ಮೂಡುಬೆಳ್ಳೆ – ಶಿಕ್ಷಕರ ದಿನಾಚರಣೆ -ಮದರ್ ತೆರೇಸಾ ಸಂಸ್ಮರಣೆ

 ಶಿರ್ವ:-ವ್ಯಕ್ತಿಯ ಜೀವನದಲ್ಲಿ ಮೊದಲಗುರು ತಾಯಿಯೇ ಆಗಿದ್ದು, ತಾಯಿಯಿಂದ ಪಡೆದ ಸಂಸ್ಕಾರವೇ ಜೀವನಶಿಕ್ಷಣದ ಬುನಾದಿಯಾಗಿದೆ. ಭಾರತೀಯ ಸಂಸ್ಕೃತಿ ಮತ್ತು ಪರಂಪರೆಯಲ್ಲಿ ಗುರುವಿಗೆ ಮಹತ್ವದ ಪೂಜ್ಯ ಸ್ಥಾನವಿದೆ. ವ್ಯಕ್ತಿಯಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಅರಳಿಸಿ ಭವಿಷ್ಯದ ಬೆಳಕನ್ನು ತೋರಿಸುವಲ್ಲಿ ಗುರುವಿನ ಪಾತ್ರ ಅತ್ಯಂತ ಮಹತ್ವದ್ದಾಗಿದೆ. ತಾಯಿ ಮತ್ತು ಗುರುವಿನ ಋಣವನ್ನು ತೀರಿಸಲು ಸಾಧ್ಯವಿಲ್ಲ ಎಂದು ರೋಟರಿ ಜಿಲ್ಲಾ ಮಾಜಿ ಸಹಾಯಕ ಗವರ್ನರ್, ನಿವೃತ್ತ ಶಿಕ್ಷಕ ಬಿ.ಪುಂಡಲೀಕ ಮರಾಠೆ ಹೇಳಿದರು.

ಸೋಮವಾರ ಪ್ರತಿಷ್ಠಿತ ಮೂಡುಬೆಳ್ಳೆ ಲಯನ್ಸ್ ಕ್ಲಬ್ ವತಿಯಿಂದ ಲಯನ್ಸ್ ಭವನದಲ್ಲಿ ಜರುಗಿದ ಶಿಕ್ಷಕರ ದಿನಾಚರಣೆ ಮತ್ತು ಸಂತ ಮದರ್ ತೆರೇಸಾ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಸರ್ವಪಲ್ಲಿ ರಾಧಾಕೃಷ್ಣನ್ ಮತ್ತು ಮದರ್ ತೆರೇಸಾರವರ ಭಾವಚಿತ್ರಕ್ಕೆ ಹಾರಾರ್ಪಣೆ ಮಾಡುವ ಮೂಲಕ ಉದ್ಘಾಟಿಸಿ, ನಿವೃತ್ತ ಹಾಗೂ ಸೇವೆಯಲ್ಲಿರುವ 9 ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿದರು. 

ರಾಧಾಕೃಷ್ಣನ್‌ರವರು ಓರ್ವ ಶಿಕ್ಷಕರಾಗಿ,ತತ್ವಜ್ಞಾನಿಯಾಗಿ ರಾಷ್ಟçಪತಿ ಹುದ್ದೆಗೆ ಗೌರವ ತಂದುಕೊಟ್ಟ ಆದರ್ಶಶಿಕ್ಷಕ. ಮದರ್ ತೆರೇಸಾರವರೂ ಸೇವಾಕ್ಷೇತ್ರದ ಗುರುಗಳಾಗಿದ್ದು, ಸೇವೆಯ ಮೂಲಕ ವಿಶ್ವಮಾನ್ಯತೆಗೆ ಪಾತ್ರರಾಗಿ ನೊಬೆಲ್ ಶಾಂತಿ ಪುರಸ್ಕಾರದೊಂದಿಗೆ ಸಂತಪದವಿಗೆ ಏರಿದ ಮಹಾನ್ ಮಹಿಳೆ ಎಂದರು. ಲವಿನಾ ನೊರೋನ್ಹಾ ಮದರ್ ತೆರೇಸಾರವರ ಸೇವಾ ಸಾಧನೆಗಳ ಬಗ್ಗೆ ಮಾಹಿತಿ ನೀಡಿದರು. 

ಶಿಕ್ಷಕರುಗಳಾದ ಲಿಲ್ಲಿ ಲೋಬೊ, ಲವಿನಾ ನೊರೋನ್ಹಾ, ಡಾ.ಎವುಜಿನ್ ಡಿಸೋಜ, ಮೆಲ್‌ರೋಯ್ ಫೆರ್ನಾಂಡಿಸ್, ಡಾ.ಧೀರಜ್, ವನಿತಾ ನೊರೋನ್ಹ, ವೀಣಾ ಮಿನೇಜಸ್, ಎಡ್ವರ್ಡ್ ಲಾರ್ಸನ್, ಸುಜಾ ಡಿಸೋಜರವರನ್ನು ಸನ್ಮಾನಿಸಲಾಯಿತು. ಸನ್ಮಾನಿತರ ಪರವಾಗಿ ಶಿಕ್ಷಕಿ ಲಿಲ್ಲಿ ಲೋಬೊ ಮಾತನಾಡಿದರು. 

 
 
 
 
 
 
 
 
 
 
 

Leave a Reply