ಹೊಸ ಕಾಲೇಜುಗಳ ಪ್ರಸ್ತಾಪಕ್ಕೆ ಅನುಮೋದನೆ   

ಮಂಗಳೂರು: 2020-2021ನೇ ಸಾಲಿಗೆ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಮಂಡಳಿಯಿಂದ ಮೂರು ನೂತನ ಕಾಲೇಜುಗಳಿಗೆ ಹೊಸ ಸಂಯೋಜನೆ ನೀಡಲಾಗಿದೆ.ಮಂಗಳವಾರ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪಿ. ಎಸ್.ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ನಡೆದ ಶೈಕ್ಷಣಿಕ ಮಂಡಳಿಯ ಸಭೆಯಲ್ಲಿ ಹೊಸ ಕಾಲೇಜುಗಳ ಪ್ರಸ್ತಾಪಕ್ಕೆ ಅನುಮೋದಿಸಿಲಾಯಿತು.

ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿ ನಲಪಾಡ್ ಕಟ್ಟಡದಲ್ಲಿ ಎ ಆಂಡ್ ಎಂ ಎಜುಕೇಶನಲ್ ಟ್ರಸ್ಟ್ ವತಿಯಿಂದ ಎ ಆಂಡ್ ಎಂ ಎಜುಕೇಶನ್ ಕಾಲೇಜ್ ಆಫ್ ಕ್ರಿಯೇಟಿವಿಟಿ ಎಂಡ್ ಟೆಕ್ನಾಲಜಿ ಎಂಬ ಕಾಲೇಜು ಪ್ರಾರಂಭವಾಗಲಿದೆ. ಹಾಗೂ ಉರ್ವಸ್ಟೋರ್ ಮೆನೇಜಸ್ ಟವರ್‍ಸ್‌ನಲ್ಲಿ ಸ್ವಸ್ತಿಕಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಸ್ತಿಕಾ ನ್ಯಾಷನಲ್ ಸ್ಕೂಲ್ ಆರಂಭವಾಗಲಿದ್ದು , ದೇರಳಕಟ್ಟೆ ಬಳಿಯ ನಾಟೆಕಲ್‌ನಲ್ಲಿ ಕುನಿಲ್ ಜಿ.ಪಿ. ಎಜುಕೇಶನ್ ಟ್ರಸ್ಟ್ ವತಿಯಿಂದ ಕುನಿಲ್ ಜಿ.ಪಿ ಕಾಲೇಜು ಶುರುವಾಗಲಿದೆ .

ಕೊರೋನಾ ಕಾರಣದಿಂದ ವಿಶ್ವವಿದ್ಯಾನಿಲಯ ವ್ಯಾಪ್ತಿಯ ಕಾಲೇಜುಗಳ ಮುಂದುವರಿಕಾ ಸಂಯೋಜನೆಯನ್ನು ಡೀಮ್ಡ್ ಆಗಿ ವಿಸ್ತರಿಸಲಾಗಿತ್ತು. ಇದೀಗ ಸಂಯೋಜನೆಗೆ ಕೋರಿಕೆ ಸಲ್ಲಿಸಿದ ಕಾಲೇಜುಗಳಿಗೆ ಮಾತ್ರ ಸ್ಥಳೀಯ ಪರಿಶೀಲನಾ ಸಮಿತಿಯನ್ನು ಕಳುಹಿಸಿ ಕೊಟ್ಟು ವರದಿಗಳನ್ನು ಸಭೆ ಪರಿಗಣಿಸಿ ಈ ಅನುಮೋದನೆ ಸಲ್ಲಿಸಿತು.

 
 
 
 
 
 
 
 
 
 
 

Leave a Reply