ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರದಲ್ಲಿ ಜಪಾನ್ ತಂತ್ರಜ್ಣಾನದ ಮಿಯಾವಾಕಿ ಅರಣ್ಯೀಕರಣ 

ಮಿಲಾಗ್ರಿಸ್ ಕಾಲೇಜು ಕಲ್ಯಾಣಪುರ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ, ಮಿಲಾಗ್ರಿಸ್ ಪದವಿಪೂರ್ವ ಕಾಲೇಜು, ರೋಟರಿ ಕ್ಲಬ್ ಉಡುಪಿ, ಇನ್ನರ್ ವೀಲ್ ಕ್ಲಬ್ ಉಡುಪಿ, ಶ್ರೀ ಕೃಷ್ಣ ರೋಟರ‍್ಯಾಕ್ಟ್ ಕ್ಲಬ್ ಉಡುಪಿ ಇವುಗಳ ಸಹಯೋಗದಲ್ಲಿ ದಿನಾಂಕ ೨೮.೦೯.೨೦೨೧ ನೇ ಮಂಗಳವಾರದಂದು ಕಾಲೇಜಿನ ಆವರಣದಲ್ಲಿ ಮಿಯಾವಾಕಿ ವಿಧಾನದ ಅರಣ್ಯೀಕರಣ ಕಾರ‍್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಿಲಾಗ್ರಿಸ್ ವಿದ್ಯಾ ಸಂಸ್ಥೆಗಳ ಸಂಚಾಲಕರಾದ  ಫಾದರ್ ವೆಲರಿಯನ್ ಮೆಂಡೋನ್ಸಾ ಗಿಡ ನೆಡುವುದರ ಮೂಲಕ ಈ ಹೊಸ ಯೋಜನೆಗೆ ಚಾಲನೆ ನೀಡಿದರು. ಕಾರ‍್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಇವರು ನಿಸರ್ಗದ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಪ್ರಕೃತಿ ನಮ್ಮ ಜೀವನಕ್ಕಾಗಿ ಅತ್ತುತ್ತಮ ಉಡುಗೊರೆಗಳನ್ನು ನೀಡಿದ್ದು ನಾವು ಅದನ್ನು ಉತ್ತಮ ರೀತಿಯಲ್ಲಿ ಉಪಯೋಗಿಸಿಕೊಂಡು ಪ್ರಕೃತಿಯ ರಕ್ಷಣೆ ಮಾಡಬೇಕು ಅಲ್ಲದೆ ನಮ್ಮ ಮುಂದಿನ ಪೀಳಿಗೆಗೆ ಅದನ್ನು ನೀಡುವಲ್ಲಿ ನಮಗೆ ಮಹತ್ತರವಾದ ಹೊಣೆಗಾರಿಕೆ ಇದೆ. 

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ರೋಟರಿ ಕ್ಲಬ್ ನ ಅಧ್ಯಕ್ಷರಾದ ಶ್ರೀ ಮಹೇಶ್ ಶೆಣೈ ಇವರು ಪರಿಸಿರದ ಪ್ರಾಮುಖ್ಯತೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಮಿಲಾಗ್ರಿಸ್ ಪದವಿ ಕಾಲೇಜಿನ ಉಪ ಪ್ರಾಂಶುಪಾಲರಾದ ಶ್ರೀಮತಿ ಸೋಫಿಯಾ ಡಯಾಸ್, ಮಿಲಾಗ್ರಿಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸವಿತಾ ಹೆಬ್ಬಾರ್. ಕಾಲೇಜಿನ ಎನ್ ಎಸ್ ಎಸ್ ಯೋಜನಾಧಿಕಾರಿಯಾದ ಶ್ರೀಮತಿ ಅನುಪಮಾ ಜೋಗಿ, ಇನ್ನರ್ ವೀಲ್ ಕ್ಲಬ್ ಉಡುಪಿ ಇದರ ಸದಸ್ಯರು, ಶ್ರೀ ಕೃಷ್ಣ ರೋಟರ‍್ಯಾಕ್ಟ್ ಕ್ಲಬ್ ಉಡುಪಿ ನ ಸದಸ್ಯರು ಹಾಗೂ ರೋಟರಿ ಕ್ಲಬ್ ಉಡುಪಿ ಇದರ ಸದಸ್ಯರು, ಎನ್ ಎಸ್ ಎಸ್ ಸ್ವಯಂಸೇವಕರು ಈ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮಿಲಾಗ್ರಿಸ್ ಪದವಿ ಕಾಲೇಜು ಹಾಗೂ ಪದವಿ ಪೂರ್ವ ಕಾಲೇಜಿನ ಎಲ್ಲಾ ಉಪನ್ಯಾಸಕ ಮತ್ತು ಕಛೇರಿ ಸಿಬ್ಬಂದಿಗಳು ಈ ಕಾರ‍್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಸಾರ್ವಜನಿಕ ಸಂಪರ್ಕಾಧಿಕಾರಿಯಾದ ಶ್ರೀ ರವಿನಂದನ್ ಭಟ್ ನಿರೂಪಿಸಿದರು. ಮಿಯಾವಾಕಿ ಅರಣ್ಯೀಕರಣವು ಜಪಾನ್ ತಂತ್ರಜ್ಣಾನವಾಗಿದ್ದು ಇದು ಅತೀ ಕಡಿಮೆ ಜಾಗದಲ್ಲಿ ಹೆಚ್ಚೆಚ್ಚು ಗಿಡಗಳನ್ನು ನೆಡುವ ಮೂಲಕ ಒಂದು ಚಿಕ್ಕ ಮಟ್ಟಿನ ಅರಣ್ಯವನ್ನು ನಿರ್ಮಿಸುವ ವಿಧಾನವಾಗಿದೆ. ಈ ವಿಧಾನವನ್ನು ಮಿಲಾಗ್ರಿಸ್ ಕಾಲೇಜಿನಲ್ಲಿ ಪರಿಚಯಿಸುತ್ತಿದ್ದು ಕಾಲೇಜಿನ ಎನ್ ಎಸ್ ಎಸ್ ಘಟಕವು ಇದರ ಮುಂದಾಳತ್ವವನ್ನು ವಹಿಸಲಿದೆ.

 
 
 
 
 
 
 
 
 
 
 

Leave a Reply