“ಗ್ರಾಹಕರು ಜಾಹೀರಾತುಗಳಿಗೆ ಮಾರು ಹೋಗದೆ ದಿನನಿತ್ಯ ಬಳಸುವ ವಸ್ತುಗಳ ಖರೀದಿಯ ಸಮಯದಲ್ಲಿ ಎಚ್ಚರಿಕೆ ವಹಿಸ ಬೇಕು~ಶಾಂತರಾಜ್ ಐತಾಳ್

ಉಡುಪಿ: :ಯು. ಕಮಲಾ ಬಾಯಿ ಪ್ರೌಢಶಾಲೆ, ಕಡಿಯಾಳಿಯಲ್ಲಿ ಗ್ರಾಹಕ ಜಾಗೃತಿ ಮತ್ತು ಆಂದೋಲನ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಎ. ಪಿ. ಕೊಡಂಚ ಸಂಚಾಲಕರು, ಬಳಕೆದಾರರ ವೇದಿಕೆ ಇವರು ನೆರವೇರಿಸಿ “ವಸ್ತುಗಳನ್ನು ಖರೀದಿ ಸುವಲ್ಲಿ ಗ್ರಾಹಕರ ಪಾತ್ರ ಹಾಗೂ ಕಾನೂನಿನ ಅರಿವು ಅಗತ್ಯ” ಎಂದು ನುಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಶ್ರೀ ಶಾಂತರಾಜ್ ಐತಾಳ್ “ಗ್ರಾಹಕರು ಜಾಹೀರಾತು ಗಳಿಗೆ ಮಾರು ಹೋಗದೆ ದಿನನಿತ್ಯ ಬಳಸುವ ವಸ್ತುಗಳ ಖರೀದಿಯ ಸಮಯದಲ್ಲಿ ವಹಿಸಬೇಕಾದ ಎಚ್ಚರಿಕೆಯ ಅರಿವನ್ನು ಮೂಡಿಸಿದರು.
ಕಾರ್ಯಕ್ರಮದಲ್ಲಿ ಕಡಿಯಾಳಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾದ ಶ್ರೀ ವಿಠ್ಠಲ ಗಿರಿರಾವ್ ಉಪಸ್ಥಿತರಿದ್ದರು. ಹಿರಿಯ ಶಿಕ್ಷಕರಾದ ಶ್ರೀ ಸುದರ್ಶನ್ ನಾಯಕ್ ಸ್ವಾಗತಿಸಿ, ಶಿಕ್ಷಕರಾದ ಶ್ರೀ ಜಗದೀಶ ನಾಯ್ಕ್ ವಂದಿಸಿದರು. ಶಿಕ್ಷಕ ಶ್ರೀ ದೇವೇಂದ್ರನಾಯ್ಕ್ ನಿರೂಪಿಸಿದರು.
 
 
 
 
 
 
 
 
 

Leave a Reply