​ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಅಂತ ರಾಷ್ಟ್ರೀಯ ಯೋಗ ದಿನಾಚರಣೆಯನ್ನು ಗೂಗಲ್ ಮೀಟ್ ನಲ್ಲಿ  ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಕಾಲೇಜಿನ ಪ್ರಾಂಶುಪಾಲ ಡಾ​. ​ವಿನ್ಸೆಂಟ್ ಆಳ್ವರವರು  ವಹಿಸಿ ಉತ್ತಮ ಆರೋಗ್ಯಕ್ಕೆ ಯೋಗವು  ಒಳ್ಳೆಯ ಮಾರ್ಗ.  ಯಶಸ್ವಿನ ಹಾದಿಗೆ ಏಕಾಗ್ರತೆ, ಒಳ್ಳೆಯ ಆರೋಗ್ಯ ಬಹುಮುಖ್ಯ. ಇವೆಲ್ಲವೂ ಯೋಗದಿಂದ ಲಭಿಸುತ್ತದೆ.
ವಿದ್ಯಾರ್ಥಿಗಳು  ಯೋಗದಲ್ಲಿ ಒಲವನ್ನು ತೋರಿಸಿ ಸಫಲತೆಯನ್ನು ಸಾಧಿಸಬೇಕೆಂದು ತಿಳಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿ ನಮ್ಮ ಕಾಲೇಜಿನ ಹಳೆ ವಿದ್ಯಾರ್ಥಿನಿ ಹಾಗೂ  ಅಂತರಾಷ್ಟ್ರೀಯ ಮಟ್ಟದ ಯೋಗ ಸ್ಪರ್ಧೆಯ ಬಂಗಾರ ಪದಕ ವಿಜೇತೆ  ಕುಮಾರಿ ಪ್ರಗತಿಯವರು  ವಿದ್ಯಾರ್ಥಿಗಳಿಗೆ ವಿವಿಧ ರೀತಿಯ  ಯೋಗಾಸನವನ್ನು  ಮಾಡಿ ಆಸನಗಳ ವಿಶಿಷ್ಟತೆ ಹಾಗೂ  ಉಪಯೋಗಳನ್ನು ತಿಳಿಸಿದರು.
ಮನೆಯಲ್ಲಿ ಯೋಗ ಕುಟುಂಬದೊಂದಿಗೆ ಯೋಗವೆಂದು  ಹೇಳು​ತ್ತಾ ಸ್ವಯಂಸೇವಕರು ಮನೆಯಲ್ಲಿ ಕೂತು ತಮ್ಮ ಕುಟುಂಬದೊಡನೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹಲವಾರು ರೀತಿಯ ಯೋಗಾಸನದ ಬಗ್ಗೆ ತಿಳಿದುಕೊಂಡರು ಮಾತ್ರವಲ್ಲದೆ ತಾವು ಕಲಿತುಕೊಂಡ ಆಸನಗಳನ್ನು ಮಾಡಿ ಸಾಮಾಜಿಕ ತಾಣದಲ್ಲಿ ಹಂಚಿಕೊಂಡು ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಆಚರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಐ ಕ್ಯೂ ಎ ಸಿ  ಸಂಯೋಜಕರಾದ ಡಾ! ಜಯರಾಮ್ ಶೆಟ್ಟಿಗಾರ್,  ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಅನುಪಮ ಜೋಗಿ,  ಮೆಲ್ಸನ್ ಡಿಸೋಜ,   ರಾಷ್ಟ್ರೀಯ ಸೇವಾ ಯೋಜನೆಯ ನಾಯಕರು ಹಾಗೂ ಸ್ವಯಂ ಸೇವಕರು ಭಾಗವಹಿಸಿದರು.  ಕುಮಾರಿ ಐಶ್ವರ್ಯ ವಂದಿಸಿದರು.  ವಿದ್ಯಾರ್ಥಿನಿ ದಿವ್ಯ  ನಿರೂಪಿಸಿದರು.​​​​
 
 
 
 
 
 
 
 
 
 
 

Leave a Reply