ಕುವೆಂಪು ಶತಮಾನೋತ್ಸವ ಶಾಲೆ ತೆಕ್ಕಟ್ಟೆಗೆ ಶಿಕ್ಷಣ ಅಭಿಯಾನದ ಉಪ ಯೋಜನಾ ಸಮನ್ವಯಾಧಿಕಾರಿ ಭೇಟಿ

ಕುಂದಾಪುರ: ಕುವೆಂಪು ಶತಮಾನೋತ್ಸವ ಶಾಲೆ ತೆಕ್ಕಟ್ಟೆಗೆ ಇಂದು ಉಡುಪಿ ಜಿಲ್ಲೆಯ ಸಮಗ್ರ ಶಿಕ್ಷಣ ಅಭಿಯಾನದ ಉಪ ಯೋಜನಾ ಸಮನ್ವಯಾಧಿಕಾರಿ ಪ್ರಭಾಕರ ಮಿತ್ಯಂತ ಭೇಟಿ ನೀಡಿದರು.

ಶಾಲೆಯಲ್ಲಿ ಹಮ್ಮಿಕೊಂಡ ಶೈಕ್ಷಣಿಕ ಚಟುವಟಿಕೆಗಳನ್ನು ಮೆಚ್ಚಿಕೊಂಡು, 2021-22 ರ ಸಾಲಿನಲ್ಲಿ ಶಾಲೆಯ ಮಕ್ಕಳ ಸಂಖ್ಯೆ 750 ದಾಟಿರುವುದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

ಈ ಶಾಲಾ ವರ್ಷದಲ್ಲಿ ಹೊಸ ದಾಖಲಾತಿ 200 ದಾಟಿದ್ದು ಕಳೆದ ನೂರು ವರ್ಷಗಳ ಶಾಲಾ ಇತಿಹಾಸದಲ್ಲೇ ಒಂದೇ ಶೈಕ್ಷಣಿಕ ವರ್ಷದಲ್ಲಿ ಇಷ್ಟೊಂದು ಮಕ್ಕಳು ದಾಖಲಾದ ನಿದರ್ಶನಗಳಿಲ್ಲದ್ದರಿಂದ,ಈ ವರ್ಷದ ದಾಖಲೆಯ ದಾಖಲಾತಿಗಾಗಿ ಅಧ್ಯಾಪಕ ವ್ರಂದದವರಿಗೆ ,ಎಸ್.ಡಿ.ಎಂಸಿ.ಯವರಿಗೆ ಅಭಿನಂದನೆ ಹೇಳಿದರು.

ಶಾಲೆಯ ಎಲ್ಲಾ 752 ವಿದ್ಯಾರ್ಥಿಗಳು, ಅಥವಾ ಅವರ ಪೋಷಕರು ಮೊಬೈಲ್ ಹೊಂದಿರುವದಕ್ಕೆ ಪೋಷಕರಿಗೆ ಅಭಿನಂದನೆ ತಿಳಿಸಿದರು.ಶಾಲೆಯ ಅಧ್ಯಾಪಕರುಗಳು ಉಪಸ್ಥಿತರಿದ್ದರು.

 
 
 
 
 
 
 
 
 
 
 

Leave a Reply