಿತು. ಸುಮಾರು 25 ಸಹಪಾಠಿಗಳು ಬೇರೆ ಬೇರೆ ರಾಜ್ಯಗಳಿಂದ, ದೇಶಗಳಿಂದ ಬಂದು ಈ ಸಮ್ಮಿಲನದಲ್ಲಿ ಭಾಗವಹಿಸಿದ್ದರು.
ಕಾಲೇಜ್ ಆಡಳಿತದ ಮುಖ್ಯಾಧಿಕಾರಿಗಳಾದ ರಿಜಿಸ್ಟ್ರಾರ್ ಕೆ. ರವೀಂದ್ರನಾಥ್, Jt ರಿಜಿಸ್ಟ್ರಾರ್ ರಾಮ್ ಮೋಹನ್ ವೈ, ಡೀನ್ ಡಾ|ವಿಜಯ್ ಎಚ್. ದೇಸಾಯಿ, ಡೀನ್ ಜಿ. ಸಿ. ಮೋಹನ್ ಕುಮಾರ್ ಮತ್ತು “ಗಣಿತಶಾಸ್ತ್ರ ಮತ್ತು ಗಣನಾತ್ಮಕ ವಿಜ್ಞಾನ” ವಿಭಾಗದ ಪ್ರಾಧ್ಯಾಪಕರಾದ ಡಾ|ಆರ್, ಮಧುಸೂದನ್,(HOD), ಡಾ|ಎ. ಕಂದಸ್ವಾಮಿ , ಡಾ|ಮುರಳಿಧರ್ ಎನ್. ಎನ್, ಡಾ|ಅನಂತನಾರಾಯಣ, ಡಾ|ಸುರೇಶ್ ಎಂ. ಹೆಗ್ಡೆ, ಡಾ|ಬಿ. ಆರ್. ಶಂಕರ್, ಡಾ|ವಿ. ಮುರುಗನ್, ಡಾ|ಎ. ಸೆಂತಿಲ್ ತಿಲಕ್, ಡಾ|ಪುಷ್ಪರಾಜ್ ಶೆಟ್ಟಿ, ಡಾ|ಚಾಂದಿನಿ. ಜಿ, ಉಪಸ್ಥಿತರಿದ್ದರು. ನಿವೃತ್ತ ಪ್ರಾಧ್ಯಾಪಕರಾದ ಡಾ|ಪಿ. ರಘುಪತಿ ರಾವ್, ಡಾ|ಆರ್. ಜೆ. ಡಿಸೋಜಾ, ಅವರ ಆಗಮನ ಸಭೆಯ ಮೆರುಗನ್ನು ಹೆಚ್ಚಿಸಿತ್ತು.
ಇದು ಕಾಲೇಜಿನ ಇತಿಹಾಸದಲ್ಲಿಯೇ ಎಂ.ಸಿ.ಎ ಕೋರ್ಸ್ನ ಹಳೆವಿದ್ಯಾರ್ಥಿಗಳ ಮೊದಲಿನ ಸಮ್ಮಿಲನ ವಾಗಿತ್ತು. ಮುಖ್ಯಾಧಿಕಾರಿಗಳು, ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಹಿತವಚನ ನೀಡಿ ಶುಭ ಹಾರೈಸಿದರು. ಆಡಳಿತವು KREC ಇಂದ NITKಗೆ ಬೆಳೆದು ಬಂದ ರೀತಿ ,ಎಂ.ಸಿ.ಎ ಕೋರ್ಸ್ ಕಲಿಕಾ ಕ್ರಮ ದಲ್ಲಿ, ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಆದ ಬದಲಾವಣೆಗಳನ್ನು ವಿವರಿಸಿದರು.
ಹಳೆ ವಿದ್ಯಾರ್ಥಿಗಳಿಂದ ಹೊಸ ಕೋರ್ಸ್ ಗಳನ್ನು ರಚಿಸುವ ಬಗ್ಗೆ ಮಾಹಿತಿಯನ್ನು ಪಡೆದರು. ವಿದ್ಯಾರ್ಥಿಗಳು ಪ್ರಾಧ್ಯಾಪಕರಿಗೆ ಗೌರವ ಸ್ಮರಣೆ ನೀಡಿ ವಂದಿಸಿದರು. ಅಧ್ಯಾಪಕ ವೃಂದದವರು ವಿದ್ಯಾರ್ಥಿಗಳಿಗೆ ಸ್ಮರಣಿಕೆಗಳನ್ನು ನೀಡಿ ಅಭಿನಂದಿಸಿದರು.
ದಿನವಿಡೀ ನಡೆದ ಸಂತೋಷಕೂಟದಲ್ಲಿ ಹಳೆ ವಿದ್ಯಾರ್ಥಿಗಳು ಕಾಲೇಜ್ ಆವರಣವನ್ನು ಸುತ್ತಾಡಿ, ಸಮುದ್ರ ತೀರದಲ್ಲಿ ನಡೆದು, ವಿನೋದ ಸ್ಪರ್ಧೆ ಗಳಲ್ಲಿ ಭಾಗವಹಿಸಿ, ಕಲಿಕೆಯ ದಿನಗಳನ್ನು ನೆನಪಿಸಿಕೊಳ್ಳುತ್ತಾ ಪುನರ್ಮಿಲನ ಕಾರ್ಯ ಕ್ರಮವನ್ನು ಯಶಸ್ವಿಗೊಳಿಸಿದರು. ಮುಂದಿನ ವರ್ಷಗಳಲ್ಲಿ ಮನಸ್ಸಿಗೆ ಉಲ್ಲಾಸವನ್ನು ನೀಡುವ, ಸ್ನೇಹವನ್ನು ಹೆಚ್ಚಿಸುವ ಇಂತಹ ಸಮ್ಮಿಲನ ಕಾರ್ಯಕ್ರಮಗಳು ನಡೆಯಬೇಕೆಂದು ನಿರ್ಣಯಿಸಿದರು.