ಹಣಕಾಸು ಯೋಜನೆ ಮತ್ತು ಹೂಡಿಕೆ ನಿರ್ವಹಣೆ ಕಾರ್ಯಾಗಾರ

ಉಡುಪಿ : ಪಿ. ಐ. ಎಂ ನಲ್ಲಿ ಹಣಕಾಸು ಯೋಜನೆ ಹಾಗೂ ಹೂಡಿಕೆ ನಿರ್ವಹಣೆ ಕಾರ್ಯಾಗಾರ ದಕ್ಷ ಹಣಕಾಸು ಯೋಜನೆ ನ್ಯಾಯಯುತ ಸಂಪಾದನೆ ಹಾಗೂ ಪ್ರಗತಿಯ ಕೀಲಿಕೈಯಾಗಿದೆ. ಸಂಪತ್ತನ್ನು ಸೃಷ್ಟಿಸಲ್ಲು ಶೇರು ಮಾರುಕಟ್ಟೆಯಲ್ಲಿ ದೀರ್ಘಾವಧಿಯ ಹೂಡಿಕೆ ಅತ್ಯಗತ್ಯ. ಶೇರು ಮಾರುಕಟ್ಟೆಯಲ್ಲಿ ಟ್ರೇಡಿಂಗ್ ಮೂಲಕ ಶೀರ್ಘ ಧನ ಸಂಪಾದನೆ ಮಾಡುವ ಇರಾದೆಯನ್ನು ಹೊಂದಿದ ಜನರು ವಿಫಲರಾಗುವ ಸಾಧ್ಯತೆಗಳು ಜಾಸ್ತಿ. ಮಾರುಕಟ್ಟೆಯ ಚಲನೆಯ ಬಗ್ಗೆ ಸೂಕ್ತ ಜ್ಞಾನದ ಕೊರತೆಯಿಂದ ಸಾಮಾನ್ಯರು ಹಣವನ್ನು ಕಳೆದುಕೊಳ್ಳುತ್ತಾರೆ. 

ಕೇವಲ ಟೆಕ್ನಿಕಲ್ ಅನಾಲಿಸಿಸ್‌ನಿಂದ (ತಾಂತ್ರಿಕ ವಿಶ್ಲೇಷಣೆ) ಹೂಡಿಕೆ ಜಗತ್ತಿನಲ್ಲಿ ಯಶಸ್ಸು ಸಿಗುವುದಿಲ್ಲ. ಷೇರು ಮಾರುಕಟ್ಟೆಯಲ್ಲಿ ಮತ್ತು ಮ್ಯೂಚುವಲ್ ಫಂಡ್‌ಗಳಲ್ಲಿ ಧೀರ್ಘಕಾಲಿಕ ಹೂಡಿಕೆ ಮಾಡುವುದರಿಂದ ಬ್ಯಾಂಕುಗಳಲ್ಲಿ ಹಣ ಇಡುವುದಕ್ಕಿಂತ ಉತ್ತಮ ಲಾಭವನ್ನು ಪಡೆಯಬಹುವುದು ಎಂದು ಪ್ರೀಮಿಯರ್ ಇನ್ವೆಷ್ಟ್ ಮೆಂಟ್, ಉಡುಪಿ ಇದರ ನಿರ್ದೇಶಕ ಹರೀಶ್ ಬಿ ಅಭಿಪ್ರಾಯಪಟ್ಟರು. ಪೂರ್ಣಪ್ರಜ್ಞ ಇನ್ಸಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್‌ನ ವಿತ್ತ ವಿಭಾಗ ಆಯೋಜಿಸಿದ ಹಣಕಾಸು ಯೋಜನೆ ಮತ್ತು ಹೂಡಿಕೆ ನಿರ್ವಹಣೆ ಕಾರ್ಯಾಗಾರದಲ್ಲಿ ಎಂ.ಬಿ.ಎ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು. 

ಸಂಸ್ಥೆಯ ನಿರ್ದೇಶಕ ಡಾ. ಭರತ್ ವಿ ಅಧ್ಯಕ್ಷತೆ ವಹಿಸಿದ್ದ ಈ ಸಾಂಸ್ಥಿಕ ಸಂವಾದಾತ್ಮಕ ಅಧಿವೇಶನದಲ್ಲಿ ಎಲ್ಲಾ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿ ಸಂವಾದ ನಡೆಸಿದರು. ವಿತ್ತ ವಿಭಾಗದ ಸಂಯೋಜಕಿ ಡಾ. ಭಾರತಿ ಕಾರಂತ್ ಸಂಯೋಜಿಸಿದ ಕಾರ್ಯಕ್ರಮವನ್ನು ವಿದ್ಯಾರ್ಥಿನಿಯರಾದ ವಿಯೋಲಿನ್, ಹೇಸಲ್, ಸುಷ್ಮಾ ಹಾಗೂ ಟೀನಾ ನಿರ್ವಹಿಸಿದರು.

 
 
 
 
 
 
 
 
 
 
 

Leave a Reply