ಉಡುಪಿ ವಲಯ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಸಭೆ

ಉಡುಪಿ ವಲಯ ಸರಕಾರಿ ಮತ್ತು ಅನುದಾನಿತ ಪ್ರಾಥಮಿಕ ಶಾಲೆಗಳ ಮುಖ್ಯ ಶಿಕ್ಷಕರ ಸಭೆಯು ಉಡುಪಿ ಸಂತ ಮೇರಿ ವಿದ್ಯಾ ಸಂಸ್ಥೆಯ ಸಭಾ ಭವನದಲ್ಲಿ ಜರುಗಿತು.ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಸಾ ಶಿ ಇಲಾಖಾ ಉಪನಿರ್ದೇಶಕ ಎನ್ ಎಚ್ ನಾಗೂರು ಮಾತನಾಡಿ ಇಂದು ಶಿಕ್ಷಕರು ಮಕ್ಕಳಿಗೆ ಮಾತೃ ಸಮಾನ ಸ್ಥಾನ ದಲ್ಲಿದ್ದಾರೆ. ಪ್ರತಿಯೊಬ್ಬರಿಗೂ ಮಾತೃ ಹೃದಯಬೇಕಾಗಿದೆ.ಶಿಕ್ಷಕರು ಜ್ಞಾನವನ್ನು ಬಿತ್ತುವವರಾಗಬೇಕು.

ಜ್ಞಾನ ಫಲ ಬರುವ ವರೆಗೆ ಕಾಯಬೇಕು.ಇದರಿಂದ ಸುಖಿ ಸಮಾಜ ರೂಪಿಸಲು ಸಾದ್ಯ ಎಂದರು.ಚರ್ಚ್ ನ ಸಹಾಯಕ ಧರ್ಮ ಗುರುಗಳಾದ ಅಶ್ವಿನ್ ನೋರೋನ್ನ, ಉಡುಪಿ  ಬಿ ಇ ಒ ಮಂಜುಳಾ ಕೆ ಉಪಯೋಜನಾ ಸಮನ್ವಯಾಧಿಕಾರಿ ಪ್ರಭಾಕರ ಮಿತ್ತಂತಾಯ, ಅಕ್ಷರ ದಾಸೋಹದ ಶಿಕ್ಷಣಾಧಿಕಾರಿ ಎ ಕೆ ನಾಗೇಂದ್ರಪ್ಪ, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ವಿಶ್ವನಾಥ ಬಾಯರಿ ಇಸಿಒ ಪವನ್ ಕುಮಾರ್, ಶಂಕರ್, ಸಂತ ಮೇರಿಸ್ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಹೆರಾಲ್ಡ್ ಡಿ’ ಸೋಜಾ ಉಪಸ್ಥಿತರಿದ್ದರು.

ಉಡುಪಿ ಬಿ ಅರ್ ಸಿ ಕೋ ಅರ್ಡಿನೇಟರ್ ಉಮಾ ಪಿ ಸ್ವಾಗತಿಸಿದರು. ಬಿ ಅರ್ ಪಿಯವರಾದ ನಿರ್ಮಲಾ ವಂದಿಸಿದರು. ಮೀನಾ ಕುಮಾರಿ ಕಾರ್ಯಕ್ರಮ ನಿರೂಪಿಸಿದರು. 

 
 
 
 
 
 
 
 
 
 
 

Leave a Reply