ಕಾಬೆಟ್ಟು ಸರಕಾರಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಟ್ಯಾಬ್ ವಿತರಣೆ.

ರೋಟರಿ ಕಾರ್ಕಳ ರಾಕ್ ಸಿಟಿ ಮತ್ತು ದಾನಿಗಳ ನೆರವಿನಿಂದ ಕಾರ್ಕಳದ ಕಾಬೆಟ್ಟು ಸರಕಾರಿ ಪ್ರೌಢಶಾಲೆಯ ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡುವ ತಲಾ 3,500 ರೂ. ಬೆಲೆಯ 16 ಟ್ಯಾಬ್ ಗಳನ್ನು ಹಸ್ತಾಂತರ ಮಾಡುವ ಕಾರ್ಯಕ್ರಮವು ಶಾಲೆಯ ಸಭಾಂಗಣದಲ್ಲಿ ನಡೆಯಿತು.

ರೋಟರಿ ಪೂರ್ವ ಗವರ್ನರ್ ಡಾಕ್ಟರ್ ಭರತೇಶ ಅವರು ಟ್ಯಾಬ್ ಗಳನ್ನು ವಿತರಣೆ ಮಾಡಿ ಮಾತನಾಡಿ ಸರಕಾರಿ ಕನ್ನಡ ಮಾಧ್ಯಮ ಶಾಲೆಗಳ ವಿದ್ಯಾರ್ಥಿಗಳಿಗೆ ಸೂಕ್ತವಾದ ಬೆಂಬಲ ಮತ್ತು ಪ್ರೋತ್ಸಾಹ ದೊರೆತರೆ ಅವರು ಶ್ರೇಷ್ಟ ಸಾಧನೆ ಮಾಡಲು ಸಾಧ್ಯ ಆಗುತ್ತದೆ.

ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಸಹಕಾರಿ ಆಗುವ ಯಾವುದೇ ಯೋಜನೆಯನ್ನು ರೋಟರಿ ಸಂಸ್ಥೆಯು ಹೆಮ್ಮೆಯಿಂದ ಬೆಂಬಲಿಸುತ್ತದೆ ಎಂದರು. ರೋಟರಿ ರಾಕ್ ಸಿಟಿ ಅಧ್ಯಕ್ಷ ಪ್ರಶಾಂತ್ ಬೆಳಿರಾಯ ಅವರು ಅಧ್ಯಕ್ಷತೆ ವಹಿಸಿದ್ದರು.

ಕಾಬೆಟ್ಟು ಪ್ರಾಥಮಿಕ ಶಾಲೆಯ ಶತಮಾನೋತ್ಸವ ಸಮಿತಿಯ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ, ಪುರಸಭೆಯ ಸದಸ್ಯೆ ಪ್ರಭಾ ಕಿಶೋರ್, ಎಸ್.ಡಿ.ಎಂ.ಸಿ. ಅಧ್ಯಕ್ಷೆ ಮಮತಾ, ಸಾಮಾಜಿಕ ಕಾರ್ಯಕರ್ತರಾದ ಪ್ರೇಮಾನಂದ ಪೈ, ವೈಕುಂಠ ಶೆಣೈ, ಪ್ರಧಾನ್ ಮಾಬಿಯಾನ್, ಕಮಲಾಕ್ಷ ಮೊಯ್ಲಿ, ನಿವೃತ್ತ ಶಿಕ್ಷಕಿ ವಸಂತಿ, ಹಿರಿಯ ಶಿಕ್ಷಕಿ ಸುಲೋಚನಾ, ರೋಟರಿ ಪೂರ್ವ ಅಧ್ಯಕ್ಷ ಸುರೇಂದ್ರ ನಾಯಕ್ ಮೊದಲಾದವರು ಹಾಜರಿದ್ದು ಕಾರ್ಯಕ್ರಮಕ್ಕೆ ಶುಭ ಕೋರಿದರು.

ಮುಖ್ಯ ಶಿಕ್ಷಕಿ ಇಂದಿರಾ ಸ್ವಾಗತ ಮಾಡಿದರು. ಶಿಕ್ಷಕಿ ಸುನೀತ ನಾಯಕ್ ನಿರೂಪಣೆ ಮಾಡಿದ ಕಾರ್ಯಕ್ರಮದಲ್ಲಿ ಶಕುಂತಳಾ ರಾವ್ ಧನ್ಯವಾದ ನೀಡಿದರು.

 
 
 
 
 
 
 
 
 
 
 

Leave a Reply