Janardhan Kodavoor/ Team KaravaliXpress
29.6 C
Udupi
Sunday, August 1, 2021

“ಜಾಗತಿಕ ತಾಪಮಾನ ಏರಿಕೆಯ ಕಾರಣಿಕರ್ತ ಮತ್ತು ಅಪರಾಧಿ” ಮನುಷ್ಯ – ದಿನೇಶ್ ಹೊಳ್ಳ

ಉಡುಪಿ: ದಕ್ಷಿಣ ಭಾರತ ಸಕಲ ಜೀವರಾಶಿಗಳ ಜೀವಸೆಲೆ ಪಶ್ಚಿಮ ಘಟ್ಟವಾಗಿದ್ದು, ಇಂದು ಮನುಷ್ಯನ ದುರಾಸೆಯಿಂದ ಹಾಗೂ ಪಶ್ಚಿಮ ಘಟ್ಟವನ್ನು ವ್ಯಾಪಾರಿ ಲಾಭದ ದೃಷ್ಟಿಯಿಂದ ಬಳಕೆ ಮಾಡುತ್ತಿರುವುದು ಇಂದಿನ ಪರಿಸರಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳಿಗೆ ಕಾರಣ ವಾಗಿದೆ.ಹಾಗಾಗಿ ಜಾಗತಿಕ ತಾಪಮಾನ ಏರಿಕೆಯ ಅಪರಾಧಿ ಮನುಷ್ಯನಾಗಿದ್ದಾನೆ ಎಂದು ಸಹ್ಯಾದ್ರಿ ಸಂರಕ್ಷಣಾ ಸಂಚಯದ ಮುಖ್ಯಸ್ಥರು ಹಾಗೂ ಪರಿಸರ ತಜ್ಞ /ಹೋರಾಟಗಾರ ದಿನೇಶ್ ಹೊಳ್ಳ ಹೇಳಿದರು.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಕಾಲೇಜಿನ ಎನ್.ಎಸ್.ಎಸ್.ಘಟಕದ ವತಿಯಿಂದ ಹಾಗೂ ಐ.ಕ್ಯೂ.ಎ. ಸಿ. ಸಹಯೋಗದೊಂದಿಗೆ ಆಯೋಜಿಸಿದ ವಿಶ್ವ ಪರಿಸರ ದಿನ ಆಚರಣೆಯ ಮುಖ್ಯ ಅತಿಥಿಗಳಾಗಿ ಬಾಗವಹಿಸಿ ಮಾತನಾಡುತ್ತಾ, ಇಂದಿನ ದಿನಗಳಲ್ಲಿ ಮರಗಿಡಗಳ ನಾಶ , ಅರಣ್ಯ ಒತ್ತುವರಿ, ನದಿಮೂಲಗಳ ಮೇಲೆ ಹಸ್ತಕ್ಷೇಪ, ಕಾಡುಪ್ರಾಣಿಗಳ ಹತ್ಯೆಯಂತಹಾ ಕೃತ್ಯಗಳಿಂದ ಜೀವ ವೈವಿಧ್ಯತೆಯಲ್ಲಿ ಆಹಾರ ಸರಪಳಿ ವ್ಯವಸ್ಥೆಗೆ ತೊಂದರೆ ಯಾಗಿದ್ದು, ಇದನ್ನು ಸಮರೋಪಾದಿಯಲ್ಲಿ, ಅದರಲ್ಲೂ ವಿದ್ಯಾರ್ಥಿ ಯುವ ಸಮೂಹ ಸಂಘಟಿತ ಹೋರಾಟ ದ ಮೂಲಕ ಪರಿಸರ ಸಂರಕ್ಷಣೆ ಮಾಡಬೇಕೆಂದು ಕರೆ ನೀಡಿದರು.

ಇನ್ನೋರ್ವ ಅತಿಥಿ ರಾಷ್ಟ್ರೀಯ ಪರಿಸರ ಆರೈಕೆ ಒಕ್ಕೂಟದ ಮುಖ್ಯಸ್ಥ ಶಶಿಧರ ಶೆಟ್ಟಿ, ಪರಿಸರ ಸಂರಕ್ಷಣೆಯು ಭಾರತದ ಸಂವಿಧಾನದ ಅನುಚ್ಛೇದ 48-ಎ ಅನ್ವಯ ಸರಕಾರದ ಹಾಗೂ 51-ಎ(ಜಿ)ಯ ಪ್ರಕಾರ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಡುಪಿಯ ಮಾನವ ಹಕ್ಕುಗಳ ಸಂರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಮಾತನಾಡಿ ನ್ಯಾಯಾಲಯದ ಎಲ್ಲಾ ಪ್ರಕರಣಗಳಲ್ಲಿ ನ್ಯಾಯಾಧೀಶರು ತೀರ್ಪನ್ನು ನೀಡಿರುತ್ತಾರೆ.ಆದರೆ ಈ ಎಲ್ಲಾ ತೀರ್ಪುಗಳು ನ್ಯಾಯಪರ ವಾಗಿರಬೇಕೆಂದೇನೂ ಇಲ್ಲ, ಆದ್ದರಿಂದ ಕಾನೂನು ವಿದ್ಯಾರ್ಥಿಗಳು ತಮ್ಮ ಕಾನೂನು ಜ್ಞಾನದ ಉಪಯೋಗದಿಂದ ಪರಿಸರ ಸಂರಕ್ಷಣೆಗೆ ಹಾಗೂ ಮಾನವ ಹಕ್ಕುಗಳ ಬಗ್ಗೆ ಹೋರಾಟ ಮಾಡಬೇಕೆಂದು ಹೇಳಿದರು.

ಕಾನೂನು ಕಾಲೇಜಿನ ಪ್ರಾಂಶುಪಾಲೆ ಡಾ. ನಿರ್ಮಲ ಕುಮಾರಿ ಸ್ವಾಗತಿಸಿದರು. ಪ್ರಾಧ್ಯಾಪಕ ಶ್ರೀ ನವೀನ್ ಚಂದ್ರ ಅತಿಥಿಗಳನ್ನು ಪರಿಚಯಿಸಿದರು ಕಾಲೇಜಿನ ಎನ್.ಎಸ್.ಎಸ್.ಘಟಕದ ಸಂಯೋಜನಾಧಿಕಾರಿ ಸುರೇಖಾ ವಂದಿಸಿ, ವಿದ್ಯಾರ್ಥಿನಿ ಹರ್ಷಿತಾ ತುಂಗೇಶ್ ನಿರೂಪಿಸಿದರು.

- Advertisement -

ಸಂಬಂಧಿತ ಸುದ್ದಿ

Leave a Reply

ಸುಪ್ರಭಾತ

ಛಾಯಾಂಕಣ

ಇತ್ತೀಚಿನ ಸುದ್ದಿ

error: Content is protected !!