ಎಸ್.ವಿ.ಎಚ್. ಕನ್ನಡ ಮಾಧ್ಯಮ ಪ್ರೌಢಶಾಲೆ ಇನ್ನಂಜೆ~ದೂರದರ್ಶನ  ಹಸ್ತಾಂತರ 

ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಮಲ್ಲಿಕಾ ಎಂಬವಿದ್ಯಾರ್ಥಿನಿಗೆ ವಿದ್ಯಾಗಮ ಸಂವೇದ ದೂರದರ್ಶನ ಆಧಾರಿತ ಕಲಿಕಾ ಕಾರ‍್ಯಕ್ರಮದ ಸದುಪಯೋಗ ಪಡೆಯುವ  ಉದ್ದೇಶದಿಂದ ಹೊಸ ದೂರದರ್ಶನವನ್ನು ಹಸ್ತಾಂತರಿಸಲಾಯಿತು.  ದಿ/ಸುಬ್ರಹ್ಮಣ್ಯ ರಾವ್ ರವರ ನೆನಪಿಗಾಗಿ ಅವರ ಮಗ ಸಂಪತ್ ಎಸ್. ರಾವ್ ಈ ಕೊಡುಗೆಯನ್ನು ನೀಡಿದರು.

ಈ ಸಂದರ್ಭದಲ್ಲಿ  ಪ್ರೇಮ ರಾವ್, ಅತಿಥಿಗಳಾಗಿ ಸಮಾಜ ಸೇವಕರಾದ ಲೀಲಾಧರ ಶೆಟ್ಟಿ, ಶ್ಯಾಮರಾಯ ಆಚಾರ‍್ಯ, ಶಾಲಾ ಮುಖ್ಯೋಪಾಧ್ಯಾಯ ನಟರಾಜ ಉಪಾಧ್ಯ ಹಾಗು ಶಿಕ್ಷಕರು ಉಪಸ್ಥಿತರಿದ್ದರು. ಕುಮಾರಿ ಮಲ್ಲಿಕಾ ಧನ್ಯವಾದವಿತ್ತರು. ಅನಿತಾ ವೀರ ಮಥಾಯಸ್ ನಿರೂಪಿಸಿದರು.

Leave a Reply